Nojoto: Largest Storytelling Platform

Best yqdvkrddots Shayari, Status, Quotes, Stories

Find the Best yqdvkrddots Shayari, Status, Quotes from top creators only on Nojoto App. Also find trending photos & videos about

  • 1 Followers
  • 466 Stories

DIVAKAR D

ಜಗವಿಮೋಚಕ - ೧೮೯ #ಜಗವಿಮೋಚಕ #yqdvkrddots #ಲೋಕ #ಹುಟ್ಟುಸಾವು #ಸಂತಸ #ನಲಿವು #yqjogi #maddur

read more
ಜಗವಿಮೋಚಕ - ೧೮೯
==================
ನದಿಯ ತೆರಗಳಂದದಿ‌ ಬೆದಕುತಿರುವುದು ಲೋಕ
ಹುಟ್ಟೇನು ಸಾವೇನು ಸಂತಸವೇನು ಸಂಕಟವೇನು
ನಲಿವೇನು ನೋವೇನು ಸುಖವೇನು ಕಷ್ಟವೇನು
ಹಿಗ್ಗದಿರು ಸಿಹಿಯಲಿ ಕುಗ್ಗದಿರ ಬಾಳ ಕಹಿಯಲಿ
ಕ್ಷಣಕೊಂದು ಬಣ್ಣ ಅವನ ಬುಗುರಿಯಾಟದಿ
ಸಂತಸ ಹಚ್ಚಿ ಸಕಲರಲ್ಲೊಂದಾದರೆ ಬಾಳಾ ಜಾತ್ರೆ
ಮನಸೋತು ಮುದುಡಿದರೆ ಮುಗಿದೀತೂ ಯಾತ್ರೆ
ವಿಧಿಯ ಕೈ ಮೇಲಿಹುದು ವಿನೋದವೋ ವಿಷಾದವೋ
ಎಲ್ಲವೂ ಅವನು ಪರಮಲೀಲೆಗಳ ಪರದಾಟವೋ ಜಗವಿಮೋಚಕ - ೧೮೯
#ಜಗವಿಮೋಚಕ #yqdvkrddots #ಲೋಕ #ಹುಟ್ಟುಸಾವು #ಸಂತಸ #ನಲಿವು #yqjogi #maddur

DIVAKAR D

ನನ್ನ ಬರಹ @ ೧೯೦೦ & ೧೮೮... ಜಗವಿಮೋಚಕ - ೧೮೮ #ಜಗವಿಮೋಚಕ #yqdvkrddots #ಬದುಕು #ಸಂಸಾರ #ಬಾಳು #ಜೀವನ #yqjogi #maddur

read more
ಜಗವಿಮೋಚಕ - ೧೮೮
======================================
ಬೇಕೆನಿಸಿದ್ದು ಬೇಡವೆನ್ನುವ ತನಕ ಬರಿ ಬಂಡಾಯವೇ ಬದುಕು
ಬೇಕಿದ್ದು ಬೇಡಿದ್ದು ಸಾಕಿದ್ದು ಸಲುವಿದ್ದು ಸಾಕೆನ್ನುವರೆಗೆ ಸಂಸಾರ
ಬೇಕು ಬೇಡಗಳ ರಂಗು ರಂಗಿನ  ಗುಂಗಿನೊಳಗಿನ ಕದನವೇ ಬಾಳು
ಬೇಕು ಬೇಡಗಳ ಬಿನ್ನಾಣದಲಿ ಮೆರೆಯುತೈತೆ ಜೋಕಾಲಿಯ ಜೀವನ 
ಬೇಕೆ ಬೇಕೆಂದು ಬಡಾಬಡಾಯಿಸಿ ಬೇಡ ಬೇಡವೆಂದು ಬದಲಾಗಿಸೋ
ಬದುಕಲ್ಲವೀ ಬದುಕು ಇರುವುದರೊಳಗೊಂದು ಜನ್ಮವೇ ಸಾಕು
ಎಲ್ಲರೊಳಂದಾಗಿ ಬದುಕು ಕಿರಿದೆಲ್ಲವೂ ಅಳಿದು ಉಳಿದುದುಲೆಲ್ಲವೂ
ಹಿರಿದೋ ಮತಿನೀತಿಗಳಿಗಿಂತ ಜೀವಿತದ ನಡೆನುಡಿಯೇ ಸಗ್ಗವೋ.. ನನ್ನ ಬರಹ @ ೧೯೦೦ & ೧೮೮...
ಜಗವಿಮೋಚಕ - ೧೮೮
#ಜಗವಿಮೋಚಕ #yqdvkrddots #ಬದುಕು #ಸಂಸಾರ #ಬಾಳು #ಜೀವನ #yqjogi #maddur

DIVAKAR D

ಜಗವಿಮೋಚಕ - ೧೮೭ #ಜಗವಿಮೋಚಕ #yqdvkrddots #ಹೆಣ್ಣು #ಹೊನ್ನು #ಮಣ್ಣು #ಸತ್ಯ #ಜೀವನ #ಬದುಕು

read more
ಜಗವಿಮೋಚಕ - ೧೮೭
==========================
ಹೆಣ್ಣು ಹೊನ್ನು ಮಣ್ಣು ಮಾಯೆಯೆಂದರು
ಧರ್ಮ ಕರ್ಮ ಪಾಪ ಪುಣ್ಯ ದಯೆಯೆಂದರು
ನಾನು ನೀನು ನಾವು ನೀವು ನಶ್ವರವೆಂದರು
ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸ ಬೆಳಕೆಂದರು
ಮೋಸ ದ್ರೋಹ ವಂಚನೆ ಇರುಳೆಂದರು
ಗೆಲುವು ಸೋಲು ಜಯಾಪಜಯ ಕ್ಷಣಿಕವೆಂದರು
ಮಾತೇ ಮುತ್ತು ದ್ವೇಷ ಆಪತ್ತು ಮುಟ್ಟದಿರೆಂದರು
ನಡೆ ನುಡಿ‌ ದೃಷ್ಟಿ ಸೃಷ್ಟಿ ಸಕಲಕೂ ಶರಣೆಂಬುವರು
ಕ್ಷಣವೊಂದು ಮರಳಿ ಬೆಳಗರೆದ ಇರುಳೊಳಗೆ 
ಎಲ್ಲಾ‌ ಮರೆತು ಮೆರಯಲು ಹಪಾಹಪಿಸೊ 
ಮನುಜ ನೀ ನಿನ್ನಂತೆ ನೀ ಬಾಳದಿರೆ  ಸೂತಕ
ದೆದರೂ ನೀ ಸೋಲುವವರಗೆ ಬದುಕೆಲ್ಲಾ
ಬರಿ ಬಡಿದಾಟವೋ ಬ್ರಹ್ಮಲಿಪಿಯಂ ನಂಬಿ
ಹೊರಟರೆ ಅಂತ್ಯವೆಲ್ಲಿದೆಯೋ ಅನಾಚಾರಕೆ.. ಜಗವಿಮೋಚಕ - ೧೮೭
#ಜಗವಿಮೋಚಕ #yqdvkrddots #ಹೆಣ್ಣು #ಹೊನ್ನು #ಮಣ್ಣು #ಸತ್ಯ #ಜೀವನ #ಬದುಕು

DIVAKAR D

ಮುಂಜಾನೆಗೊಂದು ಮುನ್ನುಡಿ - ೬೭ #yqdvkrddots #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 💐💐💐💐💐 #yqjogi #yqgoogle #yqkannada #ಕನ್ನಡ

read more
ಮುಂಜಾನೆಗೊಂದು ಮುನ್ನುಡಿ - ೬೭
========================
" ನಾನು ನನ್ನದೆಂಬ ತಂತ್ರ ನಾನಳಿಯುವ ತನಕ
ನಾವು ನಮ್ಮದೆಂಬ ಮಂತ್ರ ಲೋಕವಿರುವ ತನಕ "  ಮುಂಜಾನೆಗೊಂದು ಮುನ್ನುಡಿ - ೬೭
#yqdvkrddots #ಮುಂಜಾನೆಗೊಂದು_ಮುನ್ನುಡಿ 
#ಶುಭೋದಯ #ಶುಭದಿನ 💐💐💐💐💐
#yqjogi #yqgoogle #yqkannada #ಕನ್ನಡ

DIVAKAR D

ಜಗವಿಮೋಚಕ - ೧೮೩ #ಜಗವಿಮೋಚಕ #yqdvkrddots #ದಿವಾಕರ್ #ಬದುಕು #ಆಟ #yqjogi #yqgoogle #yqmandya

read more
ಜಗವಿಮೋಚಕ - ೧೮೩
===============================
ಬದುಕಿನಲ್ಲಿ  ಜೊತೆಗಾರರು ಆಟದಲ್ಲಿ ಪ್ರತಿಸ್ಪರ್ಧಿಗಳು
ನಮ್ಮಷ್ಟೇ ವೇಗದಲ್ಲಿದ್ದರೆ  ಮಾತ್ರ ಜೀವನವೆಂಬ ಆಟಕ್ಕೆ
ಸಿಗುವ ಬಹುಮಾನ ಅಮೂಲ್ಯವಾದುದು ಇಲ್ಲವಾದರೆ 
ನಾವೆಷ್ಟೇ ಗೆದ್ದು ಉನ್ನತ  ಶಿಖರವೇರಿ ಬೀಗಿದರೂ ಸಿಹಿ 
ಸಂಭ್ರಮದ ಭಾರವನ್ನು ಹೊತ್ತುಕೊಂಡು ತಿರುಗಿದರೂ
ಬದುಕಿನಲ್ಲಿ ನಗಣ್ಯವಾಗಿ ಉಳಿದು ಬಿಡುತ್ತೇವೆ..... ಜಗವಿಮೋಚಕ - ೧೮೩
#ಜಗವಿಮೋಚಕ #yqdvkrddots #ದಿವಾಕರ್ #ಬದುಕು #ಆಟ #yqjogi #yqgoogle #yqmandya

DIVAKAR D

ಬದುಕುವುದಕ್ಕೆ ಸಂಪಾದನೆ #ದಿವಾಕರ್ #yqdvkrddots #ಬದುಕು #ಸಂಪಾದನೆ #ಮನಸ್ಸು #ಕನ್ನಡ #yqjogi #yqgoogle

read more
ನಾವು ಏನನ್ನು‌ ಸಂಪಾದಿಸುತ್ತೇವೆಯೋ ಅದು
ಜೇಬು ತುಂಬಿ ಭಾರವೆನಿಸಿದುರೊಳಗೆ ಬದುಕು 
ಬಲು ಭಾರವಾಗಿರುತ್ತದೆ ಆದರೆ ಉತ್ತಮ ಮನಸಿದ್ದರೆ
ಜೇಬು ಖಾಲಿ ಇದ್ದರೂ ಬದುಕು ಶೃಂಗಾರಗೊಂಡಿರುತ್ತದೆ. ಬದುಕುವುದಕ್ಕೆ ಸಂಪಾದನೆ
#ದಿವಾಕರ್ #yqdvkrddots #ಬದುಕು #ಸಂಪಾದನೆ
#ಮನಸ್ಸು #ಕನ್ನಡ #yqjogi #yqgoogle

DIVAKAR D

When there is No Way
DONT WORRY 
Create your own  HIGHWAY ;

Dont look BACK
there is always clapped 
to ACHIEVERS Create Own HIGHWAY..
#yqdvkrddots #way #highway #achieve #yqjogi #yqthoughts #yqgoogle #yqmandya

DIVAKAR D

ಜಗವಿಮೋಚಕ ೧೮೨ @ ೧೭೯೯...🙏🙏🙏💐💐💐 ಒಳಿತೆಂದು ಗೊಣಗಾಡುವ ಮನುಜನ‌ ಡಾಂಭಿಕತನವ ನೆನೆ ನೆನದು... #ಜಗವಿಮೋಚಕ #yqdvkrddots #ಧರ್ಮ #ಕನ್ನಡ #ಬದುಕು #ಜೀವನ #yqgoogle #yqthoughts

read more
ಜಗವಿಮೋಚಕ - ೧೮೨
====================================
ಧರ್ಮ ಕಾಪಿಡುವುದೆಮ್ಮ ಜನುಮ ಜನುಮದ ಪುರಾಕೃತದಿಂದ
ಕರುಮ ಕಾಡುವುದು ಜನುಮ ಜನುಮದಲೂ ದುಷ್ಕೃತದ ಫಲವೂ
ಕಿಡಿನಗುವು ಕೊಂಕುನುಡಿ ಬಿರುಸು ಮಾತಿಗೆ ಬಿರಿದಿದೆ ಮನವೂ
ಒಳಿತು ಕಾಣೆಯಾಗಿದೆ ಒಗ್ಗಟ್ಟಿಲ್ಲದೆ ಒಡಕು ಮೂಡಿದೆ ಬದುಕಿನಲೂ
ಒಳಿತೆಂದು ಗೊಣಗಾಡುವ ಮನುಜನ‌ ಡಾಂಭಿಕತನವ ನೆನೆದು
ಅರಳು ಮರುಳಿನ ಆಟದ ಬದುಕಿನಲಿ ಸಮ ಬೆಸ ಯಾವುದು
ಅರಿತಿಹರಾರು ಅವನು ಬರೆದ ಕಣ್ಣು ಮುಚ್ಚಾಲೆಯೋಟದಲಿ
ಇರುಳು ಯಾರಿಗೆ ಬೆಳಕು ಬೀರಿದವರಿಗೋ ಆರಿಸಿದವರಿಗೋ
ಕೈಪಿಡಿದು ಕಾಪಾಡುವ ಅವನೊಬ್ಬನು ಎಣಿಕೆ ಹಾಕುತಿರುವನು.. ಜಗವಿಮೋಚಕ ೧೮೨ @ ೧೭೯೯...🙏🙏🙏💐💐💐
ಒಳಿತೆಂದು ಗೊಣಗಾಡುವ ಮನುಜನ‌ ಡಾಂಭಿಕತನವ ನೆನೆ ನೆನದು...
#ಜಗವಿಮೋಚಕ #yqdvkrddots #ಧರ್ಮ #ಕನ್ನಡ #ಬದುಕು  #ಜೀವನ #yqgoogle #yqthoughts

DIVAKAR D

ಗುರಿ ಮತ್ತು ಕನಸುಗಳು ನಮ್ಮದೇ ಆಗಿರಬೇಕೆ ವಿನಃ ಕೇಳುವವರದಾಗಿರಬಾರದು 💐💐💐 #ದಿವಾಕರ್ #yqdvkrddots #yqjogi #ಗುರಿ #ಕನಸು #ಕನ್ನಡ #yqgoogle #yqmandya

read more
ನಿಮ್ಮ‌ ಗುರಿ ಮತ್ತು ಕನಸುಗಳನ್ನು 
ಯಾರ ಬಳಿಯೂ ಹಂಚಿಕೊಳ್ಳಬೇಡಿ
ಕೆಲವರು ನಿಮ್ಮ ಜೊತೆಯಲ್ಲೆ ಇದ್ದು
ಲಾಭಕ್ಕೋಸ್ಕರ ನಿಮ್ಮನ್ನು ದಾಳದಂತೆ
ಉಪಯೋಗಿಸಿ ಕೊಳ್ಳುತ್ತಾರೆ... ಗುರಿ ಮತ್ತು ಕನಸುಗಳು ನಮ್ಮದೇ ಆಗಿರಬೇಕೆ ವಿನಃ ಕೇಳುವವರದಾಗಿರಬಾರದು 💐💐💐
#ದಿವಾಕರ್ #yqdvkrddots #yqjogi
#ಗುರಿ #ಕನಸು #ಕನ್ನಡ #yqgoogle #yqmandya

DIVAKAR D

ಜೀವನದ ಅಮೂಲ್ಯ ಕ್ಷಣಗಳನ್ನು ಕೊಲ್ಲಲು ಯಾರಿಗೂ ಅವಕಾಶ ನೀಡದಿರುವುದೊಳಿತು 💐💐💐 #ದಿವಾಕರ್ #yqdvkrddots #yqjogi #ಜೀವನ #ಬದುಕು #lifequotes #lifelessons #yqgoogle

read more
ಜೀವನದಲ್ಲಿ ಯಾರ ಅನುಮತಿಯಿಲ್ಲದೆ ಯಾರದೇ 
ಬದುಕಿನ ಅಮೂಲ್ಯ ಕ್ಷಣವನ್ನು ಯಾರು ಕೂಡ
ಹಾಳು‌ಮಾಡುಲು ಸಾಧ್ಯವಿಲ್ಲ  ಅಕಸ್ಮಾತ್ ಹಾಳು 
ಮಾಡಿದರೆ ಅದಕ್ಕೆ ಅವಕಾಶ ನೀಡಿದವರದೇ ತಪ್ಪೇ
ವಿನಃ ಹಾಳು ಮಾಡುವ ಬುದ್ದಿಯವರದು ಅಲ್ಲ.. ಜೀವನದ ಅಮೂಲ್ಯ ಕ್ಷಣಗಳನ್ನು ಕೊಲ್ಲಲು ಯಾರಿಗೂ ಅವಕಾಶ ನೀಡದಿರುವುದೊಳಿತು 💐💐💐
#ದಿವಾಕರ್ #yqdvkrddots #yqjogi #ಜೀವನ #ಬದುಕು #lifequotes #lifelessons #yqgoogle
loader
Home
Explore
Events
Notification
Profile