Nojoto: Largest Storytelling Platform

Best ಸರ್ಕಾರ Shayari, Status, Quotes, Stories

Find the Best ಸರ್ಕಾರ Shayari, Status, Quotes from top creators only on Nojoto App. Also find trending photos & videos aboutಸರ್ಕಾರಿ ಉದ್ಯೋಗ ಮಾಹಿತಿ 2020, ಸರ್ಕಾರಿ ರಜಾ ದಿನಗಳು 2020, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ನೌಕರರ ವರ್ಗಾವಣೆ ನಿಯಮ,

  • 1 Followers
  • 6 Stories

DIVAKAR D

ಸುಮ್ನೆ ತಮಾಷೆಗಂತು ಅಲ್ಲ... ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ಹಣ ಕೊಡು ರೈತರಿಗೆ ಕೆಲವೇ ಪೈಸೆ ಕೊಟ್ಟ ಸರ್ಕಾರ.. ಜನರನ್ನು 4 ದಿನ ತಮ್ಮ ಧಾರವಾಹಿಯನ್ನು ನೋಡುವಂತೆ ಮಾಡಿದ ಸರ್ಕಾರ... #ಸರ್ಕಾರ #ಮೋದಿ #ಸೀತರಾಮನ್ #yqdvkrddots #yqjogi #yqmandya #yqgoogle

read more
ಮೋದಿ ನಿರ್ದೇಶನದ
ಮಹಿಳಾ ಪ್ರಧಾನ
ಧಾರವಾಹಿಯ 
ಏಕೈಕ 
ನಾಯಕಿಯಾದ 
ಅಂತಿಮ ವಿಶೇಷ 
ಸಂಚಿಕೆಯ 
ನಿರ್ಮಲ ಸೀತಾರಾಮನ್ ರವರು
ಇಂದಿಗೆ ತಮ್ಮ 
ಧಾರವಾಹಿಯ
ಕೊನೆಯ ಸಂಚಿಕೆಯೆಂದು
ಹೇಳಿ ಇಷ್ಟು ದಿನ
ಪ್ರೋತ್ಸಾಹಿಸಿದ 
ಮೂಕ ಪ್ರೇಕ್ಷಕ
ಪ್ರಭುಗಳಿಗೆ 
ನಮನ ಸಲ್ಲಿಸಿದರು... ಸುಮ್ನೆ ತಮಾಷೆಗಂತು ಅಲ್ಲ...
ಸ್ವಾವಲಂಬಿ ಭಾರತಕ್ಕಾಗಿ 20 ಲಕ್ಷ ಕೋಟಿ ಹಣ ಕೊಡು
ರೈತರಿಗೆ ಕೆಲವೇ ಪೈಸೆ ಕೊಟ್ಟ ಸರ್ಕಾರ..
ಜನರನ್ನು 4 ದಿನ ತಮ್ಮ ಧಾರವಾಹಿಯನ್ನು  ನೋಡುವಂತೆ ಮಾಡಿದ ಸರ್ಕಾರ...
#ಸರ್ಕಾರ #ಮೋದಿ #ಸೀತರಾಮನ್ #yqdvkrddots #yqjogi #yqmandya #yqgoogle

DIVAKAR D

ಹಾಗೇ ಸುಮ್ಮನೇ ನನಗನ್ನಿಸಿದ್ದು... Ravindra B R ರವರ ಬರಹವನ್ನೊದಿ ಬರೆದಿದ್ದು... ಸರ್ಕಾರವು ಮದ್ಯಪಾನದ ವ್ಯವಹಾರದಿಂದ ಕೋಟ್ಯಂತರ ಆದಾಯ ಗಳಿಸಲು ಬೇರೆ ಮಾರ್ಗವಿಲ್ಲದೆ ರಾಜ್ಯದಾದ್ಯಂತ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ ಮದ್ಯಪಾನದ ಅಂಗಡಿಗಳನ್ನು ‌ತೆರೆಯಿತು.‌ ಇದು ಸರ್ಕಾರಕ್ಕೆ ಆದಾಯ ತರುವ ಮೂಲವಾದರೂ ಜನರು ತಮ್ಮ ಹಣವನ್ನು

read more
ಸರ್ಕಾರವು ಮದ್ಯಪಾನದ ವ್ಯವಹಾರದಿಂದ ಕೋಟ್ಯಂತರ ಆದಾಯ ಗಳಿಸಲು ಬೇರೆ ಮಾರ್ಗವಿಲ್ಲದೆ ರಾಜ್ಯದಾದ್ಯಂತ ‌ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ ‌ಮದ್ಯಪಾನದ ಅಂಗಡಿಗಳನ್ನು ‌ತೆರೆಯಿತು.‌ ಇದು ಸರ್ಕಾರಕ್ಕೆ ಆದಾಯ ತರುವ ಮೂಲವಾದರೂ ಜನರು ತಮ್ಮ ಹಣವನ್ನು ‌ಕುಡಿತದ ಮೇಲೆ ವೆಚ್ಚಮಾಡುವುದರಿಂದ ಅವರ ಜೀವನ ಮಟ್ಟವು ಕುಸಿಯುತ್ತದೆ. ಇದರಿಂದ ಅವರ ಜೀವನ ನಿರ್ವಹಣಾ ವೆಚ್ವ ಅಧಿಕವಾಗಿ ವಾಮಮಾರ್ಗದಲ್ಲಿ ಆದಾಯ ಗಳಿಸಲು ಮುಂದಾಗುತ್ತಾರೆ.‌ ಸಾಮಾನ್ಯ ಜನರಾದರೆ ಸಮಾಜಬಾಹೀರ ಕೃತ್ಯಗಳಲ್ಲಿ ತೊಡಗಿದರೆ ಗೌರವಾನ್ವಿತ ಸರ್ಕಾರದ ದೊರೆಗಳು ಭ್ರಷ್ಟಾಚಾರ, ಲಂಚಗುಳಿತನದಲ್ಲಿ ತೊಡಗಿ ಸಮಾಜದಲ್ಲಿ  ಅನೇಕ ವೈಪರೀತ್ಯಗಳು ಉಂಟಾಗುತ್ತದೆ. ‌ಆದರೂ ಸರ್ಕಾರ ನಡೆಸುವ ಆಧುನಿಕ ಮಹಾರಾಜರುಗಳಿಗೆ ಬೇಕಾಗಿರುವುದು ಹೇಗಾದರೂ ಸರಿಯೇ ತಮ್ಮ ಖಜಾನೆ ತುಂಬಿಸಿಕೊಳ್ಳುವ ಭರದಲ್ಲಿ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಸಾಮಾನ್ಯವಾಗಿ ಸರ್ಕಾರದ ಆದಾಯದ ಗಳಿಕೆಯಲ್ಲಿ ಸಿಂಹಪಾಲು ಹೊಂದಿರುವ ಮದ್ಯಪಾನದ ಆದಾಯಕ್ಕೆ ಪರ್ಯಾಯವಾಗಿ ಬೇರೆ ಆದಾಯದ ಮೂಲವನ್ನು ಕಂಡುಕೊಳ್ಳುವಲ್ಲಿ ಭಾರತದ ರಾಜಕೀಯ ನಿಪುಣಗರಿಷ್ಟೇ ಅಲ್ಲದೆ ಆರ್ಥಿಕ ತಜ್ಞರಿಗೂ ಬಗೆಹರಿಸಲಾಗದ ಸಮಸ್ಯೆಯಾಗಿಯೇ ಉಳಿದಿದೆ. ಜಗತ್ತಿನ ಇತರೆ ದೇಶಗಳಿಗೆ ಮಾದರಿಯಾಗಿ ಅನೇಕ‌ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ತೋರಿಸುವ ಆಸಕ್ತಿಯನ್ನು ಬೆಳೆಸಿಕೊಂಡರು ಭಾರತದ ಆದಾಯದ ಮೂಲಗಳನ್ನು ಪುನರ್ ಸಂಘಟಿಸಿಕೊಳ್ಳುವ ಹಂತದಲ್ಲಿ ಸೋತು ಪ್ರಪಂಚದೆದರೂ ಕುಡಿತದಿಂದ ಅಧಿಕ ಆದಾಯ ಗಳಿಸುವ ದೇಶ ಎಂದು ಹೇಳಿಕೊಳ್ಳುವ ದೌರ್ಭಾಗ್ಯ ಭಾರತದ್ದಾಗಿದೆ. ಇಂತಹ ಹೇಯಕೃತ್ಯವನ್ನು ಸಾರಸಗಾಟಾಗಿ ತಿರಸ್ಕರಿಸಿ ಜನರ ಜೀವನಮಟ್ಟ ಉತ್ತಮಗೊಳಿಸಬೇಕಾದ ಸರ್ಕಾರವೇ ಮದ್ಯದಂಗಡಿ ತೆರೆಯಲು ಒಪ್ಪಿಗೆ ನೀಡುತ್ತದ. ಹಾಗೇ ಸುಮ್ಮನೇ ನನಗನ್ನಿಸಿದ್ದು...
Ravindra B R ರವರ ಬರಹವನ್ನೊದಿ ಬರೆದಿದ್ದು...

ಸರ್ಕಾರವು ಮದ್ಯಪಾನದ ವ್ಯವಹಾರದಿಂದ ಕೋಟ್ಯಂತರ
ಆದಾಯ ಗಳಿಸಲು ಬೇರೆ ಮಾರ್ಗವಿಲ್ಲದೆ ರಾಜ್ಯದಾದ್ಯಂತ 
ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯೂ 
ಮದ್ಯಪಾನದ ಅಂಗಡಿಗಳನ್ನು ‌ತೆರೆಯಿತು.‌ ಇದು ಸರ್ಕಾರಕ್ಕೆ
ಆದಾಯ ತರುವ ಮೂಲವಾದರೂ ಜನರು ತಮ್ಮ ಹಣವನ್ನು

DIVAKAR D

ಲಾಕ್ ಡೌನ್ ಸಮಯದ ವಿಪರ್ಯಾಸ #ಹಾಲು #ಆಲ್ಕೋಹಾಲ್ #ಸರ್ಕಾರ #yqdvkrddots #yqjogi #yqjogi_kannada

read more
ಹಾಲು ತರಲು ಹೋದವನಿಗೆ 
ಅಟ್ಟಾಡಿಸಿ ಲಾಟಿ ಏಟು ಕೊಟ್ಟರು
ಆಲ್ಕೋಹಾಲ್ ತರಲು ಬಂದವನಿಗೆ 
ಸರತಿ ಸಾಲಿನಲ್ಲಿ ನಿಲ್ಲಿಸಿ ರಕ್ಷಕರಾಗಿ
ಭದ್ರತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ
ಆಧುನಿಕ ಯಜಮಾನನ ಅಣತಿಯಂತೆ
ಕಾಯ್ದು ಕೃತಾರ್ಥರಾದರು ಸರ್ಕಾರವೂ
ಸೇವೆಗೈದು ಋಣಮುಕ್ತರಾಗಿ ಸಂಭ್ರಮಿಸಿದರು
ಮದಿರೆಯ ಸುರಪಾನದಿ ತೇಲಿ ಮಿಂದೆದ್ದ‌ವರ
ಜಯಘೋಷದಿ ಕೃತಜ್ಞರಾಗಿ ನಿದ್ದೆ ಹೋದರು... ಲಾಕ್ ಡೌನ್ ಸಮಯದ ವಿಪರ್ಯಾಸ

#ಹಾಲು
#ಆಲ್ಕೋಹಾಲ್
#ಸರ್ಕಾರ
#yqdvkrddots
#yqjogi
#yqjogi_kannada

DIVAKAR D

ಸುರಪಾನದ ಸರತಿ ಸಾಲು ನೋಡಿದಾಗ ಮೂಡಿದ್ದು.. #ಸುರಪಾನ #ಮದ್ಯಪಾನ #ಆದಾಯ #ಸರ್ಕಾರ #yqdvkrddots

read more
ಕಾಡಿ ಬೇಡಿಯಾದರೂ  ತೆರೆಯಿಸಿದರು
ಕನಸು ನನಸಾದಂತೆ ಕುಣಿದು ಕುಪ್ಫಳಿಸಿದರು
ಮದ್ಯದಂಗಡಿಯ ಓಣಿಯಲಿ ಓಡೋಡಿ ಒಟ್ಟಾಗಿ
ಮೈಲುಗಟ್ಟಲೆ ಶಿಸ್ತಾಗಿ ಸುಸ್ತಾಗಿ  ಸಾಮಾಜಿಕ 
ಅಂತರವ ಅರಿತು ಸಾಲಾಗಿ ಕಾಯ್ದು ಬಳಲಿ 
ಬಾಯಾರಿ ಮದಿರೆಯನ್ನು ಹೊಟ್ಟೆಗಿಳಿಸಿಕೊಂಡು
ಒದ್ದಾಡಿ ನರ್ತಕಿಯೇ ನಾಚಿಸುವಂತೆ ನಾಟ್ಯದಿ
ಮೈ ಮರೆತು ನಾಳಿನ ಭವಿಷ್ಯದ ಆದಾಯದ 
ಪರಿಹಾರ ನಿಧಿಗೆ ನಾಮಾಂಕಿತ ಮಾಡಲು 
ಆಗ್ರಹವಿಟ್ಟು ಸುರಪಾನದಿ ಬಿದ್ದು ಮೇಲೆದ್ದರು

ಮಂದಿರ ಮಸೀದಿ ಚರ್ಚ್ ಗಳಲ್ಲಿ ಭಗವಂತನ 
ದರುಶನಕ್ಕೆಂದು ಗಂಟೆಗಟ್ಟಲೆ ಕಾಯ್ದವರನ್ನು
ನೋಡಿ ಕಂಗಳ ಕಣ್ದುಂಬಿ ಆನಂದಿಸಿದ್ದೆವು
ಇಂದಾಯ್ತು ಕುಡುಕರಿಗೆ ವೈಬೋಗದ ದರ್ಶನ
ಸೋಜಿಗವಲ್ಲವೇ ಇದುವೇ ಸುರಪಾನದ 
ಸರತಿ ಸಾಲಲ್ಲಿ ಕಿಚ್ಚು ಹಚ್ಚಲು ಸುಂದರಿಯರೆ
ಹೆಚ್ಚಿ ಮಾನಿನಿಗೂ ಮದಿರೆಗೆ ಸಂಬಂಧವೆಂದರು
ಅಲ್ಲಿ ಇಲ್ಲಿ ನಡೆಯುತ್ತಿತ್ತು ಸುರಪಾನದ ಸಭೆ 
ಕದ್ದು ಮುಚ್ಚಿ ಕಣ್ತೆರೆಸಿದರೀಗ ನಾವು ಯಾರಿಗೂ
ಕಡಿಮೆಯಿಲ್ಲವೆಂದು ಬೇಡಿಕೆ ಕೊಟ್ಟರೂ ಕೊಡ
ಬಹುದು ಮಹಿಳೆಯರಿಗಾಗಿಯೆ ಮದುಪಾನದ 
ಸುಲಭ ಸೌಲಭ್ಯಗಳನ್ನು ಒದಗಿಸಿ ಕಿರುಕಾಣಿಕೆ 
ಆದಾಯಕ್ಕೆ ನೀಡುತ್ತೇವೆಂದು ಮೊರೆ ಇಟ್ಟರು... ಸುರಪಾನದ ಸರತಿ ಸಾಲು ನೋಡಿದಾಗ ಮೂಡಿದ್ದು..


#ಸುರಪಾನ 
#ಮದ್ಯಪಾನ 
#ಆದಾಯ 
#ಸರ್ಕಾರ 
#yqdvkrddots

DIVAKAR D

ಸರ್ಕಾರಕ್ಕೆ ಆದಾಯ ಕುಡುಕರ ಕಿಸೆಯಿಂದ #ಕುಡುಕರು #ಆದಾಯ #ಸರ್ಕಾರ #yqdvkrddots #yqjogi #yqthought

read more
ಜನರ ಸಂರಕ್ಷಿಸುವ ಸರ್ಕಾರದ ಆಟ ಮುಗಿದಿದೆ
ಬೀದಿಗೆ ಜನರನ್ನು ಇಳಿಸಿ ಮದ್ಯದಂಗಡಿ ತೆರೆದು
ಆದಾಯ ಗಳಿಸಿ ತಿಂಗಳ ಸಂಬಳ ಹಂಚಬೇಕಿದೆ
ಸರ್ಕಾರಿ ಬಿಳಿ ಆನೆಗಳ ಅಸೆಗಳ ಜೀವ ತಣಿಸಲು 
ಕುಡುಕರ ಪಾನಮತ್ತ ಜೀವದ ಉಸಿರು ಬೇಕಿದೆ
ಗಾಂಧಿ ರಾಮರಾಜ್ಯ ಕನಸು  ನುಚ್ಚುನೂರಾಗಿದೆ 
ರಾವಣಾಸುರರ ಆಟ ಹದ್ದುಬಸ್ತಿನಲ್ಲಿಡಲಾಗದೆ
ಎಲ್ಲೆ ಮೀರಿ ಸರ್ಕಾರವೇ ಶಿರಬಾಗಿ ಶರಣಾಗಿದೆ.. ಸರ್ಕಾರಕ್ಕೆ ಆದಾಯ ಕುಡುಕರ ಕಿಸೆಯಿಂದ

#ಕುಡುಕರು 
#ಆದಾಯ 
#ಸರ್ಕಾರ 
#yqdvkrddots 
#yqjogi 
#yqthought

DIVAKAR D

ಕುಡಿತದಿಂದ ಆದಾಯ #ಕುಡಿತ #ಆದಾಯ #ಸರ್ಕಾರ #ರಾಜಕಾರಣಿ #yqdvkrddots

read more
ಕುಡಿತಕ್ಕೆ ಬಲಿಯಾದವರ ನೆತ್ತರು ಬಸಿದು 
ಜೀವ ‌ಕಸಿದಾದರೂ ಗಳಿಸಬೇಕು ಆದಾಯ
ಆಳುವವರಿಗೆ‌ ಸರ್ಕಾರ ಕೊಡಬೇಡವೇ‌ 
ಹವಾನಿಯಂತ್ರಿತ ಕೊಠಡಿಯಲ್ಲಿ ಐಷಾರಾಮಿ 
ಲಕ್ಷೋಪಲಕ್ಷ ಸಂಬಳದ ಜೊತೆಗೆ ಅಲ್ಲಲ್ಲಿ
ಸುರಿವ ಸೋನೆ ಮಳೆಯಂತೆ ಲಂಚ ಪೀಕುವ 
ರಕ್ತ ಹೀರುವ ಆಧುನಿಕ ರಕ್ಕಸರಿಗೆ,ಹಣವಿಲ್ಲವಂತೆ
ಜೀವನ ನೂಕಲು ಖರ್ಚಿಗೆ ಕಛೇರಿಗೆ ‌ಬೀಗ ಬಿದ್ದಿದೆ
ಕೋಟ್ಯಂತರ ಹಣ ಬಸಿದು  ಅಳಿದುಳಿದ ಪೈಸೆಯಲ್ಲಿ 
ಉಚಿತ ಕೊಳೆತ ಅಕ್ಕಿ ಬೇಳೆ ನೀಡಿ‌ ಕರ್ಣಾಸುರನೆಂದು
ಬಿರುದು ಪಡೆವ ಇರಾದೆ ಇದೆಯಂತೆ ಇವರಿಗೂ
ಕುಡಿತದ ಚಟಕ್ಕೆ ಹುಚ್ಚರಾಗುವ ಜನರಿರುವವರೆಗೂ 
ಬಲಿಯಾಗಿ ಚಟ್ಟವೇರಿ ಅಳುತ್ತಿರುವ ದಿಕ್ಕೆ ಕಾಣದ
ಜನರಿಗೆ ತೋರಿಸುತ್ತಾರಂತೆ ಹೊಸ ಹಾದಿ ಮಸಣಕ್ಕೆ 
ಕಳಿಸಿ ಮೊಸಳೆ ಕಂಬನಿ ಸುರಿಸಿ‌ ಬುದ್ಧಿಜೀವಿಗಳಂತೆ... ಕುಡಿತದಿಂದ ಆದಾಯ


#ಕುಡಿತ 
#ಆದಾಯ 
#ಸರ್ಕಾರ 
#ರಾಜಕಾರಣಿ 
#yqdvkrddots

Follow us on social media:

For Best Experience, Download Nojoto

Home
Explore
Events
Notification
Profile