Nojoto: Largest Storytelling Platform
kanasumanju6915
  • 66Stories
  • 189Followers
  • 753Love
    566Views

Kanasu Manju

Kanasu Manju

  • Popular
  • Latest
  • Video
c1a4c9e83fabb95560d14348d9d2ccf8

Kanasu Manju

ಮನೆಯ ಅಂಗಳದಿ ಕಾಲಿಟ್ಟು

ಮನೆಯ ಬೆಳಗಿಸಿದವಳು ಸ್ತ್ರೀ...!

ಮನದ ಅಂಗಳಕ್ಕೆ ಕಾಲಿಟ್ಟು

ಮನಸನ್ನು ಹಸನಾಗಿಸುವಳು ಸ್ತ್ರೀ...!

ಅನಾದಿಕಾಲದಿಂದಲೂ ನಿನಗುಂಟು

ವಿಶೇಷ ಗೌರವ, ಸ್ಥಾನಮಾನ...!

ಮನುಜ ಎಂದೆಂದಿಗೂ ನೀ ಪಡದಿರು

ಸ್ತ್ರೀ ಎಂಬ ತ್ಯಾಗಮಯಿಯ ಮೇಲೆ ಅನುಮಾನ...!

ಕರುಣೆಗೆ ಹೆಸರಾದವಳು ತಾಯಿ

ತೆಗಳದಿರು ನೀ ಅವಳನ್ನು ಬಂದಂತೆ ಬಾಯಿ...!

ಮನೆಗೆ ಮಗಳಾಗಿ ಸಂತಸವನ್ನು ತಂದಿತು...!

ಗಂಡನ ಮನೆಯ ಸುಖಕ್ಕಾಗಿ ಬೆಂದಿಹಳು...!

ಗೌರವಿಸು ಮನುಜ ಈ ಕ್ಷಮಯಾಧರಿತ್ರಿಯನ್ನು...!

ಇವಳು ಸ್ತ್ರೀ ರೂಪದ ಕಲ್ಪವೃಕ್ಷವು....!

ನಿನಗಾಗಿ ನೋವನ್ನು ಸಹಿಸುವವಳು...

ತನಗಾಗಿ ಏನನ್ನೂ ಬೇಡದಿರುವವಳು....!

ಭೂಮಿಯಂತೆ ಸಂಸಾರದ ಭಾರ ಹೊತ್ತಿಹಳು...!

ಮಾಯಾಲೋಕದ ಮೋಸಕ್ಕೆ ಮಾರುಹೋಗದಂತೆ ನಿನ್ನ ಕಾಯುತಿರುವವಳು....!

ನಿನ್ನೊಟ್ಪಿಗೆ ಆಡಲು ಅಕ್ಕ ತಂಗಿಯಾಗಿ...!

ಕರುಣೆ ತೋರಲು ತಾಯಿಯಾಗಿ...!

ಜೀವನ ನಡೆಸಲು ಮಡದಿಯಾಗಿ...!

ಬಾಳ ಬೆಳಗಿಸಲು ಬಂದಳು

ಬ್ರಹ್ಮನ ಅದ್ಭುತ ಸೃಷ್ಟಿಗಳಲ್ಲೊಂದಾದ ಸ್ತ್ರೀ ಯಾಗಿ....!

ಗೌರವಿಸು ಮನುಜ ಸ್ತ್ರೀಯರನ್ನು

ನೀ ನೀಡುವ ಗೌರವ ನಿನಗೆ ಶ್ರೀರಕ್ಷೆಯಾದೀತು...!!!

::: *ಕನ‌ಸು ಮಂಜು*

©Kanasu Manju
c1a4c9e83fabb95560d14348d9d2ccf8

Kanasu Manju

ಕವಿಯ ಕಲ್ಪನೆಗೆ ಸಾವಿಲ್ಲ...!!!

ಕವಿಯ ಭಾವನೆಗಳಿಗೆ ಸಾವಿಲ್ಲ...!!! 

ಕವಿಯ ಆಸೆಗಳಿಗೆ ಸಾವಿಲ್ಲ...!!!

ಆದರೆ

ಕೊನೆಗೊಂದಿನ ಸಾವುಂಟು

ಕವನಗಳಿಗೆ.....!!!!😢😢

ಕವಿಗೂ ಕೂಡ..!!😭

©Kanasu Manju #FindingOneself
c1a4c9e83fabb95560d14348d9d2ccf8

Kanasu Manju

ಮುದ್ದಿನ ಗಿಣಿಯೇ....!!!

ಏನಮ್ಮಾ ನಿನ್ನ ಈ ಪ್ರೀತಿಯ ನಗುವಿನ ನೋಟ..!!!

ಕಲೆಗಾರನಿಗೆ ಕಲ್ಪನೆಯಲ್ಲಿ ಕಂಡು ಚಿತ್ರ ಬಿಡಿಸಿದರೂ

ಮೂಡದ 

ಕಲೆಗಾರನ ಕಲ್ಪನೆಗೂ ಮೀರಿದ ಆಕರ್ಷಕ ಸೌಂದರ್ಯ

ನಿನ್ನದು..!!!

ಯಾರಲ್ಲೂ ಕಾಣದ ಆಕರ್ಷಣೆ ನಿನ್ನಲ್ಲೇತಕೇ?..!!!

ನಿನ್ನ ನಿಲುವಿಗೋ...!!!

ನಿನ್ನ ಹಳ್ಳಿ ಸೊಗಡಿನ ವೈಯಾರಕ್ಕೋ...!!!

ಹೆಣ್ಣೇ ನಿನ್ನ ಕಣ್ಣಲ್ಲಿ ಕಾಣುತಿಹುದು ನಿನ್ನ ಒಡೆಯನ ಕಾಳಜಿ...!!!

ನಿನ್ನ ಪ್ರೀತಿ ಪಡೆಯಲು ಅವ ಮಾಡುವ ಸೋಗು

ಅವನ ಸೋಗ ನೋಡಿ ನಸು ನಕ್ಕು

ಇನ್ನೂ ಸೋಲಿಸುತಿರುವೇ ನೀ ಅವನನ್ನು...!!!!

ನಿನ್ನ ಈ ನಗುವಿನಿಂದ...!!!!

ಗಿಣಿಯೇ

ಬ್ರಹ್ಮನು ನಾಚಿ ಸೋತು ನೀರಾಗಿ ನಿಂತ

ನಿನ್ನ ಈ ಆಕರ್ಷಕ ಮೈಕಟ್ಟ ವ್ಯಕ್ತಿತ್ವವ ನೋಡಿ...!!!!

ಹೆಣ್ಣೇ

ನಾ ಸೋತೆನು ನಿನ್ನ ಈ ಚಿತ್ರಕ್ಕೆ...!!!

ಚಿತ್ರವೇ ನೋಡಿ ಮನಸಲಿ ಇಳಿದಿರುವೆ...!!!

ತಲೆಬಾಗುವೆ ಈ ನಿನ್ನ ಈ ಆಕರ್ಷಕ ಸೌಂದರ್ಯಕ್ಕೆ..!!!

©Kanasu Manju
c1a4c9e83fabb95560d14348d9d2ccf8

Kanasu Manju

ಬದುಕಿನ ನವ ಘಳಿಗೆಯಲ್ಲಿ ಬದುಕಿಗೆ

ಪುಟ್ಟ ಹೆಜ್ಜೆಯನ್ನಿಕ್ಕುತ್ತಾ ಬಂದವಳು ನೀ...!!!!

ಸಂತಸವೇ ಕಾಣದ ಮನಸಲಿ‌ 

ಸಂತೋಷದ ಚಿಲುಮೆ ಹೊತ್ತು ತಂದವಳು ನೀ‌..‌!!!

ಏಕಾಂತದಲ್ಲಿ ಏಕಾಂಗಿಯಾಗಿತ್ತು ಹೃದಯ

ನಿನ್ನ ಹೃದಯದೊಡನೆ ಸ್ನೇಹ ಮಾಡಿಸಿ

ಹೃದಯಕೆ ಕಾಳಜಿಯ ಪರಿಚಯ ಮಾಡಿಸಿದವಳು ನೀ...!!!

ಹೊಸ ಜಗದಿ ಈ ಹೃದಯಕೆ ಒಡತಿಯಾಗಿ 

ಮುಗ್ಧ ಪ್ರೀತಿ ಕಾಳಜಿಯ ಉಣಬಡಿಸಿದವಳು ನೀ...!!!

ನೀ ಕೊಟ್ಟ ಮುತ್ತು...!!

ನೀ ಕೊಟ್ಟ ಪ್ರೀತಿ...!!

ನೀ ನೀಡುವ ಕಾಳಜಿ..!!!

ಮಂಡಿಯೂರಿ ಮನಸಾರೆ ಕೇಳುವೆ 

ತೊರೆಯದಿರು ನನ್ನ ಕೊನೆವರೆಗೂ..!!!

ನೀ ಬೇಕು.‌‌..!!!

ಮನಸಿಗೆ...!!!

ಜೀವನಕ್ಕೆ...!!!

ಕೈಯ ಮುಗಿವೆನು ಬಿಡದಿರು ನನ್ನ...!!!!😔😭

©Kanasu Manju #helpless
#realfeelings
#Love
c1a4c9e83fabb95560d14348d9d2ccf8

Kanasu Manju

ಪ್ರೀತಿಯ ಉಡುಗೊರೆ ನೀ....

ನಿನ್ನ ಕೊಟ್ಟು ಪ್ರೀತಿಯ ವ್ಯಕ್ತಪಡಿಸುವರು...

ಪ್ರೀತಿ ಸಿಕ್ಕ ಮೇಲೆ ನಿನ್ನ ಕಸದ ಬುಟ್ಟಿಗೆ ಚೆಲ್ಲುವರ ಮಧ್ಯೆ

ಬಲವಾದ ನಂಬಿಕೆ ಇಂದಿಗೂ ಉಳಿಸಿಕೊಂಡಿರುವೆ ನೀ...

ಕಸದ ಬುಟ್ಟಿಗೆ ಚೆಲ್ಲುವ ಮುನ್ನ ಒಂದೊಳ್ಳೆ ಪ್ರೀತಿಗೆ ಕಾರಣವಾದೇ 

ಎಂಬ ಸಂತಸದಿ...!!!!!!!

ನಿನ್ನಂತೆ ಪ್ರೇಮಿಗಳು,ಅರಿತಿದ್ದರೆ 

ಸಿಗುತ್ತಿರಲಿಲ್ಲ ಒಂದೂ ಪ್ರೇಮ ವೈಫಲ್ಯ...!!!!

ನೀ ಅರಳುವುದು ಮುಳ್ಳಿನ ಮಧ್ಯೆ

ನಿನ್ನ ಜೊತೆಯಾಗಿ ಬಯಸುವರು

ಸೆಣಸಬೇಕು ಮುಳ್ಳಿನ ಜೊತೆ..!!!

ಪ್ರೀತಿ ಸುಲಭವಲ್ಲ...!!!

ನೋವು ನಲಿವು ಎಲ್ಲವೂ ಅನುಭವಿಸಬೇಕೆಂದು ತಿಳಿ ಮನುಜ...!!!!!

©Kanasu Manju #OneSeason
c1a4c9e83fabb95560d14348d9d2ccf8

Kanasu Manju

ಬದುಕಲ್ಲಿ ಆದದ್ದು ಎಷ್ಟೋ...!!!

ಹೋದದ್ದು ಎಷ್ಟೋ...!!!

ಅರ್ಥಮಾಡಿಕೊಳ್ಳಲಾಗದ ಜನಗಳ ಮಧ್ಯೆ

ಅರ್ಥವಾಗದೆ ಇರುವುದೇ ಲೇಸು...!!

ಬದಲಾಗ ಬಯಸಿದ್ದರು ಅಂದು

ಬದಲಾಗಿದ್ದೆ ತಪ್ಪೆನ್ನುತಿರುವರು ಇಂದು...!!!!

ಹಣೆಬರಹದಲ್ಲಿ ಇಲ್ಲದ್ದು ಬಹುದಿನ

ಜೊತೆಗಿರಲು ಸಾಧ್ಯವೇ??!!!

ಬೇಕೊಂದು ವಿರಾಮ ಮನಸಿಗೆ ತಿಳಿ ಹೇಳಲು...!!
ಎಲ್ಲರೂ ಸಮಯದ ಕೈ ಗೊಂಬೆ

ತೆಗೆದುಕೋ ವಿರಾಮ ನೀ,  ನನ್ನ ಮನವೇ ನಿನಗೆ ಭಾರವೆಂದ ಮೇಲೆ

©Kanasu Manju #Reality 
#Rose
c1a4c9e83fabb95560d14348d9d2ccf8

Kanasu Manju

ನಗುವೇ ನಿನಗೇಕೆ ಇಷ್ಟೊಂದು ಜಂಭ....!!!!

ನಿನ್ನಂತ ನಗು ಮತ್ತಾರಿಗು ಇಲ್ಲ ಎಂಬ ಹಿರಿಮೆಯೋ...!!!

ಕೃಷ್ಣನ ಪ್ರಿಯವಾದ ನವಿಲು ಗರಿಯಿಂದ ಅಂದ ಹೆಚ್ಚುತಿದೆಯೋ...!!!!!

ಅಥವಾ , ಈ ಕೃಷ್ಣನ ಪ್ರಿಯೆಯಿಂದಲೋ...!!!!

ನವಿಲು ಗರಿಬಿಚ್ಚಿ ಕುಣಿದರೆ ನವಿಲಿಗೆ  ಸಂತಸ...!!!!

ನವಿಲು ಗರಿಯ ಮುಂದೆ ಕೃಷ್ಣ ಸುಂದರಿಯು ನಕ್ಕರೆ

ಗರಿಯೇ ಸಂತಸದಿ ಕುಣಿದಾಡುತಿತ್ತು....!!!

ನನ್ನ ಅಂದವನ್ನೇ ಮೀರಿಸುವ ಸುಂದರಿ ಇರುವುಳೆಂದು...!!!

ರಾಧೆ ರಾಧೆ.....!!!!!!

©Kanasu Manju #Ntg
c1a4c9e83fabb95560d14348d9d2ccf8

Kanasu Manju

ಹೆಚ್ಚೇನೂ ಹೇಳಲ್ಲ...!!!!!


ಹುಚ್ಚು ಅವಳೆಂದರೆ...!!!

©Kanasu Manju #spark
c1a4c9e83fabb95560d14348d9d2ccf8

Kanasu Manju

ಏನಾಗುತಿಹುದು ಬದುಕಿನಲ್ಲಿ ತೋಚುತ್ತಿಲ್ಲ...!!!!!

ಸೃಷ್ಟಿಕರ್ತನ ಆಟ ಇನ್ನೇನೋ.!!!!

ಇಲ್ಲದ ಮನಸಲಿ ಪ್ರೀತಿಯ ಕೊಟ್ಟ...!!!

ಅದೇ ಮನದಲಿ ಚಂಚಲತೆಯ ಇಟ್ಟ...!!!!

ಏನು ಅರಿಯದ ಮನಗಳಿಗೆ ಪ್ರೀತಿಯ ನೀಡಲು ಹೇಳಿದ..!!

ಎಲ್ಲವೂ ಅರಿತ ಮನಸಿಗೆ ಆ ಮನಗಳಿಗೆ ತಾ ಏನು 

ಅವರ ಜೀವನದಲ್ಲಿ ನನ್ನಯ ಪಾತ್ರ ಏನೆಂದು ತಿಳಿಸಲೇ ಇಲ್ಲ..!!!!

ಏನಾಗುತಿಹುದು ಈ ಜೀವನದಲ್ಲಿ...!!!

ಆಡಿಸುತಿರುವವನು ನೀ....!!!!

ನೀ ಆಡಿಸಿದಂತೆ ಆಡುತಿರುವೆ ನಾ...!!!!

ಕೈಯ ಮುಗಿದು ಬೇಡುವೆನು ಕೊಡದಿರು

ಮೋಸಗಾರನೆಂಬ ಹಣೆಪಟ್ಟಿಯ...!!!!!

©Kanasu Manju #guily 
#meltingdown
c1a4c9e83fabb95560d14348d9d2ccf8

Kanasu Manju

ಹಣೆಬರಹವ ನಂಬಿ ಕೂತಿಲ್ಲ ನಾ....!!

ಹಣೆಬರಹವ ಬರೆಯುವನೇ ನನ್ನ 

ಜೊತೆಗಿರುವನು ಎಂದು ನಂಬಿರುವೆ ನಾ...!!!

ಬದುಕಲಿ ಎಲ್ಲವನೂ ಸಮನಾಗಿ ಕೊಟ್ಪವನು ನೀ ದೇವ...!!!!!

ಕೈಯ ಬಿಡದಿರು, ಕಂಡಿರುವೇ ನೂರಾರು ಕನಸುಗಳ...!!!!

ಬದುಕಿನ ಅನುಭವಗಳು ಹೇಳಿಕೊಟ್ಟಿವೆ 

ಅಂದು ಕೊಂಡಂತೆ ಸಾಗದು ಜೀವನ...!!

 ನಂಬಿರುವೆ ನೀ ಕರುಣಿಸುವೇ 
ನಲ್ಮೆಯ ಸಕಾರಾತ್ಮಕ ಜೀವನ ಎಂದು...

ಕಾಯುವೆ ನೀ ನನ್ನೆಲ್ಲಾ ಕನಸುಗಳಿಗೂ ಅಸ್ತು 

ಎನ್ನುವವರೆಗೂ..

ಹಣೆಬರಹವ ನಂಬಿಲ್ಲ..!!!

ಹಣೆಬರಹ ಬರೆಯುವ ನಿನ್ನ ನಂಬಿರುವೇ..!!!!

©Kanasu Manju #Nothing 
loader
Home
Explore
Events
Notification
Profile