Nojoto: Largest Storytelling Platform

Best ಜಗವಿಮೋಚಕ Shayari, Status, Quotes, Stories

Find the Best ಜಗವಿಮೋಚಕ Shayari, Status, Quotes from top creators only on Nojoto App. Also find trending photos & videos about

  • 1 Followers
  • 206 Stories

DIVAKAR D

ಜಗವಿಮೋಚಕ - ೨೦೬ #ಜಗವಿಮೋಚಕ #ದಿವಾಕರ್ #ಬದುಕು #ಕನ್ನಡ #yqjogi #yqkannada #yqmandya #ಜೀವನ

read more
ಧಧಝಕ ಜಗವಿಮೋಚಕ - ೨೦೬
#ಜಗವಿಮೋಚಕ  #ದಿವಾಕರ್ #ಬದುಕು 
#ಕನ್ನಡ #yqjogi #yqkannada #yqmandya 
#ಜೀವನ

DIVAKAR D

ಜಗವಿಮೋಚಕ - ೨೦೫ #ದಿವಾಕರ್ #ಜಗವಿಮೋಚಕ #ಬದುಕು #ಸಂತಸ #ಕನ್ನಡ #yqjogi #yqmandya #yqthoughts

read more
ಜಗವಿಮೋಚಕ - ೨೦೫
==================
ಜೀವನ ಎಷ್ಟು ಕ್ಷಣಿಕವೂ
ಕೆಲವೇ ಕೆಲವು ಕ್ಷಣಗಳಲ್ಲಿ
ಸಂತಸ ಸಡಗರ ಸಂಭ್ರಮ
ಮರುಕ್ಷಣವೇ ಸಂಕಟದಿ
ನರಳಿ ಮರುಗಿ ನಲಿವು
ಈ ಕ್ಷಣಗಳೇ ಜೀವನದ
ಹಾದಿಗೆ ಪೂರಕವೂ
ಮರೆತರೆ ಬದುಕು 
ತಿರುಗಿ ಬೀದಿಗೆ
ಮಾರಕವೂ.. ಜಗವಿಮೋಚಕ - ೨೦೫
#ದಿವಾಕರ್ #ಜಗವಿಮೋಚಕ #ಬದುಕು #ಸಂತಸ #ಕನ್ನಡ #yqjogi #yqmandya #yqthoughts

DIVAKAR D

ಜಗವಿಮೋಚಕ - ೨೦೪ #ದಿವಾಕರ್ #ಜಗವಿಮೋಚಕ #ಕನ್ನಡ #ಬದುಕು #yqjogi #ನಾನು #ಜೀವನ #yqmandya

read more
ಜಗವಿಮೋಚಕ - ೨೦೪
===============================
"ಹಮ್ಮ ಬಿಮ್ಮುಗಳೇತೇಕೆ ಮೂರು ಕ್ಷಣದ ಬದುಕಿನಲಿ
ನಾನು ನನ್ನದು ನಮ್ಮದೆಂದು ಮೆರೆಯುವುದೇತಕೆ
ಹಗಲಳಿದು ಇರುಳ್ ಕರಗುವ ಸಾವಿನ ಯಾತ್ರೆಯಲಿ
ಯಾರು ಬಂದರೇನು ಇದ್ದರೇನು ಅವನೊಬ್ಬ ಜೊತೆಗಾರ
ಧರ್ಮ ಕರ್ಮದ ಮನದ ತುಂಬೆಲ್ಲಾ ಪಾಲುದಾರನವನು
ಇದ್ದುಬಿಡು ನೀ ಸಕಲಕೂ ಶರಣಾಗಿ ಬಾಯ್ಗೆ ತಂಪಾಗಿ
ಮನದಿ ಕಂಪಾಗಿ ಸುಗಂಧ ಸೂಸುವ ಮಲ್ಲಿಗೆಯಂತೆ" ಜಗವಿಮೋಚಕ - ೨೦೪
#ದಿವಾಕರ್  #ಜಗವಿಮೋಚಕ #ಕನ್ನಡ #ಬದುಕು #yqjogi #ನಾನು #ಜೀವನ #yqmandya

DIVAKAR D

ಜಗವಿಮೋಚಕ - ೨೦೩ #ದಿವಾಕರ್ #ಜಗವಿಮೋಚಕ #ಬದುಕು #ಪ್ರೀತಿ #ಸ್ನೇಹ #ಜೀವನ #yqjogi #yqgoogle

read more
ಜಗವಿಮೋಚಕ - ೨೦೩
====================
ಬದುಕು ಬಂಗಾರವಾಗಬೇಕಾದರೆ
ಹೊಂದಾಣಿಕೆಯೆಂಬ ಹೊನ್ನಿರಬೇಕು
ಇಲ್ಲದಿದ್ದರೆ ಬಾಳೆಲ್ಲ ಬರಿ ಗೋಳು
ಪ್ರೀತಿ ಸ್ನೇಹವೆಲ್ಲಾ ಯಕಶ್ಚಿತ್ ದೂಳು
ಸಂಬಂಧದ ಸರಿಗಮವೆಲ್ಲಾ ನುಚ್ಚುನೂರು
ಒಳಿತೆಲ್ಲಾ ಮನಕೋಟೆಯೊಳಗೆ ಮುಚ್ಚುಮರೆ
ಕೆಡಕೆಲ್ಲಾ ಜೀವನದ ಹಾದಿಯೊಳಗೆ ಡಂಗುರವೇ
ಇದನ್ನರಿತರೆ ಬಾಳೊಂದು ಮಧುರದಿ ಭಾವಗೀತೆ
ಮರೆತರೆ ಜನುಮವೆಲ್ಲಾ ಸುಂಕದ ಶೋಕಗೀತೆ... ಜಗವಿಮೋಚಕ - ೨೦೩
#ದಿವಾಕರ್ #ಜಗವಿಮೋಚಕ #ಬದುಕು #ಪ್ರೀತಿ #ಸ್ನೇಹ #ಜೀವನ #yqjogi #yqgoogle

DIVAKAR D

ನೀನಾರಿಗಾದೆಯೋ ಎಳೆ ಮಾನವ ಭೂತಾಯಿಯ ಒಡಲ‌ ಸೀಳಿದೆ ಜಲ ದೇವಿಯ ಕಲುಷಿತಗೊಳಿಸಿದೆ ವಾಯುದೇವಿಯ ಮಲೀನಗೊಳಿಸಿದೆ ಅಗ್ನಿದೇವನಂತೆ ಆಹುತಿಗೊಳಿಸಿದಂತೆ ಪ್ರಕೃತಿಯಲಿ ಕಣ್ಣೆದುರಿಗೆ ಸಿಕ್ಕಿದೆಲ್ಲವನ್ನೂ ದಾಹದಿ ದಹಿಸಿ ಮಸಣವಾಸಿಯದೆ ನೀನಾರಿಗಾದೆಯೋ ಎಳೆ ಮಾನವ #ಕನ್ನಡ #yqjogi #ದಿವಾಕರ್ #yqmandya #ಜಗವಿಮೋಚಕ #maddur

read more
ಜಗವಿಮೋಚಕ - ೨೦೨
===================
ನೀನಾರಿಗಾದೆಯೋ ಎಳೆ ಮಾನವ
ಭೂತಾಯಿಯ ಒಡಲ‌ ಸೀಳಿದೆ
ಜಲ ದೇವಿಯ ಕಲುಷಿತಗೊಳಿಸಿದೆ
ವಾಯುದೇವನ ಮಲೀನಗೊಳಿಸಿದೆ
ಅಗ್ನಿದೇವನ  ಕಿಡಿಯ ಕೆನ್ನಾಲಿಗೆಯು 
ಕಂಡದ್ದನ್ನೆಲ್ಲಾ ಆಹುತಿಗೊಳಿಸಿದಂತೆ 
ಪ್ರಕೃತಿಯಲಿ ಕಣ್ಣೆದುರಿಗೆ ಬಯಸಿದ್ದನ್ನೆಲ್ಲಾ
ದಾಹದಿ ದಹಿಸಿ ಮಸಣವಾಸಿಯದೆ
ನೀನಾರಿಗಾದೆಯೋ ಎಳೆ ಮಾನವ ನೀನಾರಿಗಾದೆಯೋ ಎಳೆ ಮಾನವ
ಭೂತಾಯಿಯ ಒಡಲ‌ ಸೀಳಿದೆ
ಜಲ ದೇವಿಯ ಕಲುಷಿತಗೊಳಿಸಿದೆ
ವಾಯುದೇವಿಯ ಮಲೀನಗೊಳಿಸಿದೆ
ಅಗ್ನಿದೇವನಂತೆ ಆಹುತಿಗೊಳಿಸಿದಂತೆ 
ಪ್ರಕೃತಿಯಲಿ ಕಣ್ಣೆದುರಿಗೆ ಸಿಕ್ಕಿದೆಲ್ಲವನ್ನೂ 
ದಾಹದಿ ದಹಿಸಿ ಮಸಣವಾಸಿಯದೆ
ನೀನಾರಿಗಾದೆಯೋ ಎಳೆ ಮಾನವ

DIVAKAR D

ಜಗವಿಮೋಚಕ - ೨೦೧ #ಜಗವಿಮೋಚಕ #ದಿವಾಕರ್ #ದೇವರು #ಬದುಕು #yqjogi #yqkannada #yqgoogle #yqmandya

read more
ಜಗವಿಮೋಚಕ - ೨೦೧
=============================
ಕಲ್ಲಿನ ಮೂರ್ತಿಗೆ ದೂಪ ಕಡ್ಡಿ ಕರ್ಪೂರವೇಕೆ 
ಹಾಲು ಮೊಸರು ಬೆಣ್ಣೆ ತುಪ್ಪಗಳ ಮಜ್ಜನವೇಕೆ
ಕಗದ ಜನರೊಳಗಿನ ಧರ್ಮ ಕರ್ಮದ ಪಾಲುದಾರ
ನೀನಾದರೆ ಅವನೊಡಿಬರುವ ಬದುಕಿನ ಸಂತೃಪ್ತಿಯ
ನಗುವಿನಲಿ ಜಗದ ಪರರ ತನ್ನಂತೆ ತಾನ್ ಬಗೆದೊಡೆ ಜಗವಿಮೋಚಕ - ೨೦೧
#ಜಗವಿಮೋಚಕ #ದಿವಾಕರ್ #ದೇವರು #ಬದುಕು #yqjogi #yqkannada #yqgoogle #yqmandya

DIVAKAR D

ಜಗವಿಮೋಚಕ - ೨೦೦ #ಜಗವಿಮೋಚಕ #ದಿವಾಕರ್ #yqjogi #ಬದುಕು #ಕನ್ನಡ #yqgoogle #yqmandya #yqthoughts ಇದು ಜಗವಿಮೋಚಕ ಸರಣಿಯ ೨೦೦ನೇ ಬರಹ...ಹೇಗಿದೆ ಹೇಳಿ...

read more
ಜಗವಿಮೋಚಕ - ೨೦೦
=========================
ಬದುಕಿರುವೆನು ಬದುಕಿಹನೆಂದು ಬದುಕಿ
ಬಂಡಾಯದಿ ಬದುಕ ಸವೆಸಲು ಬೇಡ 
ಬದುಕಿರುವೆನೆಂದು ಬದುಕು ಬದಲಿಸು
ನೋಡು ನಿನ್ನ ಬಾಳು ಬಂಗಾರವಾದೀತೂ
ಬದುಕಿಗೊಂದು ಗಿರಿಮೆಯು ಗುರಿಯೊಂದೆ
ಗುರಿಗೆಂದು ಹಿರಿಯನವನು ಗುರುವೊಬ್ಬನೆ 
ಬಾಳಿನ ಗುರಿಯೇ ಗುರುವಾಗಿರಲೂ 
ಜೀವನದ ಹಾದಿಯಲಿ ಸೋತೆನೆಂಬ ಮಾತೆಲ್ಲಿ ಜಗವಿಮೋಚಕ - ೨೦೦
#ಜಗವಿಮೋಚಕ #ದಿವಾಕರ್ #yqjogi #ಬದುಕು #ಕನ್ನಡ #yqgoogle #yqmandya #yqthoughts 
ಇದು ಜಗವಿಮೋಚಕ ಸರಣಿಯ ೨೦೦ನೇ ಬರಹ...ಹೇಗಿದೆ ಹೇಳಿ...

DIVAKAR D

ಜಗವಿಮೋಚಕ - ೧೯೯ #ಜಗವಿಮೋಚಕ #ದಿವಾಕರ್ #ಸೋಲು #ಗೆಲುವು #ಬದುಕು #yqjogi #yqmandya #yqkannada ಜಗವಿಮೋಚಕ - ೧೯೯ ======================================= ಸೋತೆನೆಂದನೆಬೇಡ ಬಾಳಲಿ ಮರುಹುಟ್ಟು ನಡೆವುದು ಕ್ಷಣದಲಿ ಗೆಲವೊಂದೆಮೆಗೆ ಖುಷಿ ನೀಡಿದ ಕಣವಷ್ಟೇ ನಮ್ಮೆಲ್ಲರ ಬದುಕಲಿ ಸೋಲು ಸೂತಕದ ಛಾಯೆಯಲ್ಲ ಗುರಿಯತ್ತ ನೆಟ್ಟ ನೋಟದಲಿ

read more
ಜಗವಿಮೋಚಕ - ೧೯೯
=======================================
ಸೋತೆನೆಂದನೆಬೇಡ ಬಾಳಲಿ ಮರುಹುಟ್ಟು ನಡೆವುದು ಕ್ಷಣದಲಿ
ಗೆಲವೊಂದೆಮೆಗೆ ಖುಷಿ ನೀಡಿದ ಕಣವಷ್ಟೇ ನಮ್ಮೆಲ್ಲರ ಬದುಕಲಿ 
ಸೋಲು ಸೂತಕದ ಛಾಯೆಯಲ್ಲ ಗುರಿಯತ್ತ ನೆಟ್ಟ ನೋಟದಲಿ
ಗೆಲವೆಂದೊಮಬುದೆ ಅಂತ್ಯವಲ್ಲ ನವಗರಿಗೆ ಹೆಜ್ಜೆಯ ಮೆಟ್ಟಿಲಷ್ಟೇ
ಗೆದ್ದು ಬೀಗಿದ ಮನುಜರೆಲ್ಲಾ ಬೀದಿ ಬದಿಯ ಮಣ್ಣಾಗಿಹರಲೆಲ್ಲಾ
ಸೋತುವರೆಲ್ಲಾ ನಗುವಿನಿಲಿ ನವ  ಬದುಕಿನ ನೊಗ ಹೊತ್ತರಷ್ಟೇ
ಬಾಳೊಂದು ವಿಧಿಯಾಟವಲ್ಲ ಹಠಕ್ಕೆ ಬಿದ್ದು ಗೆದ್ದವರಿಗಷ್ಟೆ ರುಚಿ
ಬದುಕೆಂದು ಹೂವಿನ ಹಾಸಿಗೆಯಲ್ಲ ಕಾಯಕ ಮರೆತ ಮನುಜಗೆ
ದಿಟ್ಟ ನಡೆಯ ದೂರ ದೃಷ್ಟಿಯ ಹಾದಿಯಲಿ ಸೋಲಿಗೊಂದೆ ಗೆಲುವೇ... ಜಗವಿಮೋಚಕ - ೧೯೯ 
#ಜಗವಿಮೋಚಕ #ದಿವಾಕರ್ #ಸೋಲು #ಗೆಲುವು #ಬದುಕು #yqjogi #yqmandya #yqkannada

ಜಗವಿಮೋಚಕ - ೧೯೯
=======================================
ಸೋತೆನೆಂದನೆಬೇಡ ಬಾಳಲಿ ಮರುಹುಟ್ಟು ನಡೆವುದು ಕ್ಷಣದಲಿ
ಗೆಲವೊಂದೆಮೆಗೆ ಖುಷಿ ನೀಡಿದ ಕಣವಷ್ಟೇ ನಮ್ಮೆಲ್ಲರ ಬದುಕಲಿ 
ಸೋಲು ಸೂತಕದ ಛಾಯೆಯಲ್ಲ ಗುರಿಯತ್ತ ನೆಟ್ಟ ನೋಟದಲಿ

DIVAKAR D

ಜಗವಿಮೋಚಕ - ೧೯೮ ಮನದ ಪ್ರಶ್ನೆಗಳಿಗೇಕೆ ಹುಡುಕುವೇ ಉತ್ತರವ... #ಜಗವಿಮೋಚಕ #ದಿವಾಕರ್ #ಮನ #ಪ್ರಶ್ನೆ #ಕನ್ನಡ #ಕನ್ನಡಕವಿತೆ #yqjogi #yqthoughts

read more
ಜಗವಿಮೋಚಕ - ೧೯೮
===========================
ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ
ನೂರಾರು ಗೊಂದಲಗಳ ಗೂಡು ಅದುವೇ 
ಪ್ರಶ್ನೆಗಳು ಮೂಡಿತೇಕೆ  ಮನದೊಳಗೆ 
ಉತ್ತರ ನಿರೀಕ್ಷಿಸಿದಿರ ಪ್ರಶ್ನೆಗಳಿಗೆದುರಾದವರ  
ಎದಯೊಳಗೆ  ಹುಡುಕು ನೀ ನಿನ್ನೊಳಗೆ ಮರು
ಪ್ರಶ್ನೆಗಳು ಬಾಯಿ ತೆರೆದು ನಿನ್ನೆದೆಗೆ ನಾಟುವ 
ಮುನ್ನ ದೊರೆಯಬಹದುತ್ತರ ಕಾಲನ ಕುಣಿಕೆ
ಯಲಿ ಕಳೆಬರದಂತೆ ಕಳೆದು ಹೋಗುವುದೊರಳೆಗೆ
ನಾನು ನನ್ನದೆಂಬ ಅಹಂಕಾರ ಅಡಗಿಸಿ ತಿಳಿನೀರಿನ
ಝರಿಯಂತೆ ಸಾಗುತ್ತಿರಲಿ ಬಾಳು ಮಸಣದ 
ತೇರು  ಹೆಗಲ ಮೇಲೆ ಎಳೆಯುವವರಗೆ
ಮನದ ಪ್ರಶ್ನೆಗಳಿಗೇಕೆ ಹುಡುಕುವೆ ಉತ್ತರವ... ಜಗವಿಮೋಚಕ - ೧೯೮
ಮನದ ಪ್ರಶ್ನೆಗಳಿಗೇಕೆ ಹುಡುಕುವೇ ಉತ್ತರವ...
#ಜಗವಿಮೋಚಕ #ದಿವಾಕರ್ #ಮನ #ಪ್ರಶ್ನೆ #ಕನ್ನಡ #ಕನ್ನಡಕವಿತೆ #yqjogi #yqthoughts

DIVAKAR D

ಜಗವಿಮೋಚಕ - ೧೯೭ #ಜಗವಿಮೋಚಕ #ದಿವಾಕರ್ #ಸಮಯ #ಕನ್ನಡ #ಒಳಿತು #yqjogi #yqmandya #kannadaquotes

read more
ಜಗವಿಮೋಚಕ - ೧೯೭
===================
"ಸಮಯಕ್ಕೆ ತಕ್ಕಂತೆ ರಾಜಿ ಮಾಡಿಕೊಳ್ಳುವುದು
ಉಚಿತವೆಂದೆನಿಸಿದರೂ ರಣಹೇಡಿಗಳ ತಂತ್ರವದು
ಎಷ್ಟೋ ಒಳಿತಿರಲಿ, ಕೆಡುಕಿರಲಿ ನಮ್ಮತನದೊಂದಿಗೆ
ರಾಜಿಯಾಗದೇ ಏಕಾಂಗಿಯಾಗಿ ಹೋರಾಡಿ 
ಸೋಲೋಪ್ಪಿದರೂ  ಗೆಲುವಿನ ನಗೆಯಲಿ
ಸಂಭ್ರಮಿಸುವಾಗ ನನ್ನತನದ ಅರಿವಾಗುವುದು"  ಜಗವಿಮೋಚಕ - ೧೯೭
#ಜಗವಿಮೋಚಕ #ದಿವಾಕರ್ #ಸಮಯ #ಕನ್ನಡ #ಒಳಿತು #yqjogi #yqmandya #kannadaquotes
loader
Home
Explore
Events
Notification
Profile