Nojoto: Largest Storytelling Platform

Best ಸ್ಪೂರ್ತಿ Shayari, Status, Quotes, Stories

Find the Best ಸ್ಪೂರ್ತಿ Shayari, Status, Quotes from top creators only on Nojoto App. Also find trending photos & videos about ಸ್ಪೂರ್ತಿ ಪದದ ಅರ್ಥ, ಸ್ಫೂರ್ತಿ ಕವನ, ಸ್ಪೂರ್ತಿದಾಯಕ ಮಾತುಗಳು, ಸ್ಪೂರ್ತಿದಾಯಕ ಸಾಧನೆ ನುಡಿಮುತ್ತುಗಳು, ಸ್ಪೂರ್ತಿ ಕವನಗಳು,

  • 4 Followers
  • 8 Stories
    PopularLatestVideo

Amar Gudge

Aesthetic thoughts #ಹೈಕು #ಜೀವನ #ಸ್ಪೂರ್ತಿ #amargude life #Inspiration #yqbaba #openforcollab

read more
*ಹೈಕು*
ಅಕ್ಕರೆಯಾಸ್ತೆ
ಸಕ್ಕರೆ ಸವಿದಂತೆ
ದೂರಾದ ಕಷ್ಟ  Aesthetic thoughts #ಹೈಕು #ಜೀವನ #ಸ್ಪೂರ್ತಿ #amargude #life #inspiration #yqbaba #openforcollab

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸ್ಪೂರ್ತಿ

read more
ಬಂದಂತೆ ಬರೆಯುವೆ 
ಅದಕೆ ನೀನೇ ಸ್ಪೂರ್ತಿ 
ಕೈ ಹಿಡಿದು ನಡೆಸು
ನನಗೆ ಬೇಕಿಲ್ಲ ಕೀರ್ತಿ 
ನಿನ್ನ ಪ್ರೋತ್ಸಾಹದ 
ಒಂದು ಬೆರಳ ಹಿಡಿದು 
ನಾ ಬೆಳೆವೆ ಲತೆಯಂತೆ 
ನನ್ನ ಕಾಯಲಿ ಅಲ್ಲಿ ನಿನ್ನ
ತಾಯಿ ಹೃದಯದ ಮಮತೆ 

*ಅಮು ಭಾವಜೀವಿ* #ಸ್ಪೂರ್ತಿ

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಸ್ಪೂರ್ತಿ

read more
*ಸ್ಪೂರ್ತಿ*

ಮುಸ್ಸಂಜೆಯು ಕರಗುತಿದೆ 
ಕಗ್ಗತ್ತಲು ಕೊರಗುತಿದೆ
ಬೆಳದಿಂಗಳ ನೀನಾಗಿ ಬಾ ಗೆಳತಿ 
ಕಾರ್ಮೋಡ ಚದುರುತಿದೆ
ಈ ಭೂಮಿ ಬಾಯಾರುತಿದೆ
ಮಳೆಯಾಗಿ ಸುರಿದು ತಾ ಪ್ರೀತಿ 

ಸುಮವೀಗ ಬಾಡುತಿದೆ
ದುಂಬಿ ಮಧುವ ಹುಡುಕುತಿದೆ
ನಂಬಿಕೆಯ ನೆರಳು ನೀನಾಗು ಬಾ
ಸಾಗರ ಮೌನವಾಗಿದೆ
ತೀರ ಬೇಸರಗೊಂಡಿದೆ
ಉಕ್ಕುವ ತೆರೆ ನೀನಾಗಿ ಬಾ

ನೀಲ ಬಾನಿನ ನೀರವತೆಗೆ
ನಿಸರ್ಗ ನಿಲುವಿನ ಗಂಭೀರತೆಗೆ
ನೀಲವೇಣಿ ನೀ ತಂಗಾಳಿ ಬೀಸಿ ಬಾ
ಮರುಭೂಮಿಯ ಮರುಕಕೆ
ಮಲೆನಾಡಿನ ಆತಂಕಕೆ
ಸ್ವಂತಿಕೆ ಸ್ವರ್ಗವನು ನೀ ತಾ

ಈ ಬದುಕು ಸಾಕಾಗಿದೆ 
ನೀ ನನಗೆ ಬೇಕಾಗಿದೆ
ಗೆಳತಿ ನೀ ನನ್ನ ಶಕ್ತಿ 
ಬೆನ್ನ ಹಿಂದೆ ನೀನಿರಬೇಕು
ಸರಿದಾರಿಗೆ ನನ್ನ ನಡೆಸಬೇಕು 
ಅದಕೆಲ್ಲ ನನಗೆ ನೀನೇ ಸ್ಪೂರ್ತಿ 

0620ಪಿಎಂ07032018

*ಅಮು ಭಾವಜೀವಿ*
 #ಸ್ಪೂರ್ತಿ

ಸುಮಾ ರಮೇಶ್

#ಬರವಣಿಗೆ #ಆತ್ಮಾವಲೋಕನ #ಸಾಂತ್ವನ #ಸ್ಪೂರ್ತಿ #yqjogi_kannada #yqjogikannada #yqbaba #yqjogi

read more
ನಾನು ಬರೆಯುವುದು‌ ಪರರಿಗೆ ಸ್ಪೂರ್ತಿ 
ನೀಡುವುದೋ, ಇಲ್ಲವೋ ತಿಳಿಯದು ನನಗೆ, 
ಆದರಿದು ಆತ್ಮಾವಲೋಕನದ ಹೆಬ್ಬಾಗಿಲು ನನಗೆ; ನೆಮ್ಮದಿಯ ಸಾಂತ್ವನ ಜೊತೆಗೆ! #ಬರವಣಿಗೆ #ಆತ್ಮಾವಲೋಕನ #ಸಾಂತ್ವನ #ಸ್ಪೂರ್ತಿ #yqjogi_kannada #yqjogikannada #yqbaba #yqjogi

ಸುಮಾ ರಮೇಶ್

#ಆದರ #ನಿರ್ಲಕ್ಷ #ನೋವು #ಸ್ಪೂರ್ತಿ #yqjogi_kannada #yqjogikannada #yqjogi #yqbhaijan

read more
ಬೇರೆಯವರಿಂದ ದೊರೆತ ಪ್ರೀತಿಯಾದರ ಮನದುಂಬಿ ಕಣ್ತುಳುಕಿಸಿ ಪ್ರೇರಣೆಯಾದರೆ; ನಮ್ಮವರ ನಿರ್ಲಕ್ಷ್ಯದ 
ಅನಾದರ ಮನದ ಮೂಲೆಯಲ್ಲಿ ನೋವಿನ ಸೆಳೆತ 
ಮೂಡಿಸಿ ಮರೆಯದ ಕಹಿ ನೆನಪನ್ನಾಗಿಸುತ್ತದೆ! #ಆದರ #ನಿರ್ಲಕ್ಷ #ನೋವು #ಸ್ಪೂರ್ತಿ #yqjogi_kannada #yqjogikannada #yqjogi #yqbhaijan

ಸುಮಾ ರಮೇಶ್

#ತುಳಸಿ #ಹುಟ್ಟು_ಹಬ್ಬದ_ಶುಭಾಷಯಗಳು #ಸ್ಪೂರ್ತಿ #ಕಲಾತಪಸ್ವಿ #yqjogikannada #yqjogi #yqjogi

read more
ಉತ್ಸಾಹದ ಉಕ್ಕುವ ಜೀವನದಿ, 
ಚೈತನ್ಯದ‌ ಬತ್ತದ ಚಿಲುಮೆ,
ನೃತ್ಯ  ಸಾಹಿತ್ಯ ಸಂಗೀತ ತ್ರಿವೇಣಿ 
ಸಂಗಮದ ಕಲಾ ತಪಸ್ವಿನಿ , 
ಸಾಧನೆಯ ಮೈಲಿಗಲ್ಲುಗಳ ಒಡತಿ, 
ನಗೆ ಬುಗ್ಗೆಯ ಸಂತಸದ ಝರಿ, 
ಗುರು ಸ್ಥಾನದಲ್ಲಿನ ಮಾತೃಹೃದಯಿ,
ನೀವೆಂದರೆ ನಮ್ಮ  ಬದುಕಿಗೆ 
ನಿರಂತರ ಸ್ಫೂರ್ತಿ... #ತುಳಸಿ #ಹುಟ್ಟು_ಹಬ್ಬದ_ಶುಭಾಷಯಗಳು #ಸ್ಪೂರ್ತಿ #ಕಲಾತಪಸ್ವಿ #yqjogikannada #yqjogi #yqjogi

ನಾಗರಾಜ್ ಪೂಜಾರ್

#nagarajpoojar #ನೋವು #ಗುಟ್ಟು #ಇರಬೇಕು #ಸ್ಪೂರ್ತಿ #ಗೆಲುವು #ಮನ #yqjogi_kannada

read more
ಗುಟ್ಟೊಂದು ಇರಬೇಕು 
ರಟ್ಟಾಗದಂತೆ ,
ನೋವೊಂದು ಇರಬೇಕು 
ಮರೆಯಲಾಗದಂತೆ
ಗೆಲುವೊಂದಿರಬೇಕು  
ಸ್ಪೂರ್ತಿ ನೀಡುವಂತೆ.....!!
ನಗುತ್ತಲೇ ಇರಬೇಕು ಮನದೊಳಗಿನ 
ನೋವು ಕಾಣದಂತೆ.

     #nagarajpoojar #ನೋವು #ಗುಟ್ಟು #ಇರಬೇಕು 
#ಸ್ಪೂರ್ತಿ #ಗೆಲುವು #ಮನ #yqjogi_kannada

ನಾಗರಾಜ್ ಪೂಜಾರ್

#nagarajpoojar #Happy 🆕 year #ಸ್ಪೂರ್ತಿ #kannadaquotes #Advance #HappyNewYear

read more
ಹೊಸವರ್ಷ ಬರಲಿ 
ಹೊಸತನ್ನು ತರಲಿ ,
ಆ ಹೊಸತನ ನಿಮ್ಮ ವ್ಯಕ್ತಿತ್ವವನ್ನು 
ಬದಲಾಯಿಸುವಂತೆ ಇರಲಿ 
ಬದಲಾದ ವ್ಯಕ್ತಿತ್ವ ಮತ್ತೊಬ್ಬರಿಗೆ 
ಸ್ಪೂರ್ತಿ ತರುವಂತಿರಲಿ. #nagarajpoojar #happy 🆕 year
#ಸ್ಪೂರ್ತಿ #kannadaquotes  #advance #happynewyear


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile