Nojoto: Largest Storytelling Platform

Best yrqtkannada Shayari, Status, Quotes, Stories

Find the Best yrqtkannada Shayari, Status, Quotes from top creators only on Nojoto App. Also find trending photos & videos about

  • 1 Followers
  • 9 Stories

ರೇಣುಕೇಶ್ ಸದಾಶಿವಯ್ಯ

ಮೊದಲೆಲ್ಲಾ ಸಾಂಕ್ರಾಮಿಕ ರೋಗಗಳು ಕೊಳೆಗೇರಿ, ಸ್ಲಂಗಳಲ್ಲಿ ವಾಸಿಸುವವರು, ನಾಗರೀಕತೆ ಜೀವನ ಅರಿಯದವರಿಂದ ಹರಡುತ್ತಿದ್ದವು.  ಆದರೆ ಇಂದು ಸಮಾಜದ ಉನ್ನತ ಸ್ಥಾನದಲ್ಲಿರುವವರಿಂದ, ಕೋಟ್ಯಾಧಿಪತಿಗಳಿಂದ, ಪ್ರತಿಬಾರಿ‌ ಡೆಟಾಲ್ ನಿಂದ ಕೈ ತೊಳೆಯುವ ಮಂದಿಯಿಂದ ಚಿಕಿತ್ಸೆಗೂ ಅವಕಾಶವಿಲ್ಲದಂತೆ ರೋಗಗಳು ಬಂದು ಎರಗುವುದಾ ನೋಡಿದರೆ ನಾಗರೀಕ ಯಾರು ಅನಾಗರೀಕ ಯಾರು ಎಂಬುದು ಅರಿವಾಗುತ್ತದೆ..!!??!! #yrqtjogi #yrqtkannada

ರೇಣುಕೇಶ್ ಸದಾಶಿವಯ್ಯ

ರಾಮ-ಲಕ್ಷ್ಮಣರೇ ಮಹಾಗುರುಗಳು|
ಬಿ.ಚಿ.ಯವರೇ ಪೀಠಾಧ್ಯಕ್ಷರು|
ದೇಸಾಯಿಯವರೆ ಮಾರ್ಗದರ್ಶಕರು|
ನಾವು ನವ-ನವೀನ ಕವಿಗಳು|| #yrqtkannada:#yrqtjogi
#yrqthoutes

ರೇಣುಕೇಶ್ ಸದಾಶಿವಯ್ಯ

ಅಂದು ಕಲ್ಲಿನಲಿ ಕಡೆದ ಕಲಾಕೃತಿಗಳ ನೋಡಿ
ಶಿಲ್ಪಿಯ ಕೈಯಲ್ಲಿ ಕಲ್ಲು ಮೃದುವಾಗಿದೆ ಎಂದೆನಿಸುತ್ತದೆ|
ಮುಂದೆ ಮುನ್ನೂರು ವರುಷಗಳ ನಂತರ
ಮೇಣದ ಪ್ರತಿಮೆಗಳನ್ಮು ನೋಡಿ ಮೇಣವು ಶಿಲ್ಪಿಗಳ
ಕೈಯಲ್ಲಿ ಮೃದುವಾಗಿದೆ ಎಂದು ಅಂದಿನವರಿಗೆ ಅನಿಸಬಹುದು!!
ದಿನದಿಂದ ದಿನಕ್ಕೆ..ವರ್ಷದಿಂದ ವರ್ಷಕ್ಕೆ ಮಾನವ ಎಷ್ಟು ದುರ್ಬಲನಾಗುತ್ತಿದ್ದಾನೆ...!!!???
 #yrqtkannada #yrqtjogi

ರೇಣುಕೇಶ್ ಸದಾಶಿವಯ್ಯ

ಅಂದಿನ ನಮ್ಮ ಬಾಲ್ಯ ಸಹಜ ಸುಂದರತೆಯ ಮೇಲೋಗರ
ಇಂದಿನ ಮಕ್ಕಳ ಬಾಲ್ಯ ಯಾಂತ್ರಿಕ‌ ಆಟಿಕೆಗಳ‌ ವಯಾಗ್ರ.. #yrqtbaba #yrqtkannada 
#yrqtjogi

ರೇಣುಕೇಶ್ ಸದಾಶಿವಯ್ಯ

#yrqtbaba #yrqtkannada ₹yrqtjogi

read more
ಅಂದಿನ ವಿದ್ಯಾರ್ಥಿಗಳು ಅನ್ಯಾಯ ಕಂಡು ಧರಣಿ ಕೂಡುತ್ತಿದ್ದರು
ಇಂದಿನ ವಿದ್ಯಾರ್ಥಿಗಳು ಗುಂಪು ನಕಲಿಯಲ್ಲಿ
ಸಕ್ರಿಯರಾಗಿದ್ದಾರೆ.. #yrqtbaba #yrqtkannada 
₹yrqtjogi

ರೇಣುಕೇಶ್ ಸದಾಶಿವಯ್ಯ

ನಿನ್ನ ಭಾವನೆಗಳಿಗೆ ರಾಗವಾಗುವಾಸೆ..
ನಿನ್ನ ರಾಗಕೆ ಗೀತವಾಗುವಾಸೆ..
ನಿನ್ನ ಗೀತೆಗೆ ಸಂಗೀತವಾಗುವಾಸೆ..
ನಿನ್ನ ಸಂಗೀತಕ್ಕೆ ರಸಿಕನಾಗಾವಾಸೆ.. #yrqtjogi; #yrqtbaba ;#yrqtkannada

ರೇಣುಕೇಶ್ ಸದಾಶಿವಯ್ಯ


ಅಂದಿನ ಗುರು ತನ್ನ ಶಿಷ್ಯನ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದ
ಇಂದಿನ ಗುರು ತನ್ನ ಶಿಷ್ಯನಿಂದ ನನಗೇನು ಲಾಭ ಇದೆ ಎಂದು ಯೋಚಿಸುತ್ತಿದ್ದಾನೆ.. #yrqtkannada 
#yrqtjogi

ರೇಣುಕೇಶ್ ಸದಾಶಿವಯ್ಯ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ
ಹಲ್ಲು ಗಿಂಜಿದವನು ಪಾಸ್
ಹಲ್ಲು ಕಡಿದವನು ಗೇಟ್ ಪಾಸ್ #yrqtbaba #yrqtkannada

ರೇಣುಕೇಶ್ ಸದಾಶಿವಯ್ಯ

ನಾ ನಿಮ್ಮವಳು ಎಂದರೂ ಕೇಳದೆ
ಸಂಜೆಗೆಂಪಿನಂತಿದ್ದ ಕೆನ್ನೆಗಳ ಮಾಡಿದರಾ ರಕ್ತದೋಕುಳಿಯಾ

ನಾ ನಿಮ್ಮ ಚರಣದಾಸಿ ಎಂದರೂ ಕೇಳದೆ
ತೊಂಡೆಹಣ್ಣಂತಿದ್ದ ನನ್ನ ಅಧರಗಳಿಗೆ ಸೂಜಿಯನ್ನಿಟ್ಟರಲ್ಲಾ..

ನಾ ನಿಮ್ಮ ಆಯಾಸವ ದೂರ ಮಾಡುವೆನೆಂದರೂ ಕೇಳದೆ
ನನ್ನನ್ನು ಹಿಂಡಿ ಹಿಂಡಿ ಹಿಪ್ಪೆ ಮಾಡಿಬಿಟ್ಟರಲ್ಲಾ....

ನಾ ದೇವರ ದಾಸಿಯೆಂದರೂ ಕೇಳದೆ
ನಾನು ನಿಮ್ಮಲ್ಲೇ ದೇವರ ಕಂಡರೂ ವೇಶ್ಯೆಯನ್ನಾಗಿಸಿದೀರಲ್ಲ.
     #yrqtkannada #yrbaba #yrqtjogi
#yrqthoughts

Follow us on social media:

For Best Experience, Download Nojoto

Home
Explore
Events
Notification
Profile