Nojoto: Largest Storytelling Platform

ಮುದಿ.. ಕವಿ ಅವನೊಬ್ಬ ಮುಪ್ಪಿನಲ್ಲಿ ರೆಪ್ಪೆಯಾದವನು ಮುದ

ಮುದಿ.. ಕವಿ 

ಅವನೊಬ್ಬ  ಮುಪ್ಪಿನಲ್ಲಿ ರೆಪ್ಪೆಯಾದವನು
ಮುದುಕಿಯ ಮೌನವ ಒಡೆಯುವವನೂ 
ಕವಿತ್ವದಲ್ಲಿ  ಚಿಗುರುವವನು 

ಒಡೆದ ಇಮ್ಮಡಿಯಲ್ಲಿ ನಡೆದು ಬದುಕು ಹೆಣೆದವನು 
ಪ್ರಾಸಗಳು ಅದೆಷ್ಟೋ ಅವಳು ಮುನಿದಾಗ 
ಹಾಗೇ ಗಾಳಿಗೆ ಕೇಳಿಸಿದವವನು 

ಅಕ್ಷರಗಳ ಗೋಜೇ  ಇಲ್ಲದವನು 
ಮಾತು ಮಾತಿಗೆ ಪದ ಕಟ್ಟಿದ 
ಮುದುಕಿಯ ಬಾಳ ಕವಿಯವನು 
ಕವಿತ್ವದಲ್ಲಿ ಚಿಗುರುವವನು 

ಮುದಿಯಲ್ಲೂ ಮೆರುಗನ್ನು ಹುಟ್ಟು ಹಾಕಲು 
ಖಾಲಿ ಕುರ್ಚಿಯಲ್ಲಿ ಕೂತು ಕವಿಯಾದವನು 
ಬಾಗಿದ ಬೆನ್ನನ್ನು ಕುರ್ಚಿಗೆ ಅಂಟಿಸಿಕೊಂಡು 
ಗತ್ತು ತೋರಿಸುವವನು 

ಮುದಿ ರೆಂಬೆಯ ಮಾತಿಗೆ ಕಿವಿ ಕೊಡುತ್ತಾ 
ದಿನ ಕಳೆಯುವ ಗೀಳಿಗೆ ಮುದಿಗೊಂಬೆಯ 
ಮುಂದೆ ಕವಿತ್ವದಲ್ಲಿ ಚಿಗುರುವವನು

©ದೇವ ದೋಮಯ್ಯ
  #kannada #lannadaquotes
#kannadawritings