Nojoto: Largest Storytelling Platform

Best ಸಹಜ Shayari, Status, Quotes, Stories

Find the Best ಸಹಜ Shayari, Status, Quotes from top creators only on Nojoto App. Also find trending photos & videos about ಸಹಜ meaning in english, ಸಹಜ ಸುಂದರ ಸೃಷ್ಟಿ ಮಂದಿರ, ಸಹಜ ಕೃಷಿ pdf, ಸಹಜ ಕೃಷಿ ಪುಸ್ತಕ, ಸಹಜ ವಿರುದ್ಧ ಪದ,

  • 3 Followers
  • 4 Stories
    PopularLatestVideo

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ

#ಇದು #ಸಹಜ

read more
ಇದು ಸಹಜ 
========
ಇದು ಸಹಜ
ತಿಳಿಯೋ ಓ ಮನುಜ

ಬುಡ ಒಣಗಿದ ಮೇಲೆ
ಸುಡದಿರುವರೇ ಜನ
ಸುಡುವ ಕಿಡಿ ತಾಗಿದರೆ
ನೋಯದಿರುವುದೇ ಮನ

ಹೂ ಅರಳಿ ನಗುತಲಿದ್ದರೆ
ಕೈ ಕೀಳದೆ ಸುಮ್ಮನಿರುವುದೇ
ಮನದೊಳಗಣ ಭಾವನೆಗಳ 
ಮೊಗ ತೋರದೇ ಮರೆಮಾಚುವುದೇ

ಅಮಾವಾಸ್ಯೆಯ ದಿನದಂದು ಕಾಣಬಹುದೇ
ಆ ಬೆಳದಿಂಗಳ ಚೆಲುವ
ಬರವಿದ್ದರೂ ವಸಂತ ಬಂದಾಗ
ಚಿಗುರದೆ ಇರುವುದೇ ನಿಸರ್ಗ

ನವ ಮಾಸ ತುಂಬಿದ ಮೇಲೂ
ಗರ್ಭದಲ್ಲೇ ಉಳಿಯುವುದೇ ಭ್ರೂಣ
ಸಾವು ಬಂದು ಕರೆವಾಗ
ದೇಹವನ್ನು ತೊರೆಯದಿರುವುದೇ ಪ್ರಾಣ

ಆರಂಭ ಎಷ್ಟು ಸತ್ಯವೋ
ಅಂತ್ಯವೂ ಕೂಡ ಅಷ್ಟೇ ಸತ್ಯ

*ಅಮ ಭಾವಜೀವಿ*
 #ಇದು #ಸಹಜ

ಸುಮಾ ರಮೇಶ್

#ನೋವುನಲಿವು #ಸಹಜ #ಪ್ರೀತಿ #yqjogikannada #yqjogi #yqbaba

read more
ಬೆಳದಿಂಗಳ ತಂಪಿನಲ್ಲಿ ತಣಿಯಬೇಕೆಂದೆ; 
ಇರುಳಲ್ಲಿ ಹೊಸ್ತಿಲ ಹೊರಗಡಿಯಿಟ್ಟೆ,
ಗುಲಾಬಿ ಬನದಲ್ಲಿ ಅಡ್ಡಾಡಬೇಕೆಂದೆ; 
ಮೈಮೇಲೆ ಮುಳ್ಳಿನ ಗೀರುಗಳ ಸಹಿಸಿಕೊಂಡೆ,
ತಿಂದನ್ನ ಅರಗಲೆಂದಾಶಿಸಿದೆ; 
ಕುಳಿತಲ್ಲಿಂದೆದ್ದು ಮೈಲು ದೂರ
ಓಡಿ ಬೆವರಿ ಬಸವಳಿದೆ,
ಸಹಜ ಪ್ರೀತಿ ಸಿಗಲೆಂದು ಬಯಸಿದೆ;
ನಾನೆಂಬ ಚಿಪ್ಪಿನೊಳಗಿಂದ
ಹೊರಬಂದು ನಾವೆಂಬ 
ಹೊಳೆವ ಸ್ವಾತಿ ಮುತ್ತಾದೆ! #ನೋವುನಲಿವು #ಸಹಜ #ಪ್ರೀತಿ #yqjogikannada #yqjogi #yqbaba

ಸುಮಾ ರಮೇಶ್

#ಸಹಜ #yqkannadaquotes #yqjogikannada

read more
ಸಹಜವಾಗಿರು, ಹಾಗಿರಲು ಪ್ರಯತ್ನಿಸದಿರು. #ಸಹಜ #yqkannadaquotes #yqjogikannada

ನಾಗರಾಜ್ ಪೂಜಾರ್

ಮತ್ತೊಬ್ಬರು ಊಟ ಮಾಡಿ ಬಿಟ್ಟ 
ತಟ್ಟೆಯನ್ನು ಮತ್ತೊಮ್ಮೆ ,
ತೊಳೆದು ಊಟ ಮಾಡುವುದು ಸಹಜ 
ಹಾಗೇನೆ ❗
ಮತ್ತೊಬ್ಬರು ಮಾಡಿದ ತಪ್ಪನ್ನು ನೋಡಿ
ತಿದ್ದಿಕೊಂಡು ಬದುಕಿನಲ್ಲಿ ಬದಲಾಗಿ
ಬಾಳುವುದಿಲ್ಲ  ಯಾಕಿ ಮನುಜ . #nagarajpoojar 
#yqkannada #yqthoughts #yqjogi_kannada #yqjogiyqkannada 
#ಸಹಜ #ಮನುಜ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile