Nojoto: Largest Storytelling Platform
nojotouser2208024327
  • 571Stories
  • 0Followers
  • 0Love
    0Views

ಸುಮಾ ರಮೇಶ್

  • Popular
  • Latest
  • Video
bb7842b581e1f846e14241dfa58db405

ಸುಮಾ ರಮೇಶ್

ಹಣ ಕಿಸೆಯಲ್ಲಿರುವವರೆಗೂ ಶಕ್ತಿ,
ಆದರೆ ತಲೆಗೆ ಹೊಕ್ಕರದು ದೌರ್ಬಲ್ಯ! #ಶಕ್ತಿ #ದೌರ್ಬಲ್ಯ #ಹಣ #yqjogi #yqjogi_kannada #yqjogikannada #yqbaba

#ಶಕ್ತಿ #ದೌರ್ಬಲ್ಯ #ಹಣ #yqjogi #yqjogi_kannada #yqjogikannada #yqbaba

bb7842b581e1f846e14241dfa58db405

ಸುಮಾ ರಮೇಶ್

ನಿರಪರಾಧಿ ಯಾರಿದ್ದಾರೆ ಈ ಕಾಲದಲ್ಲಿ?
ಅವರು ಮಾಡುವ ತಪ್ಪುಗಳು ಪ್ರಪಂಚದ 
ಕಣ್ಣಿಗೆ ಬೀಳುತ್ತಿಲ್ಲ ಅಷ್ಟೇ! #ತಪ್ಪು #ನಿರಪರಾಧಿ #ಕಾಣುತ್ತಿಲ್ಲ #yqjogi #yqjogi_kannada #yqjogikannada #yqbaba

#ತಪ್ಪು #ನಿರಪರಾಧಿ #ಕಾಣುತ್ತಿಲ್ಲ #yqjogi #yqjogi_kannada #yqjogikannada #yqbaba

bb7842b581e1f846e14241dfa58db405

ಸುಮಾ ರಮೇಶ್

ಅಂತರಂಗದ ಆಳಕ್ಕಿಳಿದು 
ನಿಶ್ಚಲವಾಗುವುದೇ ಮೌನ, 
ಒಳಗಣ್ಣ ತೆರೆದು ಅರಿವನ್ನು 
ನಿಶ್ಚಯಿಸುವುದೇ ಧ್ಯಾನ, 
ವಿವೇಕದ ಬೆಳಕಿನಲ್ಲಿ ಪ್ರಪಂಚವ 
ನಿಷ್ಕರ್ಷಿಸುವುದೇ ಜ್ಞಾನ. #ಜ್ಞಾನ#ಧ್ಯಾನ #ಮೌನ #yqjogi_kannada #yqjogi #yqjogi #yqbaba

#ಜ್ಞಾನ#ಧ್ಯಾನ #ಮೌನ #yqjogi_kannada #yqjogi #yqjogi #yqbaba

bb7842b581e1f846e14241dfa58db405

ಸುಮಾ ರಮೇಶ್

ಪ್ರಕೃತಿಯ ಹಸಿರು ಸಿರಿಯ ಉಸಿರು,
ಸೃಷ್ಟಿಯಲ್ಲಿನ ಶಕ್ತಿಯ ಸಂಚಿತ ಕೇಂದ್ರ,
ಮನುಕುಲ ರಥದ ಓಡುವ ಚಕ್ರ,
ಸಂಸಾರ ನೌಕೆಯ ಅಂಬಿಗ,
ದ್ವೈತವು ಅದ್ವೈತವಾದಾಗಲೇ ವಿಶ್ವದುಳಿವು,
ಹೆಣ್ಣಿಲ್ಲದೆ ಇವನಿಲ್ಲ; ಇವನಿಲ್ಲದೆ ಹೆಣ್ಣು ಉಳಿಯುವುದಿಲ್ಲ! ಇಂದು ಅಂತರಾಷ್ಟ್ರೀಯ ಪುರುಷರ ದಿನ, ನಿಮ್ಮ ಪ್ರಕಾರ ಪುರುಷ ಅಂದರೇನು? ನಿಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಿ.

#ಪುರುಷರದಿನ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಇಂದು ಅಂತರಾಷ್ಟ್ರೀಯ ಪುರುಷರ ದಿನ, ನಿಮ್ಮ ಪ್ರಕಾರ ಪುರುಷ ಅಂದರೇನು? ನಿಮ್ಮ ಮನದ ಮಾತುಗಳನ್ನು ಹಂಚಿಕೊಳ್ಳಿ. #ಪುರುಷರದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

bb7842b581e1f846e14241dfa58db405

ಸುಮಾ ರಮೇಶ್

ಬನ್ನಿ ಸಂಭ್ರಮಿಸೋಣ ಬದುಕನ್ನು; ಹೊತ್ತು 
ತನ್ನಿ ಮುಖದ ತುಂಬ ಸಂತಸದ ನಗುವನ್ನು,
ಮರೆಯದಿರಿ, ಸಂತೋಷ ಸಿಗುವುದು ಬಹಳ ಸುಲಭದಲ್ಲಿ; ಅಲ್ಲೇ ಅಡಗಿ ಕುಳಿತಿರುವುದು 
ಸೀದಾ ಮೂಗಿನ ಕೆಳಗೆ ನಗುವಿನ ರೂಪದಲ್ಲಿ! #ನಗು #ಸಂತೋಷ #ಸಂಭ್ರಮ #yqjogi_kannada #yqjogikannada #yqjogi #yqbaba

#ನಗು #ಸಂತೋಷ #ಸಂಭ್ರಮ #yqjogi_kannada #yqjogikannada #yqjogi #yqbaba

bb7842b581e1f846e14241dfa58db405

ಸುಮಾ ರಮೇಶ್

ಕೆಲವೊಮ್ಮೆ ಹತ್ತಿರವಿರುವುದನ್ನು ಅರಿಯಲು ಬಹು ದೂರದ ಹಾದಿ ಕ್ರಮಿಸಬೇಕು! #ಹತ್ತಿರ #ದೂರ #ywjogikannada #yqkannada #yqjogi_kannada #yqbaba

#ಹತ್ತಿರ #ದೂರ #ywjogikannada #yqkannada #yqjogi_kannada #yqbaba

bb7842b581e1f846e14241dfa58db405

ಸುಮಾ ರಮೇಶ್

ಅವಳ ಸಾಕಾರವಾಗದ ಕನಸು ಅವನು;
ಅವನ ಬರೆಯಲಾಗದ ಕವಿತೆ ಅವಳು! #ಕನಸು #ಕವಿತೆ #yqjogi #yqjogi_kannada #yqjogikannada #yqbaba

#ಕನಸು #ಕವಿತೆ #yqjogi #yqjogi_kannada #yqjogikannada #yqbaba

bb7842b581e1f846e14241dfa58db405

ಸುಮಾ ರಮೇಶ್

ಮುಕ್ತಾಯವೂ ಸುಂದರವಾಗಿರಬಹುದು ಎಂಬುದಕ್ಕೆ ಸೂರ್ಯಾಸ್ತವೇ ಸಾಕ್ಷಿ! #ಸೂರ್ಯಾಸ್ತ #ಮುಕ್ತಾಯ #ಸುಂದರ #yqjogi #yqjogi_kannada #yqjogikannada

#ಸೂರ್ಯಾಸ್ತ #ಮುಕ್ತಾಯ #ಸುಂದರ #yqjogi #yqjogi_kannada #yqjogikannada

bb7842b581e1f846e14241dfa58db405

ಸುಮಾ ರಮೇಶ್

ನಡೆದು ಬಂದ ಹಾದಿ ವಿವಿಧ ಬಣ್ಣಗಳ 
ಹೂಹಾಸು; ತೃಪ್ತಿ ತಂದಿದೆ!
ಆದರೆ ಮೃದು ಪಕಳೆಗಳೊಡನೆ
ಕಲ್ಲು ಮುಳ್ಳುಗಳಿಲ್ಲದಿಲ್ಲ! 
ಮೃದು ಸ್ವರ್ಶವಿದ್ದಂತೆ ತರಚಿದ ಗಾಯಗಳೂ,
ರಕ್ತ ಹೆಪ್ಪುಗಟ್ಟಿದ ನೀಲಿ ಕಣ್ಣಿಗೆ ಕುಕ್ಕುವುದು; 
ಆಗಾಗ್ಗೆ ಮನಹಿಂಡಿ ನೋಯಿಸುವುದು, 
ಆದರೂ ಹೇಳಲೇಬೇಕು ಧನ್ಯವಾದಗಳನ್ನು,
ಈ ಪಯಣ ನಿಜಾರ್ಥದಲ್ಲಿ ನಿಲ್ಲದ 
ಹುಡುಕಾಟವೆನಿಸಿದ್ದಕ್ಕೆ ...ದಾರಿ ತೋರಿದವರಿಗೆ, 
ಹಾಗೆಯೇ ದಿಕ್ಕು ತಪ್ಪಿಸಿದವರಿಗೂ ಸಹ;
ಅದರಿಂದಲೇ ಪ್ರಯಾಣ ರೋಚಕವೆನಿಸಿದೆ!
ತಿಳಿದಿದೆ, ಗುರಿಯಿನ್ನೂ ದೂರವಿದೆ;
ಅನುಭವದ‌ ಬುತ್ತಿ ಬಹಳ ಭಾರವಾಗಿದೆ,
ಹಗುರಾಗಿ ಹೋಗಬೇಕೆನಿಸಿದೆ ಈಗ,
ಕೈಹಿಡಿದು ಜೊತೆಗೂಡಿದ ಸಹಪಯಣಿಗರೊಡನೆ;
ಹಂಚಿ ಉಣಬೇಕಿದೆ ಹೊತ್ತಿರುವ ಬುತ್ತಿಯ ಸವಿಯ,
ಹೇಳುತ್ತಾ ಸಾಗಬೇಕೆಂಬಾಸೆ ಕ್ರಮಿಸಿದ ಹಾದಿಯ ಕತೆಯ; 
ಮತ್ಯಾರಿಗೋ ಅದು ಸಾಂತ್ವನದ ಕೈಪಿಡಿಯಾಗಬಹುದೆಂಬಾಸೆ ನನಗೆ!
ಅರಿವಿದೆ ನನಗೀಗ, ನನ್ನ ಪಯಣದ ಕತೆಯ ಹೇಳುವಾಗಲೀಗ 
ಹಿಂದಿನಂತೆ ಗಂಟಲು ಕಟ್ಟಿ, ಧ್ವನಿ ನಡುಗಿ, ಕಣ್ತುಳುಕುವುದಿಲ್ಲ! 
ಅಂದರೆ...ಅದರರ್ಥ...ಹಿಂದಾದ ಗಾಯಗಳೆಲ್ಲವೂ 
ಈಗ ಸಂಪೂರ್ಣವಾಗಿ ಮಾಗಿವೆ! #ಪಯಣ #ಹುಡುಕಾಟ #ಮಾಗು #yqjogi_kannada #yqjogi #yqbaba

#ಪಯಣ #ಹುಡುಕಾಟ #ಮಾಗು #yqjogi_kannada #yqjogi #yqbaba

bb7842b581e1f846e14241dfa58db405

ಸುಮಾ ರಮೇಶ್

ಬಂದಿದೆ ದೀಪಾವಳಿ ಮತ್ತೆ, 
ಹಚ್ಚೋಣ ಸಾಮರಸ್ಯದ ಹಣತೆ,
ಬಾಳಿಗೆ ಸ್ನೇಹ ಪ್ರೀತಿಗಳೇ ಸಂಹಿತೆ,
ಉಕ್ಕಲಿ ಒಲವಿನ ಒರತೆ,
ಆಗೆಲ್ಲಿರುವುದು ಸಂತಸಕೆ ಕೊರತೆ? #ದೀಪಾವಳಿ #ಪ್ರೀತಿ #yqjogi_kannada #yqjogi #yqjogikannada #yqbaba #photocredit Abbur Madhusudana

#ದೀಪಾವಳಿ #ಪ್ರೀತಿ #yqjogi_kannada #yqjogi #yqjogikannada #yqbaba #photocredit Abbur Madhusudana

loader
Home
Explore
Events
Notification
Profile