Nojoto: Largest Storytelling Platform

** ಆಗಸ ಅಂಬರ ** --------------------------- ಶುರುವಾಯ

** ಆಗಸ ಅಂಬರ **
---------------------------
ಶುರುವಾಯ್ತು ಬೆಳಗು ಮುಂಜಾವು
ಹೆಗಲನೇರಿದ ರವಿಯು
ಹೊತ್ತಿಹನು ದಿನದ ನೇಗಿಲನು
ಮುಗಿಲ ಮಾನಸಕೆ ಬಣ್ಣವೆರಚುತ
ಮೂಡಿ ಬರುತಿಹನು ಇಳೆಯೆಡೆಗೆ
ಜಗದ ಜಗುಲಿಯು ಕಾದಿಹುದು
ಅವನ ಆಡಂಬರದ ಆಗಮನಕೆ
ಬೆಳ್ಳಿಯ ಒಂಟಿ ಕಿರಣ ತಾಗಿದಾಕ್ಷಣ
ಇಂಚಿಂಚು ಹೊಸಹುರುಪಿನ ಪಸರಣ
ಬೇಗುದಿಯ ಮನಕ್ಕೆಲ್ಲ ತನ್ನಿರುವಿಕೆಯ
ಅಚ್ಚೊತ್ತಲು ಬಂದು ಧರಣಿಯ ನಾಚಿಸಿಹನು
ತಣ್ಣನೆಯ ತಂಬೆಳಕ ತನ್ನೀಯವ ನೀಡಿ
ನವೋಲ್ಲಾಸದಿ ನಭೋಮಂಡಲವ ರಂಗೇರಿಸಿಹನು. #ಸೂರ್ಯೋದಯ #ಮುಂಜಾವು #sunrise #yqquotes #yqkannadaquotes #krantadarshi kanti
** ಆಗಸ ಅಂಬರ **
---------------------------
ಶುರುವಾಯ್ತು ಬೆಳಗು ಮುಂಜಾವು
ಹೆಗಲನೇರಿದ ರವಿಯು
ಹೊತ್ತಿಹನು ದಿನದ ನೇಗಿಲನು
ಮುಗಿಲ ಮಾನಸಕೆ ಬಣ್ಣವೆರಚುತ
ಮೂಡಿ ಬರುತಿಹನು ಇಳೆಯೆಡೆಗೆ
ಜಗದ ಜಗುಲಿಯು ಕಾದಿಹುದು
ಅವನ ಆಡಂಬರದ ಆಗಮನಕೆ
ಬೆಳ್ಳಿಯ ಒಂಟಿ ಕಿರಣ ತಾಗಿದಾಕ್ಷಣ
ಇಂಚಿಂಚು ಹೊಸಹುರುಪಿನ ಪಸರಣ
ಬೇಗುದಿಯ ಮನಕ್ಕೆಲ್ಲ ತನ್ನಿರುವಿಕೆಯ
ಅಚ್ಚೊತ್ತಲು ಬಂದು ಧರಣಿಯ ನಾಚಿಸಿಹನು
ತಣ್ಣನೆಯ ತಂಬೆಳಕ ತನ್ನೀಯವ ನೀಡಿ
ನವೋಲ್ಲಾಸದಿ ನಭೋಮಂಡಲವ ರಂಗೇರಿಸಿಹನು. #ಸೂರ್ಯೋದಯ #ಮುಂಜಾವು #sunrise #yqquotes #yqkannadaquotes #krantadarshi kanti

#ಸೂರ್ಯೋದಯ #ಮುಂಜಾವು #Sunrise #yqquotes #yqkannadaquotes #krantadarshi kanti