Nojoto: Largest Storytelling Platform

Best ಕ್ರಾಂತಿ Shayari, Status, Quotes, Stories

Find the Best ಕ್ರಾಂತಿ Shayari, Status, Quotes from top creators only on Nojoto App. Also find trending photos & videos about ಕ್ರಾಂತಿಕಾರಿಗಳ ಹೆಸರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿ ಎಂದರೇನು, ಕ್ರಾಂತಿ ಫಿಲಂ, ಕ್ರಾಂತಿ ಪಿಕ್ಚರ್,

  • 2 Followers
  • 2 Stories
    PopularLatestVideo

Chidanand Mayachari

#csmayachari #casteism #leaders #ಕನ್ನಡಕವಿತೆ #ಕ್ರಾಂತಿ #ಜಾತಿ #ನಾಯಕರು

read more
ಸಲಗ ಪಳಗಿಸಲು ಸಲಗ ಬೇಕು 
ಅದಕೇನು ಗೊತ್ತು ತಾನು ಮಾಡಿದ್ದು 
ತನ್ನವರ ಬಂಧನಕೆ ಮೂಕ ಸಾಕ್ಷಿ 
ನೇತಾರ ಬಂದು ಮತ ಪಡೆದ 
ನಿಮ್ಮದೇ ಜಾತಿಯವ ತಾನು ಎಂದು 
ಸಲಗದಂತೆ ಶಾಹಿಯ ಒತ್ತಿದ್ದೆ ಅಂದು 
ಕಾಣುತ್ತಿರುವೆ ನಮ್ಮವರನೇ ಇಂದು 
ಕಷ್ಟಗಳ ವ್ಯೂಹದಿ ಸಿಕ್ಕು ಬಳಲುವದ
ಜಾತಿಇದೆ ಜೀತವಿದೆ ತಾತ ಮುತ್ತಾತರಿಂದ 
ನಾಹೇಗೆ ಬಿಡಲಿ ಆಜ್ಜನಿಟ್ಟ ಆಲದಮರ 
ಕ್ರಾಂತಿ ಮಾಡಿದ ನಮ್ಮಾತನೀಗ ಜಾತಿಬೀಜ
ಆಳದ ಬೇರು ಹೊಕ್ಕು ಕೀಳಲಾರದೆ 
ಉಳಿದಿರುವೆ ಬಿಳಲಿನ ಮಿಥ್ಯ ನೆರಳೊಳಗೆ. #csmayachari #casteism #leaders #ಕನ್ನಡಕವಿತೆ #ಕ್ರಾಂತಿ #ಜಾತಿ #ನಾಯಕರು

Lakumikanda Mukunda

#ಲಕುಮಿಕಂದ #ಕ್ರಾಂತಿ # ಕ್ರಾಂತಿ ರತ್ನ ಕಿಡಿಗಳು #Independence2021

read more
*ಕ್ರಾಂತಿ ರತ್ನ ಕಿಡಿಗಳು* 

ವೈರಿಗಳ ಎದೆ ನಡುಗಿಸಿ
ವಿಧಿಲಿಖಿತ ಬದಲಾಯಿಸಿ
ಎದೆ ನೆತ್ತರ ಇತಿಹಾಸದಿ
ಪ್ರಜ್ವಲಿಸಿವೆ ಹಣತೆಗಳು.!

ತಾಯ್ನಾಡ ಸ್ವಾತಂತ್ರ್ಯದ
ಕ್ರಾಂತಿ ರತ್ನ ಕಿಡಿಗಳು
ಭರತಮಾತೆ ಮಣಿಮುಕುಟದಿ
ಮೆರವ ಹೊನ್ಮುತ್ತುಗಳು.!

ಅನ್ಯಾಯಕೆ ಸಿಡಿದೆದ್ದು
ಬಂಡಾಯವೇ ಬುಗಿಲೆದ್ದು
ರಣರಂಗದಿ ಝಳಪಳಿಸಿವೆ
ಕ್ರಾಂತಿ ರಕ್ತದ ಖಡ್ಗಗಳು..!

ಸಿಡಿಗುಂಡೇ ಬದಿ ಸರಿಯಿತು
ಗುಂಡಿಗೆಯಾ ಧೈರ್ಯಕೆ
ಮುಗಿಲೆತ್ತರ ಹಾರಾಡಿತು
ಸ್ವಾತಂತ್ರ್ಯದ ಕೀರ್ತಿ ಪತಾಕೆ.!

ಭರತಮಾತೆ ಮಕ್ಕಳೆದುರು
ಸೊಕ್ಕಿದವರು ಉಳಿದಿಲ್ಲ
ಶಾಂತಿ ಕ್ರಾಂತಿ ಅಸ್ರ್ತದೆದುರು
ಯವನರ ಸೊಲ್ಲು ಗೆಲ್ಲಲ್ಲ.!

©Lakumikanda Mukunda #ಲಕುಮಿಕಂದ #ಕ್ರಾಂತಿ # ಕ್ರಾಂತಿ ರತ್ನ ಕಿಡಿಗಳು

#Independence2021


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile