Nojoto: Largest Storytelling Platform

Best ಭಾವಗೀತೆ Shayari, Status, Quotes, Stories

Find the Best ಭಾವಗೀತೆ Shayari, Status, Quotes from top creators only on Nojoto App. Also find trending photos & videos about

  • 4 Followers
  • 6 Stories

ಅವನಿ 💚

#ಕನ್ನಡ #ಭಾವಗೀತೆ #yqquotes #ಕನ್ನಡ_ಬರಹಗಳು

read more
ಹೆಣ್ಣು ಮಗಳು

ಜನಿಸಿ ಮನೆಯ ಬೆಳಕಾಗಿ/
ಬೆಳೆಯುವಳು ಹೆತ್ತವರ ಕನಸಾಗಿ/
ಸಹೋದರರಿಗೆ ತಾಯಿಯಾಗಿ/
ಮನೆಗೆ ಲಕ್ಷ್ಮಿಯ ಕಳೆಯಾಗಿ // ಫ //

ಸುತ್ತಮುತ್ತಲಿನವರಿಗೆ ಗೆಳತಿಯಂತೆ /
ಮಾತನಾಡುವಳು ಮುದ್ದು ಕೂಸಂತೆ /
ಇವಳು ತಂದೆಯ ಗೌರವವಂತೆ/
ತಾಯಿಗೆ ಇವಳೇ ಆಸರೆಯಂತೆ //ಅ ಫ //

ಮೆಟ್ಟಿದ ಮನೆಯ ಜ್ಯೋತಿ/
ಬಿಡಳು ತವರು ಮನೆಯ ನೀತಿ /
ಇವಳು ಸಂಸ್ಕೃತಿಯ ಪ್ರತೀಕ /
ಸಹನೆಗೆ ಇವಳೇ ಸಮಾನಾರ್ಥಕ //೧//

ಕನಸಹೊತ್ತು ನೂರು/
ಸೇರುವಳು ಗಂಡನ ಮನೆಯ ಸೂರು /
ಇವಳಿಗೆ ಪತಿಯೇ ದೇವರು /
ಜಗದಲಿ ಇವಳಿಗೆ ಸರಿಸಾಟಿ ಯಾರು??// ೨ //
 #ಕನ್ನಡ
#ಭಾವಗೀತೆ
#yqquotes
#ಕನ್ನಡ_ಬರಹಗಳು

ಅವನಿ 💚

#yqquotes #yqjogikannada #ಭಾವಗೀತೆ #ಕನ್ನಡ_ಬರಹಗಳು #ಕವಿತೆ

read more
ವಿಷಯ : ಬರಿದಾಯ್ತು ನನ್ನಮನ 
ಶೀರ್ಷಿಕೆ : "ವಿಧಿಯ ಆಟ"

ಕನಸಹೊತ್ತು ನಿನ್ನಡೆಗೆ ನಾ ಬಂದೆ
ನನಸು ಮಾಡಲು ನೀ ಬಂದು ನಿಂದೆ // ಫ //
ಮಂಗಳಸೂತ್ರದಿ ಬಾಳಿನ ಪಯಣವು
ಸಾಗುತಲಿತ್ತು ಮನೆತುಂಬಿ ಹರುಷವು // ಅ ಫ //

ಎಲ್ಲಿಂದ ಬಂದಿತೋ ತಿಳಿಸದೇ ವಿಧಿ
ನನ್ನಿಂದ ನಿನ್ನ ದೂರ ಮಾಡಿ
ನಗುತಲಿದೆ ಈ ಹಾಳು ದುರ್ವಿಧಿ
ಆ ಕ್ಷಣದಿಂದ ಬರಿದಾಯ್ತು ನನ್ನ ಮನ/೧/

ಕುಂತರು ನಿಂತರು ನಿನ್ನದೇ ಧ್ಯಾನ
ಜೀವಕೆ ಸ್ವಲ್ಪವೂ ಇಲ್ಲ ಸಮಾಧಾನ
ನೀ ನಿಲ್ಲದೆ ಬರಡಾದ ಜೀವನ
ಕಳೆಯಲಿ ಹೇಗೆ ನಾನು ಪ್ರತಿದಿನ /೨/

ನಿನ್ನ ನೆನಪಲಿ ಸಾಗಿದೆ ದಿನಚರಿ
ಕತ್ತಲನ್ನು ಆವರಿಸಿದೆ ನನ್ನ ದಾರಿ
ನಾಲ್ಕು ಜನಕೆ ನಾವಾಗಿದ್ದೆವು ಮಾದರಿ
ಹೇ ವಿಧಿಯೇ ನೀ ಮಾಡಿದ್ದು ಎಷ್ಟು ಸರಿ /೩/
 #yqquotes
#yqjogikannada
#ಭಾವಗೀತೆ
#ಕನ್ನಡ_ಬರಹಗಳು
#ಕವಿತೆ

Chidanand Mayachari

#ಕನ್ನಡಕವಿತೆ #ಸಂಗೀತ #ಭಾವಗೀತೆ #csmayachari poetry #Music #yqbaba #yqdidi

read more
ದೈವದತ್ತ ಸೃಷ್ಟಿ ಕೊಟ್ಟ ಸ್ವರಗಳೇಳೆ ಏಳು 
ನೂರು ರಾಗ ಹಲವು ತಾಳ ಮೇಳದಲ್ಲಿ ಲೀನ
ಕರ್ಣದಲ್ಲಿ ಬಿದ್ದ ಮೇಲೆ ನೃತ್ಯಬೆರೆತ ಜೀವನ 
ಕುಣಿಯದಂತ ದೇಹಉಂಟೆ ಇಲ್ಲಿಹೇಳು ತನನನ

ಹರಿಯ ಕೊಳಲು ಹರನ ಡಮರೆ ದೈವವು
ಭಕ್ತಿಮಾರ್ಗ ಮುಕ್ತಿಸ್ವರ್ಗ ಹೊತ್ತಿದೆ ಸಂಗೀತವು 
ಹಾಡಿ ಹಾಡಿ ದಾಸರರಿಯ ಕಂಡ ಮಾರ್ಗವು 
ನಾಡಿ ಮಿಡಿತ ಹೃದಯ ಬಡಿತವೆಲ್ಲ ನಾದವೆ 

ಹರಿವ ತೊರೆಯ ಬಳುಕು ನದಿಯ ಪಯಣವು 
ಕಡಲ ಅಲೆಯು ಭೋರ್ಗರೆದರದುವೆ ಸಂಗೀತವು 
ಹಕ್ಕಿ ಪಕ್ಷಿ ಅಳಿಲು ಗಿಳಿಯ ಮಾತೆ ಚೆಂದವು 
ರಸಿಕ ಮನವು ಕೇಳೊ ಶಬ್ದವೆಲ್ಲ ಸಂಗೀತವು 

ಸುಳಿವ ಗಾಳಿ ದ್ವನಿದ್ವನಿಸೊ ಬೆಟ್ಟಗುಡ್ಡದಲ್ಲಿಯೆ 
ಮಗುವ ನಗುವ ಹಿಂದೆ ಇಹುದು ತಾಯಿಲಾಲಿಯೆ 
ಬ್ರಹ್ಮಸೃಷ್ಟಿ ಮೂಲವೆಲ್ಲ ಇಟ್ಟ ಓಂಕಾರ ನಾದದಿ 
ಕವಿಯು ಬರೆವ ಕಾವ್ಯವೆಲ್ಲ ಇಡುವ ಸುನಾದದಿ  #ಕನ್ನಡಕವಿತೆ #ಸಂಗೀತ #ಭಾವಗೀತೆ #csmayachari #poetry #music #yqbaba #yqdidi

Shakthisuta

ಕಡಲೊಳಗೆ ಹನಿ ಹೀರಿ #csmayachari #ಭಾವಗೀತೆ #ಸಂಗೀತ #philosophy #musically

read more

Lakumikanda Mukunda

#WalkingInWoods #ಲಕುಮಿಕಂದ #ಭಾವಗೀತೆ #ಒಲವು

read more
ಭಾವಗೀತೆ 

 *ಮತ್ತೆ ಮೂಡದೆ ನಿನ್ನೊಲವು* 

ಬಾಳ ಚೆಂದ್ರಮ ಮೂಡಿರುವ
ಚೆನ್ನ ಒಲವಿಗೆ ತಡಕಾಡುವ
ಎದೆಯಾಳದಿ ನೀ ಗಮನಿಸದೆ
ಒಲವ ಸಾವಿನ ಒಳ ಭಾದೆ..

ಮರಳುತನವೇಕೆ  ಓ..ಮನ
ಎಲ್ಲಿ ಹೋಯ್ತು ನಿನ್ನ ಗಮನ‌‌..
ಇರುಳು ಕಾಡುವ ಭಾವಗಳು
ಕೊರಳ ಹಿಂಡಿವೆ ನೋವುಗಳು..

ಒಲವ ಕನಸಿನಾ ಕನ್ನಿಕೆಯೇ
ವಿರಹದುರಿಯ ನೀನರಿಯೇ.?
ಚೆಲುವ ಮನಸಿನ ಕಾವ್ಯವೇ
ನನ್ನೊಲವ ಸಾವನೆ ಸಾರಿವೆ..

ನೀನಿರದೆ ಜಗವಿದು ಮೌನ
ಮಿಡಿದ ಹೃದಯವೆ ಸ್ಥಂಬನ..
ಮತ್ತೆ ಮೂಡದೆ ಒಲವ ಸಾಲು
ಸಾಲುಗಟ್ಟಿದ ಕಂಬನಿಯಲು..

ನೀ ಬಾ ಬೇಗ ನನ್ನೋಲವೆ
ಉಸಿರೊಂದನು ಹಿಡಿದಿರುವೆ
ಒಡಲ ಸ್ವಪ್ನಗಳೇ ಮೈದಾಳಿ
ಸೂಸಲಿ ಪ್ರೇಮದ ತಂಗಾಳಿ..

- ಲಕುಮಿಕಂದ ಮುಕುಂದ

©Lakumikanda Mukunda #WalkingInWoods #ಲಕುಮಿಕಂದ #ಭಾವಗೀತೆ #ಒಲವು

Lakumikanda Mukunda

#ಲಕುಮಿಕಂದ #ನಾಮಕರಣ #ಭಾವಗೀತೆ

read more
ನವಪರ್ವ ಬಳಗದ ಭಾವಗೀತೆ ಸ್ಪರ್ಧೆಗಾಗಿ
ವಿಷಯ-ಸಮಾಗಮ

 *ನಾಮಕರಣ* 
ಧರಣಿಯ ಅಂಗಳಕ ಇಳದಾನ ಚೆಂದ್ರಾಮ
ಮಂಗಳ ಮೊಗದ ಮಿನಿರಾಮ..
ಸಾಸಿರ ಹೆಣ್ಮನವ ಕದ್ದಾನೋ ನಮ್ಮ ಶಾಮ
ಸಿರಿ ಸಗ್ಗವೇ ಇಳದೈತಿ ಆರಾಮ..

ನಲಿಯುವ ಗೊಲ್ಲಗ ಸುರದಾರ ಮಲ್ಲಿಗೆ
ಸರ್ದಾರ ಇವನೆಂತ ಬಲಭೀಮ..
ಉಲಿದಾವ ಹಕ್ಕಿ ಇಂಪಿನ ದನಿತೆಗೆದು
ಮೊಳಗೈತಿ ನಾದವು ಸರಿಗಮ..

ಮುತ್ತೈದೆ ಮಡಿಲಾಗ ನಸುನಕ್ಕ ಕಂದಮ್ಮ
ಕಂಡವರೆದಿಯಾಗ ಉಕ್ಕೇತಿ ಸಂಭ್ರಮ..
ಸುತೈದು ಹಳ್ಳ್ಯಾಗ ಇವನದ್ದೆ ಸುದ್ದಿ ಐತಿ
ಆಗೇತಿ ಪ್ರೇಮದ ಸಮಾಗಮ..

ಅಂದದ ಕಂದಗ ಹೆಸರಿಟ್ಟು ಹಾಡ್ಯಾರ
ಲಕುಮಿಕಂದಗ ಜೋಜೋ ಅಂದಾರ..
ಬಂದುರ ಬೆಡಗಿನ ಚೆಂದಾನಿ ಚೆಲುವ್ಯಾರು
ಮತ್ತೆದ್ದು ಮುದ್ದಾಡಿ ನಗತಾರ..

ಸಗ್ಗಕ್ಕೂ ಭೂಮಿಗೂ ಆಗೈತಿ ಸಂಗಮ
ಅಧಿಪತಿ ಇವನೆಂತ ಸುಂದರ..
ಅಕ್ಕರೆಯಿಂದ ತೊದಲ್ನುಡಿದ ಪದ ಕೇಳಿ
ಸಕ್ಕರೆ ಸವಿಗಿಣ್ಣು ಉಂಡಾರ..

-ಲಕುಮಿಕಂದ ಮುಕುಂದ

©Lakumikanda Mukunda #ಲಕುಮಿಕಂದ #ನಾಮಕರಣ #ಭಾವಗೀತೆ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile