Find the Best ನನ್ನವನು Shayari, Status, Quotes from top creators only on Nojoto App. Also find trending photos & videos aboutನನà³à²¨à²µà²¨à³ ಕವನ, ನನà³à²¨à²µà²¨à³ ನನà³à²¨à²µà²¨à³, ನನà³à²¨à²µà²¨à³, ನನà³à²¨à²µà²¨à³ ಫಿಲಂ, ನನà³à²¨à²µà²¨à³ ಪಿಚà³à²šà²°à³,
Priyankas
White ನನ್ನವನು ಮನೆಯ ಮುದ್ದಿನ ಮಗನು ಅರಿಯದ ವಯಸಲ್ಲಿ ಜವಾಬ್ದಾರಿಯನ್ನು ಹೊತ್ತವನು ತನ್ನ ನೋವಾ ಮರೆತು ಮನೆಯವರ ನಗುವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ವನು ಅವನೇ ನನ್ನವನು ❤️ ©Priyankas #love❤ #ನನ್ನವನು #ಯಜಮಾನ ಪ್ರೀತಿ ಪ್ರೀತಿಯ ಕಾಣಿಕೆ
love❤ #ನನ್ನವನು #ಯಜಮಾನ ಪ್ರೀತಿ ಪ್ರೀತಿಯ ಕಾಣಿಕೆ
read moreAshwini Baragali
ಕೇಳದೆ ನನ್ನುಸಿರ ಏರಿಳಿತ ಕಾಣದೇ ಈ ಮನದ ತವಕ ಕೇಳಿಯೂ ದೂರ ನಿಂತಿರುವೆಯಾ ಕಂಡೂ ಮಾತನಾಡದೇ ಹೋಗಿರುವೆಯಾ....!! ಉಸಿರಿನ ತಕಧಿಮಿತ ಕನಸಿನೊಳಗಿನ ಕಾದಾಟ ಮನಸ್ಸೊಳಗಿನ ಮೌನದ ಹೊಯ್ದಾಟ ಕರೆಯದ ಕರೆಯ ಕೇಳಿಯಾದರೂ ಬಾರನೇ ನೀನು....!! ನಿನ್ನೊಡಲ ಆವಾಸ ಬೇಕಿಗ ನಿನ್ನ ಸಹವಾಸ ಸಾಕಾಗಿದೆ ಈ ಪರಿತಾಪ ನೀಡೊಮ್ಮೆ ನಿನ್ನ ದರುಶನವ ನನ್ನವನಾಗಿ ಗೆಳೆಯ ....!! #ಮಂದಾರ #ಕ್ರಾಂತದರ್ಶಿಕಾಂತಿ #ನನ್ನವನು #ಪ್ರೇಮರಚನೆ
#ಮಂದಾರ #ಕ್ರಾಂತದರ್ಶಿಕಾಂತಿ #ನನ್ನವನು #ಪ್ರೇಮರಚನೆ
read moreAshwini Baragali
* ಅವನಿಗಾಗಿ ** ❤ಬರೆಯುವದೆಲ್ಲ ಬಯಸುವದೆಲ್ಲ ಅವನಿಗಾಗಿ❤ ❤ಕನಸು ಕನವರಿಕೆಯ ಭಾವ ಅವನಿಗಾಗಿ❤ ❤ಉಸಿರು ಮಿಡಿತದ ಜೀವ ಅವನಿಗಾಗಿ❤ ❤ನಾನು ನನ್ನೊಳಗಿನ ಪ್ರೀತಿ ಅವನಿಗಾಗಿ❤ 👇👇👇👇👇👇👇👇👇👇👇👇👇👇👇 ......................❤❤👇👇❤❤.................... ನಿನ್ನ ಒಲವಲಿ ಅಂದು ನಿನಗಾಗಿ ಮನದಿ ಸೋತೆ ನಿನ್ನ ಗೆಲುವಲಿ ಇಂದು ಹೃದಯವ ಪಣಕ್ಕಿಟ್ಟು ಸೋತೆ....!!
......................❤❤👇👇❤❤.................... ನಿನ್ನ ಒಲವಲಿ ಅಂದು ನಿನಗಾಗಿ ಮನದಿ ಸೋತೆ ನಿನ್ನ ಗೆಲುವಲಿ ಇಂದು ಹೃದಯವ ಪಣಕ್ಕಿಟ್ಟು ಸೋತೆ....!!
read moreAshwini Baragali
** ವಿರಾಮ ** 🌹🌹🌹🌹🌹🌹 ಭೋರ್ಗರೇವ ಸಾಗರದಿ ಶಾಂತತೆಯ ಹುಡುಕಾಟದಲ್ಲಿದ್ದ ಮೌನ ಜೀವಕ್ಕೆ ಯಾವ ಜಡಿ ಮಳೆಯ ತಂಪೂ ಸಿಗದೇ ಯಾವ ಸಂಪಿಗೆಯ ಕಂಪೂ ಸೂಸದೇ ಮಿಡುಕಾಟದೊಳಗೆ ಜೀವ ಕಲ್ಲಾಗಿ ಹೋಗದೇ ಕೇವಲ ನೆನಪಿನ ಅಲೆಗಳಲಿ ತೇಲಿಸಿ ಹೋದವನು ನೀನು....!! ನಿನ್ನ ಮುನ್ನುಡಿಯ ನಿರೀಕ್ಷೆಯಲ್ಲಿದ್ದ ನನ್ನ ಹೃದಯ ಭಾವಕ್ಕೆ ಯಾವ ಸುಳಿವೂ ಸಿಗದೇ ಯಾವ ಮುನ್ಸೂಚನೆಯೂ ಕೊಡದೇ ಒಮ್ಮೆಯಾದರೂ ಹಿಂತಿರುಗಿ ನೋಡದೇ ಪೂರ್ಣ ವಿರಾಮವಿಟ್ಟು ಹೋದವನು ನೀನು.....!! #ಮಂದಾರ #krantadarshikanti #yqlove_feelings_emotions #yqloveqoutes #ವಿರಾಮ ಇಟ್ಟವನು #ನನ್ನವನು
#ಮಂದಾರ #krantadarshikanti #yqlove_feelings_emotions #yqloveqoutes #ವಿರಾಮ ಇಟ್ಟವನು #ನನ್ನವನು
read moreAshwini Baragali
ಅವನು ಬರುವನೆಂಬ ನಿರೀಕ್ಷೆ ನನ್ನಲಿಲ್ಲ.....😔 ಅವನೂ ನನ್ನವನಾಗುವನೆಂಬ ಹುಚ್ಚು ಭ್ರಮೆಯಲಿಲ್ಲ.....🙃 ಅವನು ತೊರೆದ ಕಾರಣದ ಪ್ರಶ್ನೆಗಳಿಗೆ ಉತ್ತರವಿಲ್ಲ.....💘 ಆದರೆ.......😍😍 ಅವನೊಟ್ಟಿಗೆ ಕೈಹಿಡಿದು ಜೊತೆ ನಡೆದ ನೆನಪುಗಳಿವೆ.....👫 ಅವನು ಕೊಟ್ಟ ಕೈತುತ್ತಿನಲಿ ನಾನು ಅವನವಳೇ ಎಂಬ ಹಸಿ ಸುಳ್ಳಿದೆ....💑 ಅವನ ಇಷ್ಟು ದಿನ ಪ್ರೀತಿಯಲಿ ನಾ ನನ್ನತನವ ಕಂಡುಕೊಂಡ ಭಾವವಿದೆ .....💕 #ಅವನು #ನನ್ನವನು #yqkannada #yqjogi_kannada #krantadarshi #krantadarshikanti
#ಅವನು #ನನ್ನವನು #yqkannada #yqjogi_kannada #krantadarshi #krantadarshikanti
read moreAshwini Baragali
ಸಾಲು ದೀಪಗಳ ಸರತಿಯಲಿ ನಾ ನಿಂತು ಕಾಯುತಿರಲು ಸಾಲು ಸಾಲಾಗಿ ವರುಷಗಳು ಕಂಡು ಕಾಣದಂತೆ ಉರುಳುತಿರಲು ಸಾಲಾಗಿ ಬೆಳಗುವ ಬೆಳಕಿನೊಳಗೆ ಹೊಸ ಮಿಂಚು ಸಂಚರಿಸಿರಲು ಸಾಲದಾಗಿ ಹೋಯ್ತು ಈ ಸಮಯವು ಅವನೊಲವ ಪಡೆಯೋ ಹಂಬಲದೊಳಗೆ ಸಾಲುಗಳ ಸಾಲಿನಲಿ ಸಾವಿರಾರು ಮುಚ್ಚಿಟ್ಟ ಪದಗಳು ಅವನ ಹೆಸರ ಹೇಳಿವೆ ಸಾಲಿನ ಈ ವರುಷವಾದರೂ ಸೇರಬೇಕು ನಾ ಅವನೊಳಗಿನ ಸಂಭ್ರಮದೊಳಗೆ ಸಾಲಾಗಿ ನಿಂತು ಹರಿಸಬೇಕು ಬೆಳಕನು ಪ್ರತಿಕ್ಷಣವೂ ದೀಪಾವಳಿಯ ದೀಪಗಳಂತೆ....!! #ದೀಪಾವಳಿಯ_ಶುಭಾಶಯಗಳು #ದೀಪಾವಳಿ_ಸಂಭ್ರಮ #ದೀಪಗಳ_ಹಬ್ಬ #ದೀಪ #ಅವನು #ನನ್ನವನು #krantadarshikanti
#ದೀಪಾವಳಿಯ_ಶುಭಾಶಯಗಳು #ದೀಪಾವಳಿ_ಸಂಭ್ರಮ #ದೀಪಗಳ_ಹಬ್ಬ #ದೀಪ #ಅವನು #ನನ್ನವನು #krantadarshikanti
read moreAshwini Baragali
** ಪೂರ್ಣ ನಾನು ** --------------------------- ನಾ ರಚಿಸೋ ಕವನಗಳು ನಿನ್ನಿಂದ ಪರಿಪೂರ್ಣ ನಾ ಬರೆಯೋ ಬರವಣಿಗೆ ನಿನ್ನಿಂದ ಭಾವಪೂರ್ಣ ನಾ ಮೂಡಿಸೋ ಪದಗಳು ನೀನಿದ್ದರೆ ಅರ್ಥಪೂರ್ಣ ನಾನಿರೋ ಈ ಬದುಕು ನಿನ್ನಂದಲೇ ಸಂಪೂರ್ಣ ಜೊತೆಯಾಗಿ ಇದ್ದರೆ ನಿನ್ನಂತ ಚೂರ್ಣ ಆದಾಗಲೇ ನಾನೆಂಬುದು ಪೂರ್ಣ .....!!!! #ನಾನು_ನೀನು #ಪರಿಪೂರ್ಣ #ನನ್ನವನು #ಅವನಿಗಾಗಿ_ಸಾಲುಗಳು #yqjogi_kannada #yqjogi_love #krantadarshikanti
#ನಾನು_ನೀನು #ಪರಿಪೂರ್ಣ #ನನ್ನವನು #ಅವನಿಗಾಗಿ_ಸಾಲುಗಳು #yqjogi_kannada #yqjogi_love #krantadarshikanti
read moreAshwini Baragali
** ನೆನಪ ತಂಪು ** ----------------------- ಕನಸದು ಕನವರಿಸುತಿದೆ ನಿನ್ನ ಮನಸ್ಸ ಸೇರಲು ನಿನ್ನ ಹುಡುಕುತ ದಣಿದಿದೆ ಕಂಗಳು ಎಲ್ಲಿಹುದೆನ್ನ ಬಾಳ ನೆರಳು......!! ಎದೆಯಲಿ ವಿರಹದ ಸಾವಿರ ನೋವಿನ ಯಾತನೆ ಮನಗಳ ಮಿಲನವಾಗದೇ ಕೊರಗಿದೆ ಅಗಲಿಕೆಯ ಯಾತನೆ.....!! ಕಾರಣ ನಿನ್ನ ಮುನಿಸಿನ ಸುಳಿಗಾಳಿಯ ಮಂಪರು ಕನಸಿಗೂ ಕೊನೆಯಿರದ ಬರೀಯ ನೆನಪುಗಳ ತಂಪಿನ ನೆಂಪರು........!! ನಿನ್ನ ಸೇರುವ ಕಳವಳ ಮನದೊಳಗಿನ ಹಂಬಲ ಪ್ರೀತಿ ನಂಬಿಕೆಯ ಆಳ ಅರಿಯಲು ಕನಸ ಬೆಂಬಲ.......!! ಅರಿಯದ ಬಂಧವು ಜೊತೆಯಾದೊಡೆ ನಗುವ ನಲಿವಿನ ಕರೆಯೊಲೆ ಸಲುಗೆ ಸ್ನೇಹದಿ ಒಲವ ನೆರಳಲಿ ಹೀಗೆ ಬರೆದೆ ಮನದೋಲೆ..........!! #ನೆನಪುಗಳು #ನನ್ನವನು #ಒಲವಯಾನ #ನಾನು_ನೀನು #ನನ್ನ_ಬರಹ #yqlovequotes #krantadarshikanti
#ನೆನಪುಗಳು #ನನ್ನವನು #ಒಲವಯಾನ #ನಾನು_ನೀನು #ನನ್ನ_ಬರಹ #yqlovequotes #krantadarshikanti
read moreAshwini Baragali
ನಾ ಹೀಗೆ ಕಳೆದು ಹೋಗಬೇಕೆಂದಿರುವೆ ನೀ ನನ್ನೊಳಗೆ ಬೆರೆತು ಉಸಿರಲಿ ಉಸಿರಾಗಿರುವೆ.... #ಉಸಿರಿನೊಡೆಯ #ನನ್ನವನು #yqkannadaquotes #ಕನ್ನಡ_ಬರಹಗಳು #krantadarshikanti
#ಉಸಿರಿನೊಡೆಯ #ನನ್ನವನು #yqkannadaquotes #ಕನ್ನಡ_ಬರಹಗಳು #krantadarshikanti
read moreAshwini Baragali
ಕಣ್ಣು ಕಳೆದು ಮರೆಯಾದ ಪ್ರೀತಿ ಮನಸ್ಸು ತೊರೆದು ದೂರಾದ ಮಮತೆ ನಿನ್ನ ಒಲವಿನ ಅಕ್ಕರೆಯ ಸವಿಮಾತು ಎಂದಿಗೂ ನಿನ್ನೊಳಗೆ ಅವಿತಿರಬೇಕೆಂಬ ಆಸೆ ಹುಚ್ಚಳನ್ನಾಗಿಸಿದೆ ನನ್ನ ಇಂದು ಸೋತು ಶರಣಾಗುಲು ಪ್ರೀತಿ ಯುದ್ಧವಲ್ಲ ಅನುರಾಗ ಅರಳಿದ ಮೇಲೆ ಕೊನೆಯಿರದು ಸಾವಲ್ಲೂ ಜೊತೆಯಾಗ ಬಯಸಿದ ಜೀವಗಳು ಮನಸ್ಸ ಮರೆಮಾಚಿ ಬದುಕುತಿವೆ ಇಂದೆಲ್ಲೋ....!! ಮರೆಯದ ಪ್ರೀತಿ ನೆನಪು #ನನ್ನ_ಬರಹ #ನನ್ನವನು #ಅನುರಾಗ #yqjogi_kannada #yqjogi
ಮರೆಯದ ಪ್ರೀತಿ ನೆನಪು #ನನ್ನ_ಬರಹ #ನನ್ನವನು #ಅನುರಾಗ #yqjogi_kannada #yqjogi
read more