Nojoto: Largest Storytelling Platform

Best ಅವನು Shayari, Status, Quotes, Stories

Find the Best ಅವನು Shayari, Status, Quotes from top creators only on Nojoto App. Also find trending photos & videos about ಅವನು meaning english, ಅವನು ಮತ್ತು ಶ್ರಾವಣಿ ಧಾರಾವಾಹಿ, ಅವನು ಮತ್ತು ಶ್ರಾವಣಿ, ಅವನು ಮತ್ತೆ ಶ್ರಾವಣಿ ಧಾರಾವಾಹಿ, ಅವನು ಮತ್ತೆ ಶ್ರಾವಣಿ,

  • 22 Followers
  • 88 Stories
    PopularLatestVideo

ರಘು ಶಿವಸ್ವಾಮಿ

..... #ಕನ್ನಡ #kannadaquotes #ಅವನು #YourQuoteAndMine Collaborating with Chaithra K Nadig

read more
ಅವಳು...
ಬಾಳ ಪಯಣದಲಿ ಜೊತೆಗಿರುವೆನೆಂದು ಹೇಳಿದವಳು. .....
#ಕನ್ನಡ #kannadaquotes #ಅವನು  #YourQuoteAndMine
Collaborating with Chaithra K Nadig

d.p cherie

ಅವನೆಲ್ಲಿರುವನೋ!!! #dpcherie #yqjogi_kannada #ಅವನು

read more
ವಯಸ್ಸಿನ ವನವಾಸಕ್ಕೆ,
ಮನಸ್ಸಿನ ಪರಿಹಾಸಕ್ಕೆ,
ಜೊತೆಯಂತು ಬೇಕೆ ಬೇಕು...
ಆದರದಕೆ,,
ಹುಡುಕಾಟವು ಬೇಡ,
ಕೆದಕಾಟವು ಬೇಡ,
ಎದುರಾಗುವ ಕ್ಷಣ ಸಾಕು!!!
ಹೃದಯ ತಂತಾನೇ ಮಿಡಿಯುವುದು,,
ನಿನ್ನ ಜೊತೆಯಾಗುವ ಕಥೆಗಾರ, ಇವನೇ ಎಂದು..

ಆ ದಿನಕಾಗೆ ಕಾಯುತಿರುವೆ..
ಆ ಕ್ಷಣವನ್ನೇ ಬಯಸುತಿರುವೆ...— % & ಅವನೆಲ್ಲಿರುವನೋ!!!
#dpcherie #yqjogi_kannada #ಅವನು

d.p cherie

ಆ ಮನಸನ್ನು ಕಾಯುತ್ತ... #dpcherie #ಮನಸು #ಅವನು #ಗೆಳೆಯ #ಇನಿಯ #yqjogi_kannada

read more
ಹೇ ಗೆಳೆಯನೇ,
ಇನಿಯನೇ,,
ನೀ ಊಹಿಸುವ ಲೋಕವನ್ನು
ನಾ ಸಿಂಗರಿಸುವೆ...
ನೀ ನಡೆವ ಹಾದಿಯಲ್ಲಿ,
ತಿರುವು ನಾನಾಗುವೆ...

ಕುಳಿತಲ್ಲಿ ಕನಸಾಗಿ,
ನೀ ನೆನೆವ ನೆನಪಾಗಿ,
ನೆಪವಿಲ್ಲದ ಒಲವಾಗಿ,
ಅಂತ್ಯವೇ ಇಲ್ಲದ ಚಿಲುಮೆಯಾಗುವೆ....

ನಿನ್ನ ಪ್ರೀತಿಯ ಕಡಲನ್ನು,
ಸುತ್ತರಿದ ಭೂಮಿ ನಾನಾಗ ಬಯಸುವೆ...

 ಆ ಮನಸನ್ನು ಕಾಯುತ್ತ...
#dpcherie #ಮನಸು #ಅವನು #ಗೆಳೆಯ #ಇನಿಯ #yqjogi_kannada

d.p cherie

ಅವನಾರು??! #ಅವನು #ಅವನಾರು #ಚಂದಿರ #dpcherie #yqjogi_kannada ##yqkannada

read more
ನನ್ನೆದೆಯ ಇನಿದನಿ, ಗಾಳಿಯ ಗೆಳೆತನದಿ, 
ನಿನ್ನೊಲುಮೆಯ ಗೂಡು ಸೇರುವ ಬಯಕೆ ತಂದಿದೆ.. 
ಪ್ರೀತಿಹಕ್ಕಿ ಹೊತ್ತು ತರುವ ಉತ್ತರಕ್ಕಾಗಿ ಕಾದು ಕುಳಿತಿದೆ... 
ಚಂದಿರನ ಸಂಗ ಸೇರಿ, ಕನಸೊಂದ ಕಟ್ಟಿರುವ ಈ ಮುದ್ದು ಚೆಲುವೆಗೆ!
ಅರಸನಾಗುವ ಕಲಿ ಯಾರೆಂಬ ತವಕ ದಿಕ್ಕು ದಿಕ್ಕಲ್ಲು ಮನೆ ಮಾಡಿದೆ...
ಅವನಾರಿರಬಹುದು???   ಅವನಾರು??!
#ಅವನು #ಅವನಾರು #ಚಂದಿರ #dpcherie #yqjogi_kannada ##yqkannada

d.p cherie

ಅವನ ನೋಡುವ ಕಾತರ ಕಣ್ಣಲ್ಲಿ ಮನೆಮಾಡಿದೆ🙇‍♀️ #ಅವನು #ಅವನಿಗಾಗಿ #ಪ್ರೀತಿ #ಪ್ರೀತಿಬರಹ #ಪ್ರೇಮಿ #yqkannadaquotes #dpcherie

read more
ಅವನು,, 
ದಿನರಾತ್ರಿ ಕನಸಲ್ಲಿ, ಇಣುಕಿಣುಕಿ ಕಾಡುವನು... 
ಕಣ್ಣಿಗೆ ಕಾಣದೆ, ಮರೆಯಲ್ಲೆ ನಿಲ್ಲುವನು... 
ವರುಷಗಳ ಒಂಟಿತನ ದೂರ ತಳ್ಳುವವನು,, 
ಎದುರಾಗು ಒಮ್ಮೆ, ಓ ಗೆಳೆಯ,, ಬೇಡ ಮತ್ತೇನು... 

ಮನದಾಳದ ಸಾವಿರ ಮಾತು ಹೇಳೋದಿದೆ,, 
ನಿನ್ನಿಷ್ಟ ಕಷ್ಟಗಳನು ಅರಿಯೋದಿದೆ.. 
ಹೆಜ್ಜೆ ಹೆಜ್ಜೆಗೂ ಜೊತೆಗೂಡುವೆ ಎಡೆಬಿಡದೆ... 
ಅವನ್ಯಾರೊ, ಎಲ್ಲಿರುವನೊ? ಎಂದು ಕಂಗಳು ಹುಡುಕಾಡಿದೆ!! ಅವನ ನೋಡುವ ಕಾತರ ಕಣ್ಣಲ್ಲಿ ಮನೆಮಾಡಿದೆ🙇‍♀️
#ಅವನು #ಅವನಿಗಾಗಿ #ಪ್ರೀತಿ #ಪ್ರೀತಿಬರಹ #ಪ್ರೇಮಿ #yqkannadaquotes #dpcherie

Vinaya Hegde

#ಅವನು #ನಲ್ಲ #ನಿಶ್ಯಬ್ಧ #ಕನ್ನಡ_ಬರಹಗಳು #yqjogi_kannada

read more
ನಾ ಇಡುವ
ಪ್ರತಿ ಹೆಜ್ಜೆಗಳಿಗೆ
ಗೆಜ್ಜೆಗಳ ತೊಡಿಸಿ
ಸಂಭ್ರಮಿಸುವ ಅವ
'ನಲ್ಲ'...  #ಅವನು #ನಲ್ಲ #ನಿಶ್ಯಬ್ಧ
 #ಕನ್ನಡ_ಬರಹಗಳು #yqjogi_kannada

Vinaya Hegde

ನೀಳ ಜಡೆಯನು ಹಣೆದು ಕಾಡು ಮಲ್ಲಿಗೆಯ ಮುಡಿದು ಲಜ್ಜೆಯ ಭಾವದಲಿ‌ ಮೆರೆದು ಬಾಗಿಲಲಿ ನಾ ಕಾದು ನಿಂತರೂ ಅವನ್ಯಾಕೊ ಇಂದು ಬರಲೇ ಇಲ್ಲ ರಂಗೋಲಿಗೆ ಬಣ್ಣವ ಸುರಿದು ಸೀರೆಗೆ ನೆರಿಗೆಯ ಹಿಡಿದು #yqjogi_kannada #ಅವನು #ನಿಶ್ಯಬ್ದ #ಕನ್ನಡ_ಬರಹಗಳು

read more
ಅವನ್ಯಾಕೊ ಇಂದು ಬರಲೇ ಇಲ್ಲ... 

(ಕಣ್ಣು ಅಡಿಬರಹದೆಡೆಗೆ) ನೀಳ ಜಡೆಯನು ಹಣೆದು
ಕಾಡು ಮಲ್ಲಿಗೆಯ ಮುಡಿದು
ಲಜ್ಜೆಯ ಭಾವದಲಿ‌ ಮೆರೆದು
ಬಾಗಿಲಲಿ ನಾ ಕಾದು ನಿಂತರೂ
ಅವನ್ಯಾಕೊ ಇಂದು ಬರಲೇ ಇಲ್ಲ

ರಂಗೋಲಿಗೆ ಬಣ್ಣವ ಸುರಿದು
ಸೀರೆಗೆ ನೆರಿಗೆಯ ಹಿಡಿದು

Vinaya Hegde

ಓಯ್.. ಕರೆದು ನೋಡಬೇಕೆನಿಸಿತು ಗೆಳೆಯ, ಎಲ್ಲಾದರೂ ಅದ ಕೇಳಿ ಮರಳಿ ಬರುವೆಯೇನೊ ಎಂಬುದು ನನ್ನ ಹುಂಬು ವಿಶ್ವಾಸ. ಇದೇ ಈ ಮರಳು ರಾಶಿಯ ಮೇಲೆ ನಿನಗೆ ಮರುಳಾಗಿ, ಜೊತೆ ಸೇರಿ ನಡೆದದ್ದಲ್ಲವೇ ನಾನು. ಪದೇ ಪದೇ ಪಾದಗಳನ್ನು ಸೋಕುವ ಶರಧಿ, ಇಟ್ಟ ಹೆಜ್ಜೆಗಳನ್ನು ತನ್ನೊಳಗೆ ಅಚ್ಚಾಗಿಸಿ ಬಿಗಿದಪ್ಪಿಹ ಕಿನಾರೆ. ಕಾವೇರಿದ ಹೃದಯವನು ಸಮಾಧಾನಿಸೊ ಸಿಹಿ ತಂಗಾಳಿ. ಜೊತೆಗೆ‌.!? #yqjogi_kannada #ಅವನು #ನಿಶ್ಯಬ್ದ #ಕನ್ನಡ_ಬರಹಗಳು

read more
ಓಯ್...

(ಕಣ್ಣು ಅಡಿಬರಹದೆಡೆಗೆ) 

ಓಯ್..

         ಕರೆದು ನೋಡಬೇಕೆನಿಸಿತು ಗೆಳೆಯ, ಎಲ್ಲಾದರೂ ಅದ ಕೇಳಿ ಮರಳಿ ಬರುವೆಯೇನೊ ಎಂಬುದು ನನ್ನ ಹುಂಬು ವಿಶ್ವಾಸ. ಇದೇ ಈ ಮರಳು ರಾಶಿಯ ಮೇಲೆ ನಿನಗೆ ಮರುಳಾಗಿ, ಜೊತೆ ಸೇರಿ ನಡೆದದ್ದಲ್ಲವೇ ನಾನು. ಪದೇ ಪದೇ ಪಾದಗಳನ್ನು ಸೋಕುವ ಶರಧಿ, ಇಟ್ಟ ಹೆಜ್ಜೆಗಳನ್ನು ತನ್ನೊಳಗೆ ಅಚ್ಚಾಗಿಸಿ ಬಿಗಿದಪ್ಪಿಹ ಕಿನಾರೆ. ಕಾವೇರಿದ ಹೃದಯವನು ಸಮಾಧಾನಿಸೊ ಸಿಹಿ ತಂಗಾಳಿ. 

ಜೊತೆಗೆ‌.!?

Vinaya Hegde

#ಅವನು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

read more
ಏನಾದರೂ ಗೀಚಿಬಿಡುವೆ
ನೀ ಪ್ರೀತಿಯ ಹೆಸರಿನಲಿ
ಈ ಮನದ ದುಗುಡವ
ನಾ ಹೇಗೆ ತಿಳಿಸಲಿ

ಎಂದು ನಿನ್ನ ಪ್ರೀತಿ ಅರಮನೆಯಲಿ
ಪ್ರೇಮ ಖೈದಿಯಾದೆನೊ
ಅಂದೇ ವರಿಸಿದೆ ನಿನ್ನನ್ನು
ಮನದ ಮಂಟಪದಲಿ ನಿಂತು

ಒಯ್ ಎಂಬ ಪದ ಸಾಕು
ತರಂಗದಲೆಗಳನೇಳಿಸಲು ನನ್ನಲ್ಲಿ
ನಿನ್ನ ನೆನಪಿನ ಅಮಲಿನಲೇ
ಹುಚ್ಚಿಯಾಗಿ ಬಿಡುವೆ ನಾನಿಲ್ಲಿ

ಕಚ್ಚಿ ಹೇಳುವೆ ಇನಿಯ
ಪದೆಪದೆ ಕಾಡದಿರು
ಒಂಟಿಯಾಗಿದೆ ಹೃದಯ
ನೀ ಬಂದು ಸೇರಿಬಿಡು #ಅವನು #ನಿಶ್ಯಬ್ದ #ಕನ್ನಡ_ಬರಹಗಳು #kannadaquotes #yqjogi_kannada

ರಂಜಿತಾ ಸೋಮಶೇಖರ್ ❤️

ನಿನ್ನೊಲವ ಬಂಧೀಖಾನೆಯಲ್ಲಿ ಬಿಡುಗಡೆಯನ್ನೇ ಬಯಸದ ಖಾಯಂ ಬಂಧಿ ನಾನು.... ❤️💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಅವನು #ನನ್ನವನು #ಅವನೊಲವು #ಒಲವ_ಅನುಬಂಧ

read more
ನನ್ಮನದ ಒಲವನ್ನೆಲ್ಲಾ ನಿನ್ಮನಕೆ ಎರಕ ಹೊಯ್ದಾಗಲೇ ನನಗರಿವಾಗಿದ್ದು..!
ನನ್ಹೃದಯವಿದು ನಿನ್ನ ಅಧೀನದಲ್ಲಿ ಬಿಡಿಸಿಕೊಳ್ಳಲಾರದಂತೆ ಬಂಧಿಯಾಗಿ ಹೋಗಿತ್ತೆಂದು 🙈💓
 ನಿನ್ನೊಲವ ಬಂಧೀಖಾನೆಯಲ್ಲಿ ಬಿಡುಗಡೆಯನ್ನೇ ಬಯಸದ ಖಾಯಂ ಬಂಧಿ ನಾನು.... ❤️💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು #ನನ್ನವನು #ಅವನೊಲವು #ಒಲವ_ಅನುಬಂಧ
loader
Home
Explore
Events
Notification
Profile