Nojoto: Largest Storytelling Platform

ನಾಗರಾಜ್ ಪೂಜಾರ್

#ಜಾನಪದ #yqjogi_kannada #yqkannadaquotes #ಸಾಹಿತ್ಯ #nagarajpoojar #ನಾಗರಾಜ್ ಪೋರಿ ನಿನ್ನ ನೋಡಲಾಕ , ಯಾರೋ ಏನೋ ಬರತಾರಂತ ಹುಬ್ಬಳ್ಳಿ ಆಗ ಇರುತ್ತಾರಂತೆ ಕಾರಿನ ಬರ್ತಾರಂತೆ.||

read more
ಪೋರಿ ನಿನ್ನ ನೋಡಲಾಕ ,
ಯಾರೋ ಏನೋ ಬರತಾರಂತ 
ಹುಬ್ಬಳ್ಳಿ ಆಗ ಇರುತ್ತಾರಂತೆ ಕಾರಿನಾಗ ಬರ್ತಾರಂತೆ.||

1)ಮಂಗಳವಾರ ಬರತಾರಂತ ಹೂವು,ಹಣ್ಣು ತರುತ್ತಾರಂತೆ ||
ಬಾರಿ ದೊಡ್ಡ ಸಾಹುಕಾರಂತ ಹೊಲ ಮನಿ ಇಲ್ಲಂತ.

2)ರೂಪದಲ್ಲಿ ರಾಮನಂತೆ ಶಕ್ತಿಯಲ್ಲಿ ಭೀಮನಂತೆ 
ಬಣ್ಣ ಬಾಳ ಬೆಳ್ಳಗಂತ ಕಣ್ಣು ಮಾತ್ರ ಮೆಳ್ಳತಂತ||

3)ಮೂರು ಮಜಿಲ್ ಬಿಲ್ಡಿಂಗ್ ಅಂತ ಮೂರೇ ಗೋಡೆ ನಿಂತಾವಂತ ||
ಕಾಲಿಗೊಂದು ಆಳದವಂತ ಕಾಲು ಮಾತ್ರ ಒಂದಿಲ್ಲಂತ. 

4)ದನಕರ ಬಾಳ ಅದಾವಂತ 28 ಆಳದವಂತ||
ಬಂಜಿ ರೋಗ ಹಿಡಿದಾವಂತ,
ಪೌಡರ್ ಹಾಲ ಕುಡಿತಾರಂತ.

5)BA,MA ಓದ್ಯಾನಂತ ಇಂಗ್ಲಿಷ್ ಮಾತ್ರ ಬರುದಿಲ್ಲಂತ  ,||
ನೌಕರಿ ಒಂದು ಹಿಡಿದಾನಂತ ಮುನ್ಸಿಪಾರ್ಟಿ ಸರ್ವಂಟoತ .

#ಜಾನಪದ
 #ಜಾನಪದ 
#yqjogi_kannada 
#yqkannadaquotes #ಸಾಹಿತ್ಯ 
#nagarajpoojar #ನಾಗರಾಜ್ 

ಪೋರಿ ನಿನ್ನ ನೋಡಲಾಕ ,
ಯಾರೋ ಏನೋ ಬರತಾರಂತ 
ಹುಬ್ಬಳ್ಳಿ ಆಗ ಇರುತ್ತಾರಂತೆ ಕಾರಿನ ಬರ್ತಾರಂತೆ.||

vikas Gowda b k

#ಜಾನಪದ #yqjogi #yqdidi #yqbaba #yqquotes #yqthoughts #yqkanmani #vikas gowda b k ಜನಪದ ಕಾವ್ಯ.

read more
ಪಕ್ದೂರ್ ಜಾತ್ರೆಗೆ ಒಂಟಿದ್ದೆ,ದಾರಿಲ್ ಬಂತು ಸಣ್ದಗ್ ಒಂದ್  ನಿದ್ದೆ
ಅಲ್ಲೇ ಇರೊ ಮರುದ್ಮೇಲೆ ಒರುಗ್ದೆ,ಹೆಚ್ರದ್ಮೇಲೆ ಒಂದ್ ಸುಂದ್ರಿ ನೋಡ್ದೆ

ಹ…ಹ ಎನ್ ಚಂದ ಅವ್ಳ್ಮಕ ,ಕಣ್ಣ ನೋಟ್ದಗೆ ಮಾಡುದ್ಲು ಮಂಕ
ಕೇಳುದ್ಲು ಯಾವ್ದೊ ಊರುನ್ ದಿಕ್ಕ,ಆವ್ಳ್ ಕೇಳಿದ್ ತಲ್ಪ್ ಲಿಲ್ಲ ನಂತಂಕ್ಕ

ಅತ್ರುಕ್ ಬಂದು ಕೇಳುದ್ಲು ಕಿರ್ದನೀಲಿ,ಏನ್ಮಡ್ಲಿ ಆವ್ಳ್ ಚೆಲ್ವೆ ತುಂಬಿತ್ತು ಕಣ್ಣಲ್ಲಿ
ವಾಸ್ನೆ ತಕ್ಕಂದ್ ನನ್ಕಳ್ ಮೂಗು ,ಹೇಳ್ತು ನೀನ್ ಆವ್ಳ್ ಹಿಂದೊಗು

ಅದು ಅಲ್ದೆ ಕಲ್ತಿದ್ಲು ವಸಿ ಇಂಗ್ಲೀಸು,ಅವ್ಳ್ ಮಾತಾಡೊ ಸ್ಯಲೀಗೆ ತೇಲ್ತು ಮನ್ಸು
ವಸಿ ಅನ್ಮನ ಬಂತು ಅಳ್ಮ್ಯಕೆ,ಆದ್ರು ಸುಮ್ಕಿದ್ದೆ ನಾನ್ ಜೋಕೆ

ತಿನ್ನಕ್ಕೆ ಕೊಟ್ಲು ಒಂದು "ಹಣ್ಣು" ,ತಿಂದ್ಮೇಲೆ ಮುಚ್ಚಿತ್ತು ನನ್ "ಕಣ್ಣು"
ಹ…ಹ ಪಾಪ ಆ ಸುಂದ್ರಿ "ಹೆಣ್ಣು",ಕಣ್ಬುಟ್ರೆ ಹೆರ್ಚುದ್ಲು ನನ್ಮೇಲೆ "ಮಣ್ಣು" #ಜಾನಪದ #yqjogi #yqdidi #yqbaba #yqquotes #yqthoughts #yqkanmani #vikas gowda b k ಜನಪದ ಕಾವ್ಯ.

Follow us on social media:

For Best Experience, Download Nojoto

Home
Explore
Events
Notification
Profile