Nojoto: Largest Storytelling Platform

ಸಮಯ... ಈ ಸಮಯ ಎಷ್ಟೊಂದು ವಿಚಿತ್ರ. ಈ ಸಮಯ ಯಾಕೆ ಓಡುತ್ತ

ಸಮಯ... 
ಈ ಸಮಯ ಎಷ್ಟೊಂದು ವಿಚಿತ್ರ. 
ಈ ಸಮಯ ಯಾಕೆ ಓಡುತ್ತೆ, ಹೇಗೆ ಓಡುತ್ತೆ, ಹೇಗೆ ಬದಲಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸಮಯದ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ, ಆ ಸಮಯವೂ ಕಳೆದು ಹೋಗಿರುತ್ತದೆ. 
ಈ ಸಮಯದ ಬಗ್ಗೆ ಯಾರಿಗೂ ತಿಳಿದಿಲ್ಲ, ತಿಳಿಯೋಕು ಆಗೋದಿಲ್ಲ ಬಿಡಿ. 
ಹುಟ್ಟಿದಾಗ ಏನೂ ತಿಳಿಯದವರಾಗಿದ್ದ ನಮಗೆ, ಸಮಯ ಕಳೆದಂತೆ ಸ್ವಲ್ಪ ಬುದ್ದಿ ಬರಲು ಶುರುವಾಗುತ್ತದೆ. ಆಗ ಸ್ನೇಹಿತರೊಡನೆ ಆಟ ಪಾಠ ಇದೆ ಮಾಡುತ್ತಾ ಇರುತ್ತೇವೆ. ಆಗ ಈ ಸ್ನೇಹಿತರ ಬಗ್ಗೆ, ಸ್ನೇಹದ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ. ಬರೀ ಆಟ ಆಡುವುದು ಮಾತ್ರ ಮುಖ್ಯವಾಗಿರುತ್ತದೆ. 
ಆ ಸಮಯ ಕಳೆಯುತ್ತ ಶಾಲೆ ಶುರುವಾಗುತ್ತೆ. ಆಗ ಓದುವುದು ಆಡುವುದು ಅಷ್ಟೇ ಸಾಕಾಗಿರುತ್ತದೆ. ಶಾಲೆಯಲ್ಲಿ ಕಲಿಯುವಾಗ ಆಡಿದ ಆಟ, ಕಲಿತ ಪಾಠ, ಮೋಜು ಇದು ಯಾವುದರ ಬಗ್ಗೆಯೂ ಏನು ಅನಿಸುವುದಿಲ್ಲ ಆ ಸಮಯಕ್ಕೆ. ಆ ಆಟ, ಪಾಠ ಇದೆಲ್ಲ ಮುಖ್ಯ ಅನಿಸುವುದು, ಮತ್ತೆ ಈ ಸಮಯ ಮತ್ತೆ ಬರಬೇಕು ಅಂತ ಅನಿಸುವುದು ಆ ಸಮಯ ಮುಗಿದ ಮೇಲೆಯೇ ಅಂದರೆ ಕಾಲೇಜು ಸಮಯದಲ್ಲಿ. 
ಶಾಲೆಯ ಸಮಯದಲ್ಲಿ, ಕಾಲೇಜಿನ ದಿನಗಳು ತುಂಬಾ ಚೆನ್ನಾಗಿರುತ್ತದೆ, ಹಾಗೆ ಎಂಜಾಯ್ ಮಾಡಬಹುದು, ಈ ರೀತಿ ಮಾಡಬಹುದು ಎಂದೆಲ್ಲ ಯೋಚಿಸುತ್ತಾ ಇರುತ್ತೇವೆ. ಕಾಲೇಜು ಮುಗಿದ ಮೇಲೆ ಕೆಲಸಕ್ಕೆ ಸೇರಿ ಇನ್ನೂ ಆರಾಮ್ ಆಗಿ ಇರಬಹುದು ಅಂತ ಅನಿಸುತ್ತದೆ. ಆದರೆ ಒಂದೊಂದೇ ಮೆಟ್ಟಿಲು ಏರಿದ ಮೇಲೆಯೇ ಗೊತ್ತಾಗುತ್ತೆ ಮೊದಲ ಮೆಟ್ಟಿಲ ಮಹತ್ವ. ಆದರೆ ಆ ಹಿಂದಿನ ಮೆಟ್ಟಿಲ ಮತ್ತೆ ಹತ್ತಲು ಸಾಧ್ಯವಾಗುವುದಿಲ್ಲ. ಈ ಸಮಯ ಬಿಡುವುದು ಇಲ್ಲ. 
ಈ ಶಾಲೆ, ಕಾಲೇಜುಗಳಲ್ಲಿ ಸಿಕ್ಕಂತ ಗೆಳೆಯರು, ಪಡೆದ ಸಂತೋಷ, ಅನುಭವ, ಮುಂದೆ ಎಂದು ಸಿಗುವುದಿಲ್ಲ. ಶಾಲೆಯ ಸಮಯದಲ್ಲಿ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಆದರೆ ಖುಷಿಗೆ ಏನು ಕಡಿಮೆ ಇರಲಿಲ್ಲ. ಗೆಳೆಯರೊಡನೆ ಆಡಿದ ಆಟ, ಅನುಭವಿಸಿದ ಸಂತೋಷ, ಪಡೆದ ಅನುಭವ ಇವೆಲ್ಲ ಕೆಲಸಕ್ಕೆ ಸೇರಿ ಎಷ್ಟೇ ಹಣ ಸಂಪಾದಿಸಿದರೂ ಸಿಗುವುದಿಲ್ಲ.

ಈ ಸಮಯ ಎಷ್ಟೊಂದು ವಿಚಿತ್ರ. ಈ ಸಮಯ ಯಾಕೆ ಓಡುತ್ತೆ, ಹೇಗೆ ಓಡುತ್ತೆ, ಹೇಗೆ ಬದಲಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಸಮಯದ ಬಗ್ಗೆ ತಿಳಿದುಕೊಳ್ಳಬೇಕು ಅಂತ ಅಂದುಕೊಳ್ಳುವಷ್ಟರಲ್ಲಿ, ಆ ಸಮಯವೂ ಕಳೆದು ಹೋಗಿರುತ್ತದೆ. ಈ ಸಮಯದ ಬಗ್ಗೆ ಯಾರಿಗೂ ತಿಳಿದಿಲ್ಲ, ತಿಳಿಯೋಕು ಆಗೋದಿಲ್ಲ ಬಿಡಿ. ಹುಟ್ಟಿದಾಗ ಏನೂ ತಿಳಿಯದವರಾಗಿದ್ದ ನಮಗೆ, ಸಮಯ ಕಳೆದಂತೆ ಸ್ವಲ್ಪ ಬುದ್ದಿ ಬರಲು ಶುರುವಾಗುತ್ತದೆ. ಆಗ ಸ್ನೇಹಿತರೊಡನೆ ಆಟ ಪಾಠ ಇದೆ ಮಾಡುತ್ತಾ ಇರುತ್ತೇವೆ. ಆಗ ಈ ಸ್ನೇಹಿತರ ಬಗ್ಗೆ, ಸ್ನೇಹದ ಬಗ್ಗೆ ಅಷ್ಟೊಂದು ತಿಳಿದಿರುವುದಿಲ್ಲ. ಬರೀ ಆಟ ಆಡುವುದು ಮಾತ್ರ ಮುಖ್ಯವಾಗಿರುತ್ತದೆ. ಆ ಸಮಯ ಕಳೆಯುತ್ತ ಶಾಲೆ ಶುರುವಾಗುತ್ತೆ. ಆಗ ಓದುವುದು ಆಡುವುದು ಅಷ್ಟೇ ಸಾಕಾಗಿರುತ್ತದೆ. ಶಾಲೆಯಲ್ಲಿ ಕಲಿಯುವಾಗ ಆಡಿದ ಆಟ, ಕಲಿತ ಪಾಠ, ಮೋಜು ಇದು ಯಾವುದರ ಬಗ್ಗೆಯೂ ಏನು ಅನಿಸುವುದಿಲ್ಲ ಆ ಸಮಯಕ್ಕೆ. ಆ ಆಟ, ಪಾಠ ಇದೆಲ್ಲ ಮುಖ್ಯ ಅನಿಸುವುದು, ಮತ್ತೆ ಈ ಸಮಯ ಮತ್ತೆ ಬರಬೇಕು ಅಂತ ಅನಿಸುವುದು ಆ ಸಮಯ ಮುಗಿದ ಮೇಲೆಯೇ ಅಂದರೆ ಕಾಲೇಜು ಸಮಯದಲ್ಲಿ. ಶಾಲೆಯ ಸಮಯದಲ್ಲಿ, ಕಾಲೇಜಿನ ದಿನಗಳು ತುಂಬಾ ಚೆನ್ನಾಗಿರುತ್ತದೆ, ಹಾಗೆ ಎಂಜಾಯ್ ಮಾಡಬಹುದು, ಈ ರೀತಿ ಮಾಡಬಹುದು ಎಂದೆಲ್ಲ ಯೋಚಿಸುತ್ತಾ ಇರುತ್ತೇವೆ. ಕಾಲೇಜು ಮುಗಿದ ಮೇಲೆ ಕೆಲಸಕ್ಕೆ ಸೇರಿ ಇನ್ನೂ ಆರಾಮ್ ಆಗಿ ಇರಬಹುದು ಅಂತ ಅನಿಸುತ್ತದೆ. ಆದರೆ ಒಂದೊಂದೇ ಮೆಟ್ಟಿಲು ಏರಿದ ಮೇಲೆಯೇ ಗೊತ್ತಾಗುತ್ತೆ ಮೊದಲ ಮೆಟ್ಟಿಲ ಮಹತ್ವ. ಆದರೆ ಆ ಹಿಂದಿನ ಮೆಟ್ಟಿಲ ಮತ್ತೆ ಹತ್ತಲು ಸಾಧ್ಯವಾಗುವುದಿಲ್ಲ. ಈ ಸಮಯ ಬಿಡುವುದು ಇಲ್ಲ. ಈ ಶಾಲೆ, ಕಾಲೇಜುಗಳಲ್ಲಿ ಸಿಕ್ಕಂತ ಗೆಳೆಯರು, ಪಡೆದ ಸಂತೋಷ, ಅನುಭವ, ಮುಂದೆ ಎಂದು ಸಿಗುವುದಿಲ್ಲ. ಶಾಲೆಯ ಸಮಯದಲ್ಲಿ ಕೈಯಲ್ಲಿ ಹಣ ಇರುತ್ತಿರಲಿಲ್ಲ. ಆದರೆ ಖುಷಿಗೆ ಏನು ಕಡಿಮೆ ಇರಲಿಲ್ಲ. ಗೆಳೆಯರೊಡನೆ ಆಡಿದ ಆಟ, ಅನುಭವಿಸಿದ ಸಂತೋಷ, ಪಡೆದ ಅನುಭವ ಇವೆಲ್ಲ ಕೆಲಸಕ್ಕೆ ಸೇರಿ ಎಷ್ಟೇ ಹಣ ಸಂಪಾದಿಸಿದರೂ ಸಿಗುವುದಿಲ್ಲ. #ನೆನಪು #ಗೆಳೆತನ #ಶಾಲೆಯನೆನಪು