Nojoto: Largest Storytelling Platform

ಇಲ್ಕೇಳಿ, ಹತ್ತಕ್ಕೆ ನೂರಂತೆ... ಅವನ ಲೆಕ್ಕದಲ್ಲಿ! (ಕಣ್

ಇಲ್ಕೇಳಿ,

ಹತ್ತಕ್ಕೆ ನೂರಂತೆ... ಅವನ ಲೆಕ್ಕದಲ್ಲಿ!

(ಕಣ್ಣು ಅಡಿಬರಹದೆಡೆಗೆ)     ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ.

ಅದೆಲ್ಲ‌ ಇರಲಿ ಬಿಡಿ.

ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ.

ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬಂದ. "ದುಡಿಯೋಕಾಗಲ್ಲ, ನಡೆಯೋಕಾಗಲ್ಲ, ಜೊತೆಗೆ ಸ್ವಲ್ಪ ಕಿವಿನೂ ಕೇಳಲ್ಲ. ನಂಗೆ‌ ಮನೆ ಅಂದ್ರೆ ಬಸ್ಟ್ಯಾಂಡು, ಹೇಳ್ಕೊಳೋಕಷ್ಟೆ ನಾನ್ ಗಂಡು. ಸ್ವಲ್ಪ ಏನಾದ್ರೂ ಸಹಾಯ ಮಾಡ್ರಪ್ಪ" ಅಂದ.

vinayahegde9650

Vinaya Hegde

New Creator

ಮಧ್ಯಮ ವರ್ಗದ ಬ್ಯಾಚುಲರ್ ಜೀವನಾನೆ ಒಂದು ಮಜಾ. ಮನೆಯಲ್ಲಿಯೆ ಇರಬೇಕೆನ್ನುವ ಆಸೆ ಆದರೆ ಕಾಸಿನ ಕೊರತೆಗೆ ಪೇಟೆಗೆ ಬಂದು, ಎಲ್ಲೋ ಒಂದು ಕಡೆ ಜೊತೆಗೆ ಯಾರೂ ಇಲ್ಲದೆ ಬದುಕುವುದು ಸರ್ವೇಸಾಮಾನ್ಯ. ಅದರಲ್ಲಿ ನಾನೂ ಕೂಡ ಹೊರತಾಗಿಲ್ಲ. ಅದೆಲ್ಲ‌ ಇರಲಿ ಬಿಡಿ. ಎಂದಿನ ದಿನದಂತೆ ಇಂದೂ ಕೂಡ ಅದೇ ಸಾಗದ ಕೆಲಸ, ಒತ್ತಡ, ನಿಲ್ಲದ ಸಮಯ ಹಾಗೆ ಮಧ್ಯಾಹ್ನವಾಗುತ್ತಿದ್ದಂತೆ ಚುರು ಚುರು ಎನ್ನುವ ಉದರ. ಊಟದ ಸಮಯವಾದ್ದರಿಂದ ಆಫೀಸಿನಿಂದ ಹೊರಗಡೆ ಬಂದು ಅಲ್ಲೇ ಹತ್ತಿರ ಇರೊ ಮೆಸ್ ಗೆ ಹೋಗಿದ್ದೆ. ಚಪಾತಿ, ಕಾಳಿನ ಪಲ್ಯ, ಬದನೆಯಕಾಯಿ ಎಣ್ಗಾಯಿ. ಅಬ್ಬಾ ಈಗಲೂ ನೀರೂರುತ್ತೆ ಬಾಯಲ್ಲಿ. ಅಷ್ಟರಲ್ಲೇ ಒಬ್ಬ ವಯಸ್ಸಾದ ಅಂಧವ್ಯಕ್ತಿ ಅಲ್ಲಿಗೆ ಬಂದ. "ದುಡಿಯೋಕಾಗಲ್ಲ, ನಡೆಯೋಕಾಗಲ್ಲ, ಜೊತೆಗೆ ಸ್ವಲ್ಪ ಕಿವಿನೂ ಕೇಳಲ್ಲ. ನಂಗೆ‌ ಮನೆ ಅಂದ್ರೆ ಬಸ್ಟ್ಯಾಂಡು, ಹೇಳ್ಕೊಳೋಕಷ್ಟೆ ನಾನ್ ಗಂಡು. ಸ್ವಲ್ಪ ಏನಾದ್ರೂ ಸಹಾಯ ಮಾಡ್ರಪ್ಪ" ಅಂದ. #yqjogi_kannada #ಭಗವಂತ #ನಿಶ್ಯಬ್ದ #ಕನ್ನಡ_ಬರಹಗಳು