Nojoto: Largest Storytelling Platform
aravindgowda7203
  • 10Stories
  • 4Followers
  • 56Love
    0Views

Aravind Kuruvanka

  • Popular
  • Latest
  • Video
8250ce271eacf780d8119d9280d9bbe5

Aravind Kuruvanka

A job is really a short-term solution to a long-term problem

©Aravind Kuruvanka #Jobs
8250ce271eacf780d8119d9280d9bbe5

Aravind Kuruvanka

ಗುಡಿಗೆ ಬಂದವರು
ಕೇಶ ಕೊಟ್ಟು ಹೋದವರುಂಟು,,
ಧನ-ಕನಕ ಕೊಟ್ಟು ಹೋದವರುಂಟು,,
ಮೋಹ-ದ್ವೇಷ-ಅಸೂಯೆ ಬಿಟ್ಟು ಹೋದವರುಂಟೆ?!

©Aravind Kuruvanka #Shadow
8250ce271eacf780d8119d9280d9bbe5

Aravind Kuruvanka

ಇರುವೆಯ ಹೀಗೆ ಇರುವಂತೆ ನೀ ಸದಾ.!
ನಿ ತಿಳಿದಂತೆ ನಾ ಬಯಸಿದ ಪರಿಯಲಿ..,

ಇರುವೆ ನಾ ಸದಾ ನಿನ್ನ ಉಸಿರಂತೆ..
ಉಸಿರು ಬಿಟ್ಟಿರದ ಜೀವದಂತೆ.,
ಜೀವದಲಿ ನೆಲೆಸಿರುವ ಪರಮಾತ್ಮಾನಂತೆ..

©Aravind Kuruvanka ಮೌನ ಮಾತಾಡಿದೆ

#Colors

ಮೌನ ಮಾತಾಡಿದೆ #Colors #ಆಲೋಚನೆಗಳು

8250ce271eacf780d8119d9280d9bbe5

Aravind Kuruvanka

ಎಣ್ಣೆ ಮುಗಿದೊಡನೇ
ಮುಗಿದಿತೇ ಬೆಳಕು...?
ಉರಿಯುಂಟು ಎದೆಯಲ್ಲೇ
ಕೇಳೆ ಹಣತೆ...

©Aravind Kuruvanka Inspirational
8250ce271eacf780d8119d9280d9bbe5

Aravind Kuruvanka

ಎಲ್ಲರೊಂದಿಗೆ ಹೆಣೆದುಕೊಂಡಿದ್ದೇನೆ ಎನ್ನುವುದೇನೋ ನಿಜ...,
ಆದರೆ 
ಯಾವುದಕ್ಕೂ ಅಂಟುಕೊಂಡಿಲ್ಲ...

©Aravind Kuruvanka #Starss
8250ce271eacf780d8119d9280d9bbe5

Aravind Kuruvanka

ಸಾವಿರಾರು ಮೈಲಿ ದಿನವುಸಾಗಿಯೂ...

ತಿಳಿಯಿತೇನು ಕಡಲಿನಾಳವ..!?
ಹಾಯಿದೋಣಿಯು...!?

©Aravind Kuruvanka #Nature
8250ce271eacf780d8119d9280d9bbe5

Aravind Kuruvanka

ಇಷ್ಟು ಕಾಲ ಒಟ್ಟಿಗಿದ್ದು
ಎಷ್ಟು ಬೇರೆತರು..
ಅರಿತೇವೇನು
ನಾವು ನಮ್ಮ
ಅಂತರಾಳವ..!

©Aravind Kuruvanka #adventure
8250ce271eacf780d8119d9280d9bbe5

Aravind Kuruvanka

ಯೋಚಿಸಿ ನೋಡಿದರೆ ಎಲ್ಲರೂ ನಮ್ಮವರೇ..
ಚಿಂತಿಸಿ ನೋಡಿದರೆ ಯಾರು ನಮ್ಮವರಲ್ಲ...!

ಪದಗಳಲಿ ಸೋಲಬಹುದು..,
ಭಾವನೆಗಳಲ್ಲಿ!?
ಆಸೆಗಳು ಸೋಲಬಹುದು..
ಬದುಕು ಸೋಲುವುದೆಲ್ಲಿ!?

ಬಣ್ಣ ಬಣ್ಣದ ಮಾತು ಹೇಳುವರರ
ನಡುವೆ ಸತ್ಯಹೇಳುವವನೆ ಏಕಾಂಗಿ..
ನನ್ನೊಳಗೆ ನನ್ನತನ ಇರುವಾಗ
ಏಕಾಂಗಿ ನಾನೇಲ್ಲಿ..!!

©Aravind Kuruvanka #Moon
8250ce271eacf780d8119d9280d9bbe5

Aravind Kuruvanka

ತಿರುವಿನ ತುದಿಯಲಿ ತಿಳಿಯದ ಸುಳಿಯಿದೆ
ಬಿರುಸಿನ ಬದುಕಿಗೆ ಬಯಸದ ಬೆಲೆಯಿದೆ

ನಿನ್ನಲಿರೋ ಉತ್ತರ ಇನ್ನೆಲ್ಲೋ ನೀ ಬೇಡುತ
ತಿರುಗಿದೆ ವಿಳಾಸವಿಲ್ಲದೆ...
ಓ ಅಲೆಮಾರಿಯೇ...

©Aravind Gowda #Travelstories
8250ce271eacf780d8119d9280d9bbe5

Aravind Kuruvanka

ಸಾವಿರಾರು ಮುಖದ ಚೆಲುವ
  ದಿನವೂ ತೋರಿಯು...
  ಉಳಿಯಿತೇನೂ ಒಂದಾದರೂ
 ಕನ್ನಡಿಯ ಪಾಲಿಗೆ..!?

©Aravind Gowda
loader
Home
Explore
Events
Notification
Profile