Nojoto: Largest Storytelling Platform

New good morning kannada kavanagalu Quotes, Status, Photo, Video

Find the Latest Status about good morning kannada kavanagalu from top creators only on Nojoto App. Also find trending photos & videos about, good morning kannada kavanagalu.

Stories related to good morning kannada kavanagalu

    LatestPopularVideo

Rashmitha

Rajugouda Patil

N K

Jaison Lobo

Alone  ತೋರಿಕೆ 

ಹೊರಗೆ ಹೊಳಪು
ಒಳಗೆ ಕೊಳಕು!!!
ಮನದಲ್ಲಿ ಹುಳುಕು
ಮನೆಯಲ್ಲಿ ಒಡಕು
ಮಾತಲ್ಲಿ ಮೆರುಗು
ಕೃತಿಯಲ್ಲಿ ಅಳುಕು
ಒಟ್ಟಿನಲ್ಲಿ, ದೈನಂದಿನ ಜೀವನ, ಕಪ್ಪು ಬಿಳುಪು,!!!!
ಆದರೂ ತೋರಿಕೆ ಮಾತ್ರ, ಬಣ್ಣದ ತಳುಕು!!

ಫ್ರಾಜೆಲೊ. #kannadapoem #kannadakavana
#kannada #kavanagalu #kavana 
 #kannadasahithya  #sirigannadamgelge
#kavithegalukannada

Dr Anapu

ಭಾವನೆಗಳ ಅನುಯಾಯಿ. #inspirationalquotes #lovequotes #lifequotes #kannada #kavanagalu #kavitegalu #feelings

read more
ಭಾವಾನುಯಾಯಿ

ಕತ್ತಲೆಯಲ್ಲಿ ಕಂಡ ಕನಸು
ಕತ್ತು ಹಿಸುಕಿತ್ತು ಕಣ್ತೆರೆಯುವಾಗ

ಹೀಗೊಂದು ಮೌನ ಏತಕೆ
ಬರಗಾಲದಲ್ಲಿ ಬಿರುಕು ಬಿಡುವ 
ಕೆರೆಯ ಒಡಲಂತೆ
ಮನದ ಹೂಳೆತ್ತುವರಾರಿಲ್ಲಿ

ಕಪ್ಪು ಬಿಳುಪು ಬದುಕಿನೆರೆಡು ನಾಣ್ಯ
ಬವಣೆಯನ್ನು ಕಿತ್ತು ಬಡಿದಾಡಿದೆ ಜೀವ 
ಮೂಕ ವೇದನೆಯಲಿ ನೊಂದ ಜೀವವಾಗಿ
ಬತ್ತಿ ಹೋದ ಬದುಕಿನಲಿ ಬರುವವರು ಯಾರು.

ಹುಳಿ ಹಿಂಡಿ ಜೀವನವ ಹೆಪ್ಪು ಮಾಡುವವರೇ ಹೆಚ್ಚು
ಬಿಕ್ಕಳಿಸಿದರೆ ಅಕ್ಕಪಕ್ಕದವರು ನಗುವರು
ನೆತ್ತಿಯ ಮೇಲಿನ ಸೂರು ಸೋರುತ್ತಿದ್ದರು
ಬಿಸಿಯುಸಿರು ಹೇಳುತಿದೆ ನೀ ಮೌನಿಯಾಗು.

ನೆಚ್ಚಿದವರು ಇಲ್ಲಿಯವರೆಗೆ ಬಂದಾರು
ಬದುಕಿನ ಬಿಸಿಲಿಗೆ ತತ್ತರಿಸಿ ಭಯದಿ
ಬತ್ತಿಹೋದರೂ ಮತ್ತಾವ ದಾರಿಯಿದೆ
ಇದೆ ಒಂದೇ ದಾರಿ ಇಹ ಲೋಕದ ದಾರಿ.

ಅನಪು
ಅರವಿಂದ್ ಎನ್ ಪಿ ಭಾವನೆಗಳ ಅನುಯಾಯಿ.
#inspirationalquotes #lovequotes #lifequotes #kannada #kavanagalu #kavitegalu #feelings

Crazy Kudla

kannada kavanagalu ನಾ ಬರೆದ ಕವನಗಳು #Trending #kannadaquotes #kannadakavanagalu #puneethrajkumar #KicchaSudeep #ಪ್ರೀತಿ

read more

Jaison Lobo

ಅಂತರ!!

ಈಗೀಗ ದೃಷ್ಟಿಯ ಸಮಸ್ಯೆ ವ್ಯಾಪಿಸಿದೆ.. ಒಂತರಾ..
ತನ್ನತನದಲ್ಲೆ ಕುರುಡಾಗಿದೆ ಮನ್ವಂತರ!!
ಅದಕ್ಕೆ ತಿಳಿಯಾದಾಗಿದೆ, ...
ವಸ್ತು ಮತ್ತು ವ್ಯಕ್ತಿಯ ನಡುವಿನ ಅಂತರ!!..

ಫ್ರಾಜೆಲೊ. #kannadaquotes #kannadapoems 
#kannada #sirigannadamgelge 
#kannadakavana  #kavana #kavanagalu #kannadapoetry #kannadainspirational #kannada

Jaison Lobo

ಪಥವನರಿತ ಪಯಣಿಗ!

ಜೀವನದ ಪಯಣದಿ ನೀ ನಡೆದರೂ..
ಬಿದ್ದು ಎದ್ದು!!
ಅಥವಾ ದುಡುಕಿದರೂ...
ಎದ್ದು ಬಿದ್ದು!!
ಕೆರಳಿದರೂ ಹರಿಹಾಯ್ದು!!
ಅಥವಾ ಕರಗಿದರೂ, ಕರ ಮುಗಿದು!...
......
ಹಲವು ವೇಷವ ಹೊದ್ದು!!
ನಿನ್ನತನವನ್ನು ನಿನ್ನಿಂದ ಕದ್ದು!!
ಉನ್ನತಿಯ ಪಥವನ್ನು ಒದ್ದು!!
ನಿನ್ನನ್ನು ಕುಕ್ಕಿ ಕುಗ್ಗಿಸಲು...
ಹೊಲಸು ಬಾಯ್ಗಾಳಿಂದ ಹಾರುವುದು...
ಚುಚ್ಚು ಮಾತೆಂಬ ಹದ್ದು!!
ಅವರ ಕೊಂಕು ನುಡಿಗಳಿಗಿಲ್ಲ ಮದ್ದು!!
ಪಥವನರಿತ ಪಯಣಿಗನಂತೆ...
ಸತ್ಫಲಗಳನ್ನು ಆಶಿಸದ, ನಿನ್ನ ಸತ್ಕಾರ್ಯಗಳೇ,
ಪ್ರತಿಯಾಗಿ ಮಾಡಲಿ ಸದ್ದು!

ಫ್ರಾಜೆಲೊ. #kannadaquotes #kannadapoetry #sirigannadamgelge #kannada #kannadasahithya #kannadainspirational #kavanagalu #Kannadiga #kavi #instakannada

Chaithra Gowda

kavanagalu #ಆಲೋಚನೆಗಳು

read more

Chaithra Gowda

kavanagalu #ಆಲೋಚನೆಗಳು

read more
loader
Home
Explore
Events
Notification
Profile