Nojoto: Largest Storytelling Platform

Best yqjogilove Shayari, Status, Quotes, Stories

Find the Best yqjogilove Shayari, Status, Quotes from top creators only on Nojoto App. Also find trending photos & videos about

  • 4 Followers
  • 20 Stories

DIVAKAR D

#ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqjogilove #yqjogikannada

read more
ಪ್ರೀತಿ ಸ್ನೇಹ ಅಭಿಮಾನಕಿಂತ
ಸ್ವಾಭಿಮಾನಕೆ ಪೆಟ್ಟು ಬಿದ್ದರೆ 
ಸಹನೆಯ ಎಲ್ಲೆ ಮೀರಿ ಹೋಗುತ್ತದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqjogilove #yqjogikannada

DIVAKAR D

#ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqjogi_happiness #yqjogilove

read more
ಯಾಕೋ 
ಮಳೆರಾಯನು
ಮುನಿಸಿಕೊಂಡಿದ್ದಾನೆ
ಅವನಿಗಿರುವ
ಕಷ್ಟವ
ಅರಿಯಲು  
ಚಂದ್ರಯಾನದಂತೆ
ಯಾರನ್ನಾದರೂ
ಕಳಿಸಬಾರದೆ?  #ಕನ್ನಡ #ಕನ್ನಡಕವಿತೆ #ಕನ್ನಡ_ಬರಹಗಳು #yqmandya #yqjogi_happiness #yqjogilove

DIVAKAR D

#ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqmandya #yqjogi_kannada #yqjogilove

read more
ಬಾಳೆಂಬ ಪಯಣದಲಿ
ಬಂಧು ಬಾಂಧವರು
ಪ್ರೀತಿ - ಸ್ನೇಹಕೆ ಪಾತ್ರರದವರೆಲ್ಲ
ನಿಲ್ದಾಣ ನಿಲುಕಿದಾಗ
ತಮ್ಮದೆ ನಗುವಿನಲಿ 
ಮುಳುಗಿ ಮಿಂದವರೆಷ್ಟೊ
ಸವಿನೆನಪ ಕೊಟ್ಟು
ಕಾಡುತಾ ಹೋದವರೆಷ್ಟೊ,
ಮನದಲಿ ಉಳಿದು 
ಮರುಗುತಿರುವರೆಷ್ಟೊ,,,,, #ಕನ್ನಡ_ಬರಹಗಳು #ಕನ್ನಡ #ಕನ್ನಡಕವಿತೆ #yqmandya #yqjogi_kannada #yqjogilove

DIVAKAR D

From Morning to Evening
I can't imagine Without you...
When am full of people or when am alone,
You need not any appreciation,
You are the best part of My soul...

That's is the TASTE OF COFFEE💕💕
 #yqenglishquotes #ywrittings #yqcoffee #yqmandya #yqjogilove #yqjogi_feelings

DIVAKAR D

#ಕನ್ನಡ #ಕನ್ನಡಕವಿತೆ #yqmandya #yqkannadaquotes #yqjogi #yqjogilove #yqdvkrd_dots #yqgoogle

read more
ಪ್ರೀತಿ 
ಸ್ನೇಹ
ವಿಶ್ವಾಸ
ನಂಬಿಕೆಗಳು
ಕೈ‌ಬೊಗಸೆಯಲಿ
ಇಡಿದಿಟ್ಟ
ನೀರಿನಂತೆ..
ಒಮ್ಮೆ ಕೈಯಿಂದ
ಜಾರಿದರೆ
ಬೊಗಸೆಯಷ್ಟೆ
ಖಾಲಿ ಖಾಲಿಯಾಗಿ
ಉಳಿದುಬಿಡುತ್ತವೆ
ಮನಸುಗಳು
ತಮ್ಮ ಋಜುವನ್ನು
ತೋರದೆ‌‌ ತೊಳೆದ 
ಹಸ್ತದಂತೆ.... #ಕನ್ನಡ
 #ಕನ್ನಡಕವಿತೆ
 #yqmandya
 #yqkannadaquotes
#yqjogi
 #yqjogilove
#yqdvkrd_dots
#yqgoogle

DIVAKAR D

#ಕನ್ನಡ #ಕನ್ನಡ_ಬರಹಗಳು #yqjogikannada #yqjogi_feelings #yqmandya #yqjogilove

read more
ನಿನ್ನೊಲುಮೆಯ ತಂಗಾಳಿ
ಬೀಸಿದೆ ಮನದಲಿ
ಸುರಿಯುತಿದೆ ಬೋರ್ಗರೆದು
ಒಲುಮೆಯ ಸವಿನೆನಪ
ಕಾಲದ ಸುಳಿಯಲಿ
ನನ್ನ ನೀ ಮರೆತರೂ
ಬೆಂಬಿಡದೆ ಕಾಡುತಿದೆ ಮನವ....

ನೀ ನನ್ನೊಡನಿದ್ದ ವರುಷಗಳು
ಕ್ಷಣದಂತೆ ಜಾರಿದವು
ನೀನಿರದ ದಿನಗಳು 
ಯುಗದಂತೆ ಕಾಡುತಿವೆ

ಸಾಗರದ ಅಲೆಅಲೆಯು
ಅರಸುತಿವೆ ನಿನ್ನ 
ನೋಟವ ಮುನಿಸಿದೆ
ಅಂದದ ಗೆಳತಿಯ ಸ್ಪರ್ಷವ 
ಬಯಸಿ ಮನ್ನಿಸದೆ 

ನಿನ್ನೊಲುಮೆಯ 
ಅಲೆಯೊಂದು ಮೂಡಿದೆ
ನನ್ನೊಡಲ ಕಡಲನ್ನು ಕೆದಕಿ
ದೂರಾದ ಮನವ ದೂರಿನ 
ಕಾರಣ ಕೇಳುತಿದೆ.... #ಕನ್ನಡ #ಕನ್ನಡ_ಬರಹಗಳು #yqjogikannada #yqjogi_feelings #yqmandya #yqjogilove

DIVAKAR D

#ಕನ್ನಡ #ಕನ್ನಡಕವಿತೆ #yqkannada #yqmandya #yqjogilove #yqjogi_love

read more
ಕನಸೆ ಕಾಡದಿರು 
ನೀ ಹೀಗೆ....
ಪದೆ ಪದೆ ಬಾರದಿರು ನೀ
ಹುಸಿ ನಿರೀಕ್ಷೆಗಳ
ತೋರಿ ಗಾಳಿ ಗೋಪುರದಂತೆ...

ಅಗೊಮ್ಮೆ ಈಗೊಮ್ಮೆ 
ಮನದಲಿ ‌ಆಸೆ ಗೋಪುರ
ಕಟ್ಟಿಸಿ ನನಸಾಗೋ 
ಸಮಯದಿ ನಿರಾಸೆ 
ನೀ ತೋರದಿರು...

ನಂದಗೋಕುಲದಂತ 
ಮನಸಿನಲಿ ಪ್ರತಿ ಕ್ಷಣ 
ಯುದ್ಧ ಆಂತರ್ಯದಲಿ
ನಿನ್ನಿಂದ ಹಟ ಸಾದಿಸಿ
ಫಲವಿಲ್ಲ ನೀ ಸೋಲುವುದು
ಖಚಿತ....

ಎಂದೆಂದಿಗೂ ಬರಲಾರೆನು
ನಿನ್ನ ಹಿಂಬಾಲಿಸಿ
ನನ್ನ ಪ್ರೀತಿಯ ದಿಕ್ಕರಿಸಿ....
ಬಾಳಬೇಕಿದೆ ನನಗೆ 
ನನ್ನವರ ಸಂತಸವ 
ಅನುಸರಿಸಿ....
ಕೈ ಮುಗಿದು ಬೇಡುವೆನೊಮ್ಮೆ 
ಮತ್ತೆ ಮರುಕಳಿಸದೆ 
ಹೋಗಿಬಿಡು ನೀ ದೂರ
ನನ್ನೊಂದಿಷ್ಟು ಕನಿಕರಿಸಿ.... #ಕನ್ನಡ #ಕನ್ನಡಕವಿತೆ #yqkannada #yqmandya #yqjogilove #yqjogi_love

DIVAKAR D

#ಕನ್ನಡ #ಕನ್ನಡ_ಬರಹಗಳು #yqquote #yqjogi_love #yqjogilove #yqmandya #yqemotions #yqenglishpoetry

read more
ನೆನೆನೆನೆದ
ನೆನಪುಗಳು
ನೋವೆ 
ನೀಡಿದರೂ
ನೊಂದ ಗಳಿಗೆಯಲು
ನನ್ನ ಮನದ ಮೂಲೆಯಲ್ಲೊಮ್ಮೆ
ನಲಿವಿನ ಕ್ಷಣಗಳು
ನಯನದಲಿ ಸಾಗರದಂತೆ 
ನೀರಿನ‌ ಬಿಸಿಬುಗ್ಗೆ ಬಸಿದು
ನಿಟ್ಟುಸಿರು ಬಿಟ್ಟಾಗ 
ನೀನಿರಬಾರದಿತ್ತೆ
ನನ್ನ ಎದುರು... #ಕನ್ನಡ #ಕನ್ನಡ_ಬರಹಗಳು #yqquote #yqjogi_love #yqjogilove #yqmandya #yqemotions #yqenglishpoetry

DIVAKAR D

#ಕನ್ನಡ #ಕನ್ನಡ_ಬರಹಗಳು #yqkannadaquote #yqjogi_love #yqmandya #yqjogilove

read more
ಕ್ಷಣ ಕ್ಷಣಕೂ 
ಸಾಯುತಿದೆ ಮನ
ನಿನ್ನ ಮದರಂಗಿಯ 
ಮಾತಿಲ್ಲದೆ 
ನಿ‌ ಸವಿನುಡಿಯದಿದ್ದರೂ
ಬೇಡ ಕೊನಗೆ
ಒಂದು ಕಿಡುನುಡಿಯಾದರೂ
ಸಾಕು ಆ ಜಂಬದ ಮಾತು
ಮನವಿರಿದು ಒಡೋಡಿ
ಬರುವೆ ನಿ ಇರುವಲ್ಲಿಗೆ.... #ಕನ್ನಡ #ಕನ್ನಡ_ಬರಹಗಳು #yqkannadaquote #yqjogi_love #yqmandya #yqjogilove

DIVAKAR D

#ಕನ್ನಡಕವಿತೆ #ಕನ್ನಡ #ಕನ್ನಡ_ಬರಹಗಳು #yqmandya #yqkannadalove #yqkannadapoems #yqjogi_kannada #yqjogilove

read more
ನೀನಿರದ ಗಳಿಗೆಯಲಿ
ಹೊತ್ತಿಗೂ ಗರ ಬಡಿದಿದೆ
ಅದು ಸುಮ್ಮನೆ ಸಾಗದೆ
ನೆನಪುಗಳ ಮರುಕಳಿಸುತಿದೆ
ಮನದ ತುಂಬ ಮೌನದ ಆಕ್ರಂದನ...

ನಿನ್ನ ನೋಟ ಒಡನಾಟ 
ಅವಳ ಮಾತಿನ ಮುತ್ತಿನೂಟ
ಸಿಗದೆ ಕೊರೆಯುವ ಚಳಿ ಚಳಿಯಲೂ
ಕಾನನದ ಕಾಳ್ಗಿಚ್ಚಿಗೆ ಸಿಕ್ಕ  
ಹಕ್ಕಿಯಂತೆ ಹೃದಯ ಬೆಂದು 
ಹೋಗಿದೆ ಅವಳದೆ ನೆನಪಿನಲಿ....

ಕಮರಿವೆ ಮನದ ಮಾಳಿಗೆಯಲಿ
ಮಾರಲಾಗದ ಕನಸುಗಳು ಬಿಕರಿಯಾಗದೆ
ಉಳಿದ ಸರಂಜಾಮುಗಳಂತೆ...
ಹರಡಿಹೋಗಿವೆ ಅಲ್ಲಲ್ಲಿ
ತನ್ನದು ಯಾವುದೆಂದು 
ಗುರುತಿಸಲಾಗದಂತೆ...

ಹೊರಗೆ ಸುರಿಯುವ ಮಳೆಯ
ಮನಮೋಹಕ‌ ನರ್ತನ ಒಳಗೆ
ಸುಡುವ  ತೀರದ ಮನದ 
ಮುಂದಣ ಕೋರಿಕೆಗಳ ದಹನ
ಕಾಯಿಸಿ ಸತಾಯಿಸುತಿಹನು ಕಡು
ಪಾಪಿ ಕಾಲ‌ ಸಮಯಸಾಧಕ... #ಕನ್ನಡಕವಿತೆ #ಕನ್ನಡ #ಕನ್ನಡ_ಬರಹಗಳು #yqmandya #yqkannadalove #yqkannadapoems #yqjogi_kannada #yqjogilove
loader
Home
Explore
Events
Notification
Profile