Nojoto: Largest Storytelling Platform
raghushivaswamy2535
  • 7.5KStories
  • 2Followers
  • 930Love
    8.0KViews

Raghu Shivaswamy

Be simple in the Universe, Let's everyone likes to follow your simplicity.

  • Popular
  • Latest
  • Video
191ed93570e49981bcec6c625616846c

Raghu Shivaswamy

White ಮುಂದೆ ಮಾತನಾಡುವವರನ್ನು ನಂಬು
ಹಿಂದೆ ಮಾತನಾಡುವವರನ್ನು ಗೌರವಿಸು
ಮುಂದೆ ಮಾತನಾಡುವವರು ನಿನ್ನ ಏಳಿಗೆಯನ್ನು ಬಯಸಿದರೆ
ಹಿಂದೆ ಮಾತನಾಡುವವರು ನಿನ್ನ ಏಳಿಗೆಗೆ ಕಾರಣಕರ್ತರಾಗಿರುತ್ತಾರೆ.

©Raghu Shivaswamy ಮುಂದೆ ಮಾತನಾಡುವವರನ್ನು ನಂಬು
ಹಿಂದೆ ಮಾತನಾಡುವವರನ್ನು ಗೌರವಿಸು
ಮುಂದೆ ಮಾತನಾಡುವವರು ನಿನ್ನ ಏಳಿಗೆಯನ್ನು ಬಯಸಿದರೆ
ಹಿಂದೆ ಮಾತನಾಡುವವರು ನಿನ್ನ ಏಳಿಗೆಗೆ ಕಾರಣಕರ್ತರಾಗಿರುತ್ತಾರೆ.

ಮುಂದೆ ಮಾತನಾಡುವವರನ್ನು ನಂಬು ಹಿಂದೆ ಮಾತನಾಡುವವರನ್ನು ಗೌರವಿಸು ಮುಂದೆ ಮಾತನಾಡುವವರು ನಿನ್ನ ಏಳಿಗೆಯನ್ನು ಬಯಸಿದರೆ ಹಿಂದೆ ಮಾತನಾಡುವವರು ನಿನ್ನ ಏಳಿಗೆಗೆ ಕಾರಣಕರ್ತರಾಗಿರುತ್ತಾರೆ. #ಪ್ರೇರಕ

191ed93570e49981bcec6c625616846c

Raghu Shivaswamy

ಭಗವಂತ ಎಂದರೆ ಯಾರು...!?

ಎಲ್ಲಾ ಕಡೆಯು ಇರುವವ
ಎಲ್ಲರಿಗೂ ನೆರವಾಗುವವ
ಎಲ್ಲರ ಒಳಿತನ್ನೆ ಬಯಸುವವ
ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ

©Raghu Shivaswamy #hibiscussabdariffa ಭಗವಂತ ಎಂದರೆ ಯಾರು...!?

ಎಲ್ಲಾ ಕಡೆಯು ಇರುವವ
ಎಲ್ಲರಿಗೂ ನೆರವಾಗುವವ
ಎಲ್ಲರ ಒಳಿತನ್ನೆ ಬಯಸುವವ
ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ

#hibiscussabdariffa ಭಗವಂತ ಎಂದರೆ ಯಾರು...!? ಎಲ್ಲಾ ಕಡೆಯು ಇರುವವ ಎಲ್ಲರಿಗೂ ನೆರವಾಗುವವ ಎಲ್ಲರ ಒಳಿತನ್ನೆ ಬಯಸುವವ ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ #ಪ್ರೇರಕ

191ed93570e49981bcec6c625616846c

Raghu Shivaswamy

ಆಚಾರವ ಮರೆತವ ಅಹಂಕಾರಿಯಾದ
ವಿಚಾರವ ಮರೆತವ ಅವಿವೇಕಿಯಾದ
ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ.

©Raghu Shivaswamy ಆಚಾರವ ಮರೆತವ ಅಹಂಕಾರಿಯಾದ
ವಿಚಾರವ ಮರೆತವ ಅವಿವೇಕಿಯಾದ
ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ.

ಆಚಾರವ ಮರೆತವ ಅಹಂಕಾರಿಯಾದ ವಿಚಾರವ ಮರೆತವ ಅವಿವೇಕಿಯಾದ ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ. #ಜ್ಞಾನಿ

191ed93570e49981bcec6c625616846c

Raghu Shivaswamy

ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ
ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು 
ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು
ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ 
ಯಾವ ರೂಪದಲ್ಲಾದರು ಬಂದೇ ಬರುತ್ತಾನೆ.

©Raghu Shivaswamy ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ
ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು 
ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು
ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ 
ಯಾವ ರೂಪದಲ್ಲಾದರು ಬಂದೇ ಬರುತ್ತಾನೆ.

ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ ಯಾವ ರೂಪದಲ್ಲಾದರು ಬಂದೇ ಬರುತ್ತಾನೆ. #ಪ್ರೇರಕ

191ed93570e49981bcec6c625616846c

Raghu Shivaswamy

Never give up your Soul
one fine day you will definitely reach your Goal

©Raghu Shivaswamy #Connections
191ed93570e49981bcec6c625616846c

Raghu Shivaswamy

ಮೌನದೂರಿನ ಗೆಳತಿ ನೀನು
ಮಂದಾರ ಪುಷ್ಪದ ಸೊಬಗು ನೀನು
ಮನದಾಳದ ಲಹರಿ ನೀನು
ಮನುಕುಲದ ಸೊಬಗು ನೀನು
ಮಿನುಗುವ ತಾರೆ ನೀನು
ಮಂದಹಾಸದ ಚೆಲುವು ನೀನು
ಮಮಕಾರದ ಮೆರುಗು ನೀನು
ಮಾಯೆಯೊಳಗಿನ ಮೌನ ನೀನು
ಹಗಲುಗನಸಿನ ಛಾಯೆ ನೀನು
ಅಂತರಾಳದ ಸೊಬಗು ನೀನು
ಪ್ರೀತಿಯೊಳಗಿನ ಚಿಹ್ನೆ ನೀನು
ನನ್ನ ಉಸಿರಿಗೆ ಹೆಸರು ನೀನು
ಮನದ ಒಳಗಿರೊ ಹಸಿರು ನೀನು
ಅಂತ್ಯವಿಲ್ಲದ ಗಾನ ನೀನು
ನೀನಿಲ್ಲದೆ ಹೇಗಿರಲಿ ನಾನು...

©Raghu Shivaswamy #Rose
191ed93570e49981bcec6c625616846c

Raghu Shivaswamy

ಹೇ ಮಾನವ....
ಹುಚ್ಚುತನದಿ ನೀ ಎಲ್ಲಾ ಬೇಕೆನ್ನುವೆ
ಎಲ್ಲವು ಸಿಕ್ಕಮೇಲೆ ನೀ ಹುಚ್ಚನಂತಾಡುವೆ
ಏನೂ ಇಲ್ಲದಿದ್ದಾಗ ನೀ ತೃಪ್ತಿಯಿಂದಿರುವೆ
ಎಲ್ಲವು ಸಿಕ್ಕಮೇಲೆ ಆ ತೃಪ್ತಿಯನ್ನೆ ನೀ ಕಳೆದುಕೊಳ್ಳುವೆ

©Raghu Shivaswamy #WoRasta
191ed93570e49981bcec6c625616846c

Raghu Shivaswamy

ತಿರುಕನ ಕನಸೊಂದು ತಿರುಗಾಟ ನಡೆಸಿಹುದು
ತಿರು-ತಿರುಗಿ ಸಾಕಾಗಿ ಮರುಗುತಾ ಕೂತಿಹುದು
ತಿರುವಿನಂಚಿನ ಮಿಂಚು ಕರಿಮುಗಿಲ ಕಾರ್ಮೋಡ
ತೀರದಾಸೆಯ ಸಂಚು ಕರಗದ ಕೋಲ್ಮಿಂಚು
ತಿಂಗಳ ಬೆಳಕಿಗೆ ಸೊಕ್ಕಿನ ಕಿಡಿ ತಗುಲಿ
ಅಂಗಳದ ತುಂಬೆಲ್ಲ ಸುಕ್ಕುಗಟ್ಟಿದ ಕಾವು
ಆಸೆಯ ತೀರಕೆ ಚಡಪಡಿಕೆಯ ನೋವು
ಆಸರೆಯ ಮಡಿಲಿಗೆ ಅಂಬಲಿಸಿ ಗೋವು
ಮಿತಿಮೀರಿ ಕೈ ಜಾರಿ ದಾರಿ ತಪ್ಪಿದ ನಡಿಗೆ
ಮೈಮೇಲೆ ನಿಲ್ಲದ ಬಿಕನಾಸಿ ಉಡುಗೆ
ಕಾಂಚಾಣ ಕಣ್ಮುಚ್ಚಿ ಕುಣಿದಾಡಲು
ತೊಟ್ಟ ಕಚ್ಚೆಯ ಅಮಲ ಯಾರಿಲ್ಲ ಕಾಯಲು
ಇದ್ದಷ್ಟೆ ಜೀವನ ತೃಪ್ತಿ ಇಲ್ಲದ ಪಯಣ 
ಬೇಡುವ ದಾಹ ತೀರದ ಮೋಹ
ಏರಿದ ಅಮಲು ಬೇಕಾಬಿಟ್ಟಿ ಕಾವಲು
ಮುಚ್ಚುವುದಿಲ್ಲ ಎಂದಿಗು ತಿರುಕನೂರ ಬಾಗಿಲು..

©Raghu Shivaswamy ತಿರುಕನ ಕನಸೊಂದು ತಿರುಗಾಟ ನಡೆಸಿಹುದು
ತಿರು-ತಿರುಗಿ ಸಾಕಾಗಿ ಮರುಗುತಾ ಕೂತಿಹುದು
ತಿರುವಿನಂಚಿನ ಮಿಂಚು ಕರಿಮುಗಿಲ ಕಾರ್ಮೋಡ
ತೀರದಾಸೆಯ ಸಂಚು ಕರಗದ ಕೋಲ್ಮಿಂಚು
ತಿಂಗಳ ಬೆಳಕಿಗೆ ಸೊಕ್ಕಿನ ಕಿಡಿ ತಗುಲಿ
ಅಂಗಳದ ತುಂಬೆಲ್ಲ ಸುಕ್ಕುಗಟ್ಟಿದ ಕಾವು
ಆಸೆಯ ತೀರಕೆ ಚಡಪಡಿಕೆಯ ನೋವು
ಆಸರೆಯ ಮಡಿಲಿಗೆ ಅಂಬಲಿಸಿ ಗೋವು

ತಿರುಕನ ಕನಸೊಂದು ತಿರುಗಾಟ ನಡೆಸಿಹುದು ತಿರು-ತಿರುಗಿ ಸಾಕಾಗಿ ಮರುಗುತಾ ಕೂತಿಹುದು ತಿರುವಿನಂಚಿನ ಮಿಂಚು ಕರಿಮುಗಿಲ ಕಾರ್ಮೋಡ ತೀರದಾಸೆಯ ಸಂಚು ಕರಗದ ಕೋಲ್ಮಿಂಚು ತಿಂಗಳ ಬೆಳಕಿಗೆ ಸೊಕ್ಕಿನ ಕಿಡಿ ತಗುಲಿ ಅಂಗಳದ ತುಂಬೆಲ್ಲ ಸುಕ್ಕುಗಟ್ಟಿದ ಕಾವು ಆಸೆಯ ತೀರಕೆ ಚಡಪಡಿಕೆಯ ನೋವು ಆಸರೆಯ ಮಡಿಲಿಗೆ ಅಂಬಲಿಸಿ ಗೋವು #ಜೀವನ

191ed93570e49981bcec6c625616846c

Raghu Shivaswamy

ಆರಾಮಿಲ್ಲದ ಜೀವನ ವಿರಾಮದ ಆಸರೆ ಕೇಳಿತು
ವಿರಾಮದ ವಿಲಾಸ ಜೀವಕ್ಕೆ ಆಲಸ ತಂದಿತು
ಆಲಸದ ಆಲಾಪನೆ ದೇಹವ ಆಲಂಗಿಸಿತು
ಆಲಿಂಗನದ ರಿಂಗಣ ಮನಸನ್ನು ಆಹ್ವಾನಿಸಿತು
ಆಹ್ವಾನಕ್ಕೆ ಸೋತ ಮನಸು ಸೋಮಾರಿಯಾಯಿತು
ಸೋಮಾರಿಯಾದ ಮನಸು ಹಲವು ಖಾಯಿಲೆಗಳಿಗೆ ಆಹ್ವಾನ ನೀಡಿತು
ಎಲ್ಲಾ ಖಾಯಿಲೆಗಳ ನೋವನ್ನು ದೇಹ ಅನುಭವಿಸಿತು
ಆಸ್ಪತ್ರೆಯ ಹಾಸಿಗೆ ದೇಹಕ್ಕೆ ಸ್ವಾಗತ ಕೋರಿತು
ಪ್ರಾಣ ಹಾರಿತು ದೇಹ ಅಳಿಯಿತು
ಕೊನೆಗೆ ಉಳಿದದ್ದು....!???
ಇಷ್ಟೇ ಜೀವನ..

©Raghu Shivaswamy #samay
191ed93570e49981bcec6c625616846c

Raghu Shivaswamy

ಇಲ್ಲಿ ನಮಗ್ಯಾರಾದರು ಎಂಬುವುದಕ್ಕಿಂತ
ನಾವ್ಯಾರಿಗಾದೆವು ಎಂಬುವುದಷ್ಟೆ ಮುಖ್ಯ.
ಇಲ್ಲಿ ನಮ್ಮವರು ಯಾರೆಂದು ಹುಡುಕುವುದಕ್ಕಿಂತ
ಎಲ್ಲಾ ನಮ್ಮವರೆ ಎಂದು ಭಾವಿಸುವುದಷ್ಟೆ ಮುಖ್ಯ.
ಇಲ್ಲಿ ನಮಗೇನು ಉಳಿಯಿತು ಎಂಬುವುದಕ್ಕಿಂತ
ನಮ್ಮಿಂದ ಪರರಿಗೆ ಏನು ಒಳಿತಾಯಿತು ಎಂಬುವುದಷ್ಟೆ ಮುಖ್ಯ.
ಇಲ್ಲಿ ಎಲ್ಲರನ್ನು ಸಮಾನವಾಗಿ ಕಾಣಬೇಕು
ಇಲ್ಲ್ಯಾರು ಮೇಲಲ್ಲ, ಇಲ್ಲ್ಯಾರು ಕೀಳಲ್ಲ
ಮೇಲು-ಕೀಳಿನ ಲೆಕ್ಕಾಚಾರ ಮಾಡಲು ಇಲ್ಲಿ ನಮಗ್ಯಾವ ಹಕ್ಕಿಲ್ಲ.
ಮೇಲೊಬ್ಬನಿರುವ, 
ಇಲ್ಲಿ ಎಲ್ಲದಕ್ಕೂ ಕಾರಣಕರ್ತ ಅವನಷ್ಟೆ ಆಗಿರುವ
ನಾವಿಲ್ಲಿ ಕೇವಲ ನೆಪಮಾತ್ರವಷ್ಟೆ
ಅವನಿಗೆ ನಾವಿಲ್ಲಿ ಕೇವಲ ಆಟದ ಬೊಂಬೆಗಳಷ್ಟೆ.

©Raghu Shivaswamy #agni
loader
Home
Explore
Events
Notification
Profile