Find the Best ಸಂಜೆ Shayari, Status, Quotes from top creators only on Nojoto App. Also find trending photos & videos about ಸಂಜೆವಾಣಿ today, ಸಂಜೆ ಮಾತೠಸಾಂಗà³, ಸಂಜೆ ಮಾತà³, ಸಂಜೆ à²à²¦à²° ಮಳೆ, ಸಂಜೆ ಸಮಯ,
Manjula Murali
ಅನಿಸುವುದು ನೀ ಇಲ್ಲದೆ ಕ್ರೂರಿ ಘಳಿಗೆಯನ್ನು ಹೊತ್ತ ತಂದಿದ್ದು ನೆನಪುಗಳೇ ಎಂಬಂತೆ ಭಾಸವಾಗುವುದು ನಾನಲ್ಲದೇ ನಿನ್ನ ನೆನಪುಗಳ ಸವಿ ಘಳಿಗೆಯನ್ನು ಹೊತ್ತು ತಂದಿದ್ದು ಬೇರೆ ಯಾರೊ ಎಂಬಂತೆ #ಮರೆಯಾಗುತ್ತಿರುವ #ಸಂಜೆ #yqbaba #yqjogi #yqkannada #ಮೌನಗೌರಿ #YourQuoteAndMine Collaborating with VKN
ರಮೇಶ್ ಹಡಪದ
ತಾರೆಗಳ ಸಾನಿಧ್ಯದಿ ಸತ್ಕರಿಸು ಚಂದಿರನ ಬೆಳಕಲಿ ಅಲಂಕರಿಸು ಹಕ್ಕಿಗಳ ಚಿಲಿಪಲಿಯ ಝೇಂಕರಿಸು ಆರ್ಭಟಿಸು ಅಲೆಯ ತಿಳಿಗೊಳಿಸು ಪಟಾಕಿ ಮಾತನಾಡಿ ಚುಂಬಿಸು ಪ್ರೇಮ ಓಲೆಗೆ ಮೊದಲು ಉತ್ತರಿಸು ಓ..ನನ್ನ ಮುದ್ದಿನ ಅರಸು... ಸಪ್ತ ಸಾಗರವ ದಾಟಿಸು... ಸಂಜೆಯಲಿ ಸಹಕರಿಸು #ಹರೀಶ್_ಬರಹ #yqjogi #yqkannada #yqkannadaquotes #yqlovequotes #yqlove #ಸಂಜೆ #ಸಹಕರಿಸು # Collaborating with ಹರೀಶ್ ಎಸ್ ಎಂ
ರಮೇಶ್ ಹಡಪದ
ದೋ ಎಂದು ಒಂದೇ ಸವನೆ ಬಿಡದೆ ಸುರಿಯುವ ಮಳೆಯು ರಾಜ ಬೀದಿಯಲಿ ಸಾಗುವಾಗ ಆಕಾಶದಿಂದ ಬಿದ್ದ ಪುಷ್ಪ ವೃಷ್ಟಿಯಂತೆ.. #picpinterest #rain #ಮಳೆ #ಸಂಜೆ #yqkanmani #ಚುಟುಕು #YourQuoteAndMine Collaborating with shubhageetha
ರಮೇಶ್ ಹಡಪದ
ತಾರೆಗಳು ಬರುವ ಹೊತ್ತಲ್ಲಿ ರವಿ ಮರಯಾಗುವನು ಆ ಗುಡ್ಡದಲಿ ಹೊಳೆಯುವ ಚುಮುನಿ ಬೆಳಕಿನಲಿ ಮರಳಿ ಗೂಡಿಗ್ಹೋಗುವ ಸಮಯದಲ್ಲಿ..!! ದೂರದ ಗುಡ್ಡದಲಿ ತನ್ನ ಕೊನೆಯ ರೂಪ ತೋರಿಸಿ ಅಸ್ತಂಗತನಾಗುವನು ದಿನ ಬೆಳಗೋ ಆ ಭಾಸ್ಕರನು ತಪ್ಪದೇ ಬರುವ ದಿನಕರನು..!! ಎಂದೆನಂತೆ ಅರಳಿ ಬಾಡುವ ಸುಮಗಳು ಬೇಸರದಿ ನೇಸರನ ಕರೆಗೆ ಓಗೊಟ್ಟು ಮುದುಡಿ ಕದಡುವವು..!! ನಾಳಿನ ಕನಸುಗಳನ್ನ ಹೊತ್ತು ತರಲು ಇಂದಿನ ನೋವ ಮರೆತು ಮತ್ತೆ ಬರುವವು ಸೃಷ್ಟಿಯಲಿ ಅರಳಿ ಬಾಳುವುದೊಂದೆ ಕೆಲಸ ಅವನ ದೃಷ್ಟಿಯಲಿ..!! #ಸುಮನ್ #ಸಂಜೆ #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #kannadaquotes #kannada #YourQuoteAndMine Collaborating with ಸುಮನ್ ಎಸ್ ಎಸ್
Amar Gudge
*ಹೈಕು* ಕೆಮ್ಮುಗಿಲಲಿ ಚಿತ್ತಾರ ಬಿಡಿಸಿವೆ ಕಪ್ಪಾದ ಖಗ ಕೊಲಾಬ್ ತೆರೆದಿದೆ ✍🏻🔓ಕೃಪೆ - ರೆಸ್ಟ್ ಝೋನ್ #ಸಂಜೆ #amargude #collab #collabwithme #openforcollab
Chidanand Mayachari
ತೆರೆದಾಕಾಶದೊಳು ಬೆಳ್ಳಕ್ಕಿ ಸಾಲು ಬಂದಂತೆ ಓಡುತ್ತಿವೆ ನಿನ್ನ ನೆನಪುಗಳು ವಲಸೆ ಹೋದವಳ ಸಾಂಗತ್ಯಗಳ ನೆನೆದು ಆದ್ರಗೊಳ್ಳವ ಬದಲು ನನ್ನದೆ ಪ್ರೀತಿಯಲಿ ಬಿದ್ದಿರುವೆ ನಾನು ಕೆಂಪು ಸೂರ್ಯನ ಹಾಗೆ ಒಮ್ಮೆ ಉರಿಯುತ್ತ ಒಮ್ಮೆ ಕರಗುತ್ತ ತಂಗಾಳಿ ಉಲ್ಲಾಸ ನೀಡಿದೆ. #ಸಂಜೆ #yqjogi #yqkannada #collab #collabwithjogi #YourQuoteAndMine Collaborating with YourQuote JogiJogi #csmayachari
ಲಕುಮಿಕಂದ ಮುಕುಂದ
'ಹೆಜ್ಜೆಗಳು' ಇಟ್ಟ ಹೆಜ್ಜೆಗಳ ಹಿಂದಿಟ್ಟವನಲ್ಲ ನಾನು ಸಾಗುತ್ತಿರುವೆ ಮಂದಡಿಯಿಟ್ಟು ಮುನ್ನುಗ್ಗಿ ನಾನು ಕುಗ್ಗಿದಾಗ ಮನಸು ತುಸು ಹಿಗ್ಗಿದಾಗ ಕಷ್ಟಗಳಿಗೂ ಒಗ್ಗಿ ನೆಡೆಯುವೆ ತಗ್ಗಿ ಬಗ್ಗಿ.! ನೆನೆಪಿದೆ ನನಗಿನ್ನೂ ನಿನ್ನ ಆ ಹೆಜ್ಜೆಗಳು ತೊಟ್ಟಿದ್ದೆ ಅಂದು ನೀ, ನಾ ಕೊಟ್ಟ ಕಿರುಗೆಜ್ಜೆ ಮುಖವದು ತುಂಬಿತ್ತು ಸಂತಸದಿ ಲಜ್ಜೆ ತೊದಲ್ನುಡಿಯಲ್ಲೆ ಸಾಗಿತ್ತು ಆ ಸವಿಸಂಜೆ..! ಕವಿ ಭಾವದ ತವಕ,ನವೀನ ಮನಸಿಗೇಕೆ? ಸಾವಿರಾರು ಸ್ವಪ್ನ,ಮನದಿ ಹಸಿರ ಬಯಕೆ ಹಸಿಬಿಸಿ ಭಾವಗಳೆಲ್ಲ ಬರಿದಾಗದ ಬತ್ತಳಿಕೆ ಶರಗಳ ಜೋಡಿಸಿ ನೆಡೆದ ಹೆಜ್ಜೆಗಳ ಎಣಿಕೆ.! #ಲಕುಮಿಕಂದ #yqjogi_kannada #ಹೆಜ್ಜೆಗಳು #ಪ್ರೀತಿಯ ಸಾಲು #ಅವಳು ಮತ್ತು ನಾನು #ಸಂಜೆ
ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ
ಅತ್ತ ರವಿ ಮುಳುಗುತ್ತಿರಲು ಇತ್ತ ಶಶಿ ಬೆಳಗುತ್ತಿರಲು ಭೂರಮೆಗೆ ಸಂಭ್ರಮ ಹಗಲು ಹಸಿರು ಇರುಳು ತಂಗಾಳಿ ಸೊಡರು ಮುಂಜಾನೆಗೆ ಇಬ್ಬನಿ ಮಾಲೆ ಮುಸ್ಸಂಜೆಗೆ ಗೋಧೂಳಿ ರಂಗು ಕಂಡು ಈರ್ವರ ಪೈಪೋಟಿ ಸಂಭ್ರಮಿಸಿದೆ ಈ ಸಮಷ್ಟಿ. 640pm010215 #ಸಂಜೆ ಅತ್ತ ರವಿ ಮುಳುಗುತ್ತಿರಲು ಇತ್ತ ಶಶಿ ಬೆಳಗುತ್ತಿರಲು ಭೂರಮೆಗೆ ಸಂಭ್ರಮ ಹಗಲು ಹಸಿರು
ಲಕುಮಿಕಂದ ಮುಕುಂದ
ಸವಿ ಸುಂದರ ಸಂಜೆಯಲಿ ನನ್ನೊಲವ ಜೊತೆಗೆ ಪಯಣ ಸಾಗಿರಲು ರವಿಯು ನೋಡಿ ಕೆಂಪಾಗುತ್ತಿದ್ದ ನಮ್ಮೋಲವ ನೋಡಲಾಗದೆ ನಾಚಿ ಗಿರಿಕಂದರದಾಚೆ ಜಾರುತಿದ್ದ. #ಸಂಜೆ#ಸೂರ್ಯಸ್ತ#ಪ್ರೇಮಗೀತೆ#ಒಲವು #yqkannadaquote #ಲಕುಮಿಕಂದ #yqlove #YourQuoteAndMine Collaborating with ಶೃತಿ ಶೈವ
ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ
*ಸಂಜೆ ಹಾಯ್ಕು* ಸಂಜೆ ಸೂರ್ಯನು ಮೆಲ್ಲ ಮರೆಯಾಗಲು ಕತ್ತಲಾಯಿತು ಗೂಡಿಗೆ ಹಕ್ಕಿ ಮರಳುವಾಗ ಸಂಜೆ ಮರೆಯಾಯಿತು ಮೂಡಣದಲ್ಲಿ ಇರುಳು ಇಳಿವಾಗ ತಾರೆ ಕಂಡಿತು ಕತ್ತಲ ರಾತ್ರಿ ಬೆಳದಿಂಗಳು ಚೆಲ್ಲಿ ಭಯ ನೀಗಿತು ದಣಿದ ರವಿ ತಂಗಾಳಿ ಜೋಗುಳಕೆ ಮಲಗಿಬಿಟ್ಟ ನೀರವ ಮೌನ ಮುಂಜಾನೆ ಬರುವಾಗ ಮೆಲ್ಲ ಜಾರಿತು 0540ಪಿಎಂ20112019 *ಅಮು ಭಾವಜೀವಿ ಮುಸ್ಟೂರು* #ಸಂಜೆ #ಹಾಯ್ಕು