Nojoto: Largest Storytelling Platform
rakesharadhya1207
  • 14Stories
  • 12Followers
  • 135Love
    8.7KViews

Rakesh Aradhya

  • Popular
  • Latest
  • Video
ff864087eed1b9f7890bcffe35d03d44

Rakesh Aradhya

ಕಣ್ಣುಗಳು ಕಲೆತಾಗ
ಬೆರಳುಗಳು ತಾಗಿದಾಗ
ನೀನೇ ನನ್ನ ಕನಸು ಎಂದಾದಾಗ
ಕನಸು ನನಸಾದಾಗ
ಒಬ್ಬರಲ್ಲೊಬ್ಬರು ಕಳೆದು ಹೋದಾಗ
ಪ್ರೀತಿಯಲಿ ತೇಲಾಡುತ್ತಿದ್ದಾಗ
ನಿದ್ದೆಯಿಂದೆಬ್ಬಿಸಿತೇಕೆ ಯಾವುದೋ ರಾಗ

©Rakesh Aradhya #Colors #Love #Life #kannadaquotes #kannada
ff864087eed1b9f7890bcffe35d03d44

Rakesh Aradhya

ನಮ್ಮಿಬ್ಬರ ಪ್ರೀತಿಯ ಗುಟ್ಟು
ಆಯಿತು ನನ್ನಿಂದ ರಟ್ಟು
ನಿನಗೆ ಬಂದರೆ ಸಿಟ್ಟು
ನನ್ನನ್ನು ಮುತ್ತುಗಳಿಂದ ತಟ್ಟು

©Rakesh Aradhya #desert #Love #Life #kannada
ff864087eed1b9f7890bcffe35d03d44

Rakesh Aradhya

ಕನಸಲ್ಲಿ ಬಂದೆ
ಜೊತೆಯಲಿ ನಿಂತೆ
ನನ್ನ ಬೆಳೆಸಿದೆ
ಮರೆಸಿದೆ ನನ್ನೆಲ್ಲಾ ಚಿಂತೆ

©Rakesh Aradhya #kannada #kannadaquotes #Love #Life #motivate
ff864087eed1b9f7890bcffe35d03d44

Rakesh Aradhya

ಕೋಳಿ ಕೂಗಿತು
ಬೆಳಗಾಯಿತು..
ಎಚ್ಚರವಾಯಿತು..
ಕೈಗಳು ನಿನ್ನ ತಬ್ಬಿಕೊಂಡಿತು
ದೇಹಕ್ಕೆ ಹಿತವೆನಿಸಿತು
ಮನಕ್ಕೆ ಪ್ರಫುಲ್ಲವೆನಿಸಿತು
ಮತ್ತೊಂದು ಸುದಿನ ನಿನ್ನೊಡನೆ ಶುರುವಾಯಿತು
ಜೀವನದ ಪಯಣ ಮುಂದುವರೆಯಿತು..

©Rakesh Aradhya #Life #morning #Sunrise #kannada #kannadaquotes
ff864087eed1b9f7890bcffe35d03d44

Rakesh Aradhya

ನಿನ್ನನ್ನು ನೋಡಿದಾಕ್ಷಣ ಜಗತ್ತನ್ನೇ ಮರೆಯುವೆ
ನಿನ್ನನು ಮುತ್ತಿದಾಕ್ಷಣ ನನ್ನನ್ನೇ ಮರೆಯುವೆ
ನಿನ್ನ ಸುಂದರ ಕಣ್ಣುಗಳಲ್ಲಿ ನಾ ಲೀನನಾಗುವೆ
ನಿನ್ನ ಪ್ರೀತಿಸುತ್ತಾ ತಲ್ಲೀನನಾಗುವೆ
ನಾನು ನೀನು ಒಂದೇ ಎಂದು ಅರಿಯುವೆ

©Rakesh Aradhya #MeandYou #Love #kannada #Life
ff864087eed1b9f7890bcffe35d03d44

Rakesh Aradhya

ಆ ಮೋಡಗಳು ಅತ್ತಿತ್ತ ಓಡಿ
ತಂಗಾಳಿಯ ಭೂಮಿಗೆ ಸೂಸಿ
ಎಲೆಗಳು ಅತ್ತಿತ್ತ ಹಾರಾಡಿದಾಗ
ಆಕಾಶಕ್ಕೆ ಉನ್ಮಾದವೇರಿ 
ಭೂಮಿಯ ಮೇಲೆ ಪ್ರೀತಿಯಿಂದ ಒರಗಿ
ಮುತ್ತಿಟ್ಟು, ಅಪ್ಪಿ, ಭೋರ್ಗರೆದು ಮಳೆ ಸುರಿಸಿ
ಭೂಮಿಗೆ ತಂಪೆರೆದು, ತಾನೂ ತಂಪಾಗಿ, ಖಾಲಿಯಾದರೆ,
ಭೂಮಿ ಮಾತ್ರ ನಾಚಿ ನೀರಾಗಿ ಕೆಂಪಾಗಿ ಹರಿಯುತ್ತಿಹಳು..

©Rakesh Aradhya #Love #Life #Ecstasy #kannada
ff864087eed1b9f7890bcffe35d03d44

Rakesh Aradhya

ನೀನು ನನಗಾಗಿಯೇ ಹುಟ್ಟಿ ಬಂದಿರುವೆ
ಜೊತೆಗಿರಲು ಏಕಿಷ್ಟು ತಡ ಮಾಡುತ್ತಿರುವೆ
ಮೂವತ್ತು ವರ್ಷಗಳಿಂದ ನಾನು ಕಾದಿರುವೆ
ಆಗಲೇ ಬಾರದೇ ನನ್ನ ಕಾಡಿರುವೆ
ಓ ನನ್ನ ಚೆಲುವೆ ಈಗ ಎಲ್ಲಿರುವೆ
ಸಿಕ್ಕರೆ ಗಟ್ಟಿಯಾಗಿ ತಬ್ಬಿಕೊಳ್ಳುವೆ 
ನೀ ನನ್ನ ಜೊತೆಗೇ ಇರಲೆಂದು
ಆ ದೇವರಲ್ಲಿ ಬೇಡಿಕೊಳ್ಳುವೆ

©Rakesh Aradhya #L♥️ve #Love #Life #kannada #kannadaquotes
ff864087eed1b9f7890bcffe35d03d44

Rakesh Aradhya

ನಿನ್ನ ಕಣ್ಣಂಚಿನ ನೋಟದಲ್ಲಿ
ತುಟಿಯಂಚಿನ ಕಿರುನಗೆಯಲ್ಲಿ 
ಕಿರುಬೆರಳ ಸ್ಪರ್ಶದಲ್ಲಿ
ಬಿಸಿ ಉಸಿರ ಶಾಖದಲ್ಲಿ
ಹೃದಯ ತುಂಬಿದ ಪ್ರೀತಿಯಲ್ಲಿ
ಆ ಬೆಚ್ಚನೆಯ ಅಪ್ಪುಗೆಯಲ್ಲಿ
ಬಂಧಿಯಾಗಿರುವ ಜೀವಾವಧಿ ಕಳ್ಳ ನಾನು.
ಕಳ್ಳನೇಕೆಂದರೆ ನಿನ್ನ ಮನಸ ಕದ್ದವನಲ್ಲವೇ...

©Rakesh Aradhya #jail #love #life #kannada #poem
ff864087eed1b9f7890bcffe35d03d44

Rakesh Aradhya

ನಿನ್ನ ನಡೆ, ನಿನ್ನ ನುಡಿ
ನಿನ್ನ ಅಂದ, ನಿನ್ನ ಚಂದ
ನಿನ್ನ ಗುಣ, ನಿನ್ನ ಪ್ರೀತಿ
ನನ್ನನ್ನು ಹುಚ್ಚಾಗಿಸಿದೆ
ನಿನ್ನ ಪ್ರೀತಿಯಲ್ಲಿ ಮುಳುಗಿಸಿದೆ
ನಿನ್ನ ಅಮಲಿನಲ್ಲೇ ತೇಲಿಸಿದೆ
ಬದುಕಿಗೆ ಒಂದು ಅರ್ಥ ಬಂದಿದೆ
ಬದುಕಲು ಒಂದು ಗುರಿ ಸಿಕ್ಕಿದೆ

©Rakesh Aradhya #ಕನ್ನಡ #ಕನ್ನಡಬರಹ #Life  #Love #kannada

#ಕನ್ನಡ #ಕನ್ನಡಬರಹ Life Love #kannada #ಪ್ರೀತಿ

ff864087eed1b9f7890bcffe35d03d44

Rakesh Aradhya

ಕನಸೊಂದು ಕಾಡಿದೆ
ಮನಸ್ಸು ನಿನ್ನ ನೆನಪಲ್ಲೇ ಬೆಂದಿದೆ
ಹೃದಯ ನಿನಗಾಗಿ ಮಿಡಿದಿದೆ
ನಿನಗಾಗಿ ಕಾದು ಕಣ್ಣು ಮಂಜಾಗಿದೆ
ನಿದ್ದೆ ಬಾರದಾಗಿದೆ
ನಿನ್ನ ಹೆಸರಿನ ದಿಂಬು ನನ್ನ ಕಣ್ಣೀರಿನಿಂದ ಒದ್ದೆಯಾಗಿದೆ
ಜಗತ್ತಿಗೆ ರಾತ್ರಿ ಕಳೆದು ಬೆಳಕಾಗಿದೆ
ನೀನಿಲ್ಲದೇ ನನ್ನ ಬದುಕು ಅಂಧಕಾರದಲ್ಲಿದೆ.

©Rakesh Aradhya #lonely #kannada #Love #Life
loader
Home
Explore
Events
Notification
Profile